• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಬಲ್- ಕುರಾನ್‌ ಧರ್ಮಾಧಾರಿತ ಗ್ರಂಥಗಳು, ಭಗವದ್ಗೀತೆ ಧರ್ಮದ ಗ್ರಂಥವಲ್ಲ: ಬಿ.ಸಿ ನಾಗೇಶ್

|
Google Oneindia Kannada News

ಮಂಗಳೂರು, ಏಪ್ರಿಲ್ 27 : ಕ್ರಿಶ್ಚಿಯನ್ ಶಾಲೆಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ ಕ್ಯಾಥೋಯಿಸಂ ತರಗತಿಗಳನ್ನ ನಡೆಸುವಂತಿಲ್ಲ ಶಾಲಾ ಆವರಣದಲ್ಲಿ ಬೈಬಲ್, ಕುರಾನ್‌ ನಂತರ ಧರ್ಮಾಧಾರಿತ ತರಗತಿಗಳಿಗೆ ಅವಕಾಶವಿಲ್ಲ ಎಂದು ಬುಧವಾರ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪುನರುಚ್ಚರಿಸಿದ್ದಾರೆ.

ಈ ವಿಚಾರದ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಳೊಂದಿಗೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್‌ "ಯಾವ ಯಾವ ಶಾಲೆಗಳು ಕರ್ನಾಟಕ ಶಿಕ್ಷಣ ಇಲಾಖೆಗೆ ನೋಂದಣಿ ಮಾಡಿಕೊಂಡಿರುತ್ತವೂ ಆ ಎಲ್ಲಾ ಶಾಲೆಗಳು ಈ ನಿಯಮವನ್ನ ಕಡ್ಡಾಯವಾಗಿ ಪಾಲಿಸಲೇಬೇಕು. ಶಿಕ್ಷಣ ಕಾಯ್ದೆ ಪ್ರಕಾರ ಯಾವುದೇ ಧರ್ಮದ ಪಠ್ಯ ಪುಸ್ತಕವನ್ನ ಶಾಲೆಗಳಲ್ಲಿ ತರಲು ಅವಕಾಶವಿಲ್ಲ. ಆದರೆ ಕೆಲ ಕ್ರಿಶ್ಚಿಯನ್ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬೈಬಲ್‌ ತರಬೇಕು ಎಂಬ ನಿಯಮ ಮಾಡಿದ್ದಾರೆ, ಈ ಬಗ್ಗೆ ಶಾಲಾ ವೆಬ್‌ಸೈಟ್‌ನಲ್ಲೂ ಹಾಕಿಕೊಂಡಿದ್ದು, ಬೈಬಲ್ ನಿಯಮ ಪಾಲಿಸುವವರು ಮಾತ್ರ ಶಾಲಾ ಪ್ರವೇಶಕ್ಕೆ ಅವಕಾಶ ಅಂತ ತಿಳಿಸಿದ್ದಾರೆ. ಹೀಗಾಗಿ ಇಂತಹ ಘಟನೆಗಳು ಶಾಲೆಗಳಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯಕ್ಕೆ ಈ ಬಗ್ಗೆ ಪರೀಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಧರ್ಮಾಧಾರಿತ ಪಠ್ಯ ಬೋಧನೆಗೆ ಅವಕಾಶವಿಲ್ಲ," ಎಂದಿದ್ದಾರೆ.

ಭಗವದ್ಗೀತೆ ಧರ್ಮಾಧಾರಿತವಲ್ಲ:
"ಬೈಬಲ್ ಹಾಗೂ ಕುರಾನ್‌ ಧರ್ಮಾಧಾರಿತ ಗ್ರಂಥಗಳಾಗಿದ್ದು, ಇವುಗಳ ಆಚರಣೆ ಶಾಲೆಗಳಲ್ಲಿ ಬೇಡ. ಆದರೆ ಭಗವದ್ಗೀತೆ ಧರ್ಮಾಧಾರಿತ ಗ್ರಂಥವಲ್ಲ. ಶಾಲೆಗಳಲ್ಲಿ ಭಗವದ್ಗೀತೆಯಲ್ಲಿರುವ ಮೌಲ್ಯಗಳನ್ನ ಹೇಳಿಕೊಡಲಾಗುತ್ತದೆ. ಕುರಾನ್, ಬೈಬಲ್ ರೀತಿ ಧರ್ಮಾಚಾರಣೆ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಭಗವದ್ಗೀತೆಯನ್ನ ಬೈಬಲ್ ಕುರಾನ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ," ಅಂತ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಅಲ್ಲದೆ ಕರ್ನಾಟಕದಲ್ಲಿರುವ ಯಾವುದೇ ಶಾಲೆಗಳಲ್ಲೂ ಧರ್ಮಾಧಾರಿತ ತರಗತಿಗಳನ್ನ ನಡೆಸಲು ಅವಕಾಶವಿಲ್ಲ. ಇತ್ತೀಚೆಗೆ ಕ್ರಿಶ್ಚಿಯನ್ ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ ತರಗತಿಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಈಗಾಗಲೇ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇವೆ. ಈ ಪರೀಶೀಲನೆ ವೇಳೆ ಶಾಲೆಗಳಲ್ಲಿ ಧರ್ಮಾಚರಣೆ ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Christian schools should not conduct cathecism classes, Bible, Quran are not allowed in schools says BC Nagesh

ಸದ್ಯ ರಾಜ್ಯದಲ್ಲಿ ಈಗಾಗಲೇ ಭಾರೀ ಸಂಚಲನ ಮೂಡಿಸಿರುವ ಹಿಜಾಬ್‌ ವಿಚಾರವೇ ಇನ್ನು ಅಂತ್ಯಗೊಂಡಿಲ್ಲ. ಇದರ ನಡುವೆಯೇ ಈಗ ಕ್ರಿಶ್ಚಿಯನ್ ಶಾಲೆಗಳಲ್ಲಿ ಧರ್ಮಧಾರಿತ ಪಠ್ಯಗಳ ಬೋಧನೆ ಮಾಡಲಾಗುತ್ತಿದೆ ಎಂಬ ಹೊಸ ವಿವಾದ ಆರಂಭವಾಗಿದೆ. ಈಗ ಇದನ್ನೇ ರಾಜಕೀಯ ಪಕ್ಷಗಳು ದಾಳವಾಗಿ ಬಳಸಿಕೊಳ್ಳುತ್ತಿದ್ದು, ಒಬ್ಬರ ಮೇಲೊಬ್ಬರು ಕೆಸರೆಚಾಟ ಶುರು ಮಾಡಿಕೊಂಡಿದ್ದಾರೆ. ಆದರೆ ರಾಜಕೀಯ ನಾಯಕರ ಈ ಲಾಭದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣ ಹಾಳಾಗುತ್ತಿರುವುದಂತು ನಿಜ. ಸದ್ಯ ಈಗ ಹೊಸದಾಗಿ ಎದ್ದಿರುವ ವಿವಾದ ರಾಜ್ಯದಲ್ಲಿ ಮತ್ತಷ್ಟು ಕೋಮು ಸಾಮರಸ್ಯ ಹಾಳು ಮಾಡುವ ಸಾಧ್ಯತೆ ಇದೆ.

English summary
Karnataka education minister bc nagesh kicks up a row. says christian schools should not conduct cathecism classes. Bible, Quran are not allowed in schools as they are religious texts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X