ಪ್ರತಿಷ್ಠಿತ ಚಾಣಕ್ಯ ಸಂಸ್ಥೆಯಿಂದ ಮಂಗಳೂರಿನಲ್ಲಿ IAS ಕೋಚಿಂಗ್ ಆರಂಭ
ಮಂಗಳೂರು, ಜುಲೈ 2: ಬಂಟರ ಯಾನೆ ನಾಡವರ ಮಾತೃಸಂಘದ ಸಹಯೋಗದೊಂದಿಗೆ ದೇಶದ ಪ್ರತಿಷ್ಠಿತ ಚಾಣಕ್ಯ ಐಎಎಸ್ ಅಕಾಡೆಮಿ' ಯು ತನ್ನ ತರಬೇತಿ ಕೇಂದ್ರವನ್ನುಮಂಗಳೂರಿನಲ್ಲಿ ಆರಂಭಿಸಲಿದೆ.
UPSC ಯ IAS, IFS, IRS ಹಾಗೂ KAS ನ ತರಬೇತಿಯನ್ನು ಈ ಕೇಂದ್ರದಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ಜೂನ್ 29ರಂದು ಮಂಗಳೂರಿನಲ್ಲಿ ಚಾಣಕ್ಯ ಐಎಎಸ್ ಅಕಾಡೆಮಿ'ಯು 'ಬಂಟರ ಯಾನೆ ನಾಡವರ ಮಾತೃಸಂಘ'ದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಆಗಸ್ಟ್ ತಿಂಗಳಿನಿಂದ ಇಲ್ಲಿನ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗಳ ವಠಾರದಲ್ಲಿ ಮೊದಲ ಬ್ಯಾಚ್ ಆರಂಭಿಸಲಾಗುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದ್ದಾರೆ. ಇದೇ ವೇಳೆ ಚಾಣಾಖ್ಯ ಐಎಎಸ್ ಅಕಾಡೆಮಿ ಸಿಇಒ ಯಚಿನಿತ್ ಪುಷ್ಕರ್ಣ ಉಪಸ್ಥಿತರಿದ್ದರು.












Click it and Unblock the Notifications