ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ್ಪಿನಂಗಡಿ: ತಡರಾತ್ರಿ ಮನೆಗಳ ಕಾಲಿಂಗ್ ಬೆಲ್ ಬಾರಿಸುತ್ತಿರುವವರಾರು?

|
Google Oneindia Kannada News

ಮಂಗಳೂರು, ಡಿಸೆಂಬರ್ 16 : ತಡರಾತ್ರಿ ಮನೆಗಳ ಕಾಲಿಂಗ್ ಬೆಲ್ ಬಾರಿಸಿ ಭೀತಿ ಮೂಡಿಸುತ್ತಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬನ್ನೆಂಗಳದಲ್ಲಿ ಬೆಳಕಿಗೆ ಬಂದಿದೆ.

ತಂಡವೊಂದು ಈ ಕೃತ್ಯ ಎಸಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ತಡರಾತ್ರಿ ಸುಮಾರು 2 ರಿಂದ 3 ಗಂಟೆಯಾದರೆ ಸಾಕು ಮನೆಯ ಕಾಲಿಂಗ್ ಬೆಲ್ ಹೊಡೆಯಲಾರಂಭಿಸುತ್ತವೆ. ಬನ್ನೆಂಗಳ ಶಾಲೆಯ ಬಳಿ ಇರುವ ಯೋಗೀಶ್ ಪೈ ಅವರ ಮನೆಗೆ ಕಳೆದ ರಾತ್ರಿ 2 ಗಂಟೆಗೆ ಸುಮಾರಿಗೆ ಮನೆಯ ಕಾಲಿಂಗ್ ಬೆಲ್ ಬಾರಿಸಿ ಆತಂಕ ಸೃಷ್ಟಿಸುತ್ತಿದ್ದಾರೆ.

Calling Bell rings in the late night houses of Uppinangady

ಯಾರೆಂದು ನೋಡಲು ಮನೆಯವರು ಬಾಗಿಲು ತೆರೆದರೆ ಅಲ್ಲಿ ಯಾರು ಕಾಣಿಸಿಕೊಳ್ಳುವುದಿಲ್ಲ. ಬಳಿಕ ಬಾಗಿಲು ಮುಚ್ಚಿದ ನಂತರ ಮತ್ತೆ ಕಾಲಿಂಗ್ ಬೆಲ್ ಶುರುವಾಗುತ್ತೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಯೋಗೀಶ್ವರ್ ದೂರು ನೀಡಿದ್ದಾರೆ. ಈ ರೀತಿಯ ಘಟನೆಗಳು ಅಲ್ಲಿನ ಇಲ್ಲಿನ ಸುತ್ತಮುತ್ತಲಿನಲ್ಲಿ ಹಾಗಾಗ ಈ ರೀತಿ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಲಾಗಿದೆ.

ರಾತ್ರಿಯ ವೇಳೆ ಮನೆಯ ಬಾಗಿಲು ತೆರೆಸಿ ದುಷ್ಕೃತ್ಯ ಎಸಗಲು ತಂಡವೊಂದು ಈ ಭಾಗದಲ್ಲಿ ಕಾರ್ಯಾಚರಿಸುತ್ತಿದೆ ಎಂದು ಶಂಕಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾತ್ರಿ ಗಸ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ತಡರಾತ್ರಿ ಈ ರೀತಿಯ ಘಟನೆಗಳಾದರೆ ಕೂಡಲೇ ಉಪ್ಪಿನಂಗಡಿ ಠಾಣೆಗೆ ಕರೆ ಮಾಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

English summary
Calling Bell rings in the late night houses of Bannengala Uppinangady in Dakshina Kannada district. The native are very scare about this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X