ಏರ್ ಟೆಲ್ ಸಿಮ್ ಖರೀದಿಸಿದರೆ 1 ಕೆಜಿ ಈರುಳ್ಳಿ ಉಚಿತ!

ಮಂಗಳೂರು, ಆ. 30 : ಜಗತ್ತಿನಲ್ಲಿ ಸ್ಪರ್ಧೆ ಯಾವುದಕ್ಕಿಲ್ಲ ಎನ್ನುವ ಕಾಲ ಇದು. ಯಾಕೆಂದರೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧೆ ಇಲ್ಲ ಎನ್ನುವ ಸ್ಥಿತಿಯೇ ಇಲ್ಲ. ಆದರೂ ಈ ಸ್ಪರ್ಧೆಗಳಲ್ಲಿ ಅದೆಂಥಾ ವೈವಿಧ್ಯತೆ ಇರುತ್ತದೆ ಎನ್ನುವುದೂ ಕೂಡಾ ರೋಚಕ. ಅಂಥದ್ದೇ ಕಥೆ ಇಲ್ಲಿದೆ ಓದಿ.

ಇದು ಏರ್ ಟೆಲ್ ಮೊಬೈಲ್ ಸಂಪರ್ಕ ಕಲ್ಪಿಸುವುದಕ್ಕೆ ಗ್ರಾಹಕರನ್ನು ಸೆಳೆಯಲು ಮಾಡಿರುವ ಹೊಸ ತಂತ್ರಗಾರಿಕೆ. ಒಂದು ಕೊಂಡರೆ ಮತ್ತೊಂದು ಫ್ರೀ ಎನ್ನುವುದು ಈಗ ಹಳೆಯ ತಂತ್ರಗಾರಿಕೆ. ಈಗ ಈರುಳ್ಳಿ ಬೆಲೆ ಕೇಳಿದರೆ ಕಣ್ಣಲ್ಲಿ ನೀರು ಸುರಿಯುತ್ತದೆ. ಇದನ್ನೇ ನೆಪವಾಗಿಟ್ಟುಕೊಂಡು ಏರ್ ಟೆಲ್ ಪೋರ್ಟ್ ಮಾಡಿಸಿದರೆ 1 ಕೆಜಿ ಈರುಳ್ಳಿ ಉಚಿತ ಕೊಡುಗೆ ಪ್ರಕಟಿಸಲಾಗಿದೆ. [ಕಣ್ಣೀರುಳ್ಳಿ: ಸಾಮಾಜಿಕ ತಾಣದಲ್ಲಿ ಕಂಡಿದ್ದು, ಕೇಳಿದ್ದು]

onion

ಒಂದು ಏರ್ ಟೆಲ್ ಸಿಮ್ ಖರೀದಿಸಿದರೆ ಬರೋಬ್ಬರಿ 100 ರೂಪಾಯಿ ಗ್ರಾಹಕರಿಗೆ ವಾಪಸ್ ಅದೂ ಈರುಳ್ಳಿ ರೂಪದಲ್ಲಿ. ಇಂಥ ಪ್ರಚಾರಕ್ಕೆ ಮುಂದಾಗಿರುವುದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ, ಇಂಥ ಕೊಡುಗೆ ಹರಿದಾಡುತ್ತಿದೆ, ಚಿತ್ರ ಸಮೇತ. [ಈರುಳ್ಳಿ ಸೆಂಚುರಿ ಬಾರಿಸಲ್ಲ]

ಯಾವ ಪುಣ್ಯಾತ್ಮ ಈ ಆಫರ್ ಕೊಡುತ್ತಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಇಲ್ಲ, ಆದರೆ, ಕರಾವಳಿಯಲ್ಲಿ ಈರುಳ್ಳಿಗೆ ನೀರುಳ್ಳಿ ಎನ್ನುತ್ತಾರೆ, ಬೇರೆ ಪ್ರದೇಶಗಳಲ್ಲಿ ಉಳ್ಳಾಗಡ್ಡಿ, ಈರುಳ್ಳಿ ಮುಂತಾದ ಹೆಸರುಗಳಿವೆ. ಮೋಜಿಗಾಗಿ ಇಂಥ ಕೊಡುಗೆಯ ಆಮಿಷ ಒಡ್ಡಿರಬಹುದೇ?.

ಅಂದಹಾಗೆ ಈರುಳ್ಳಿ ಬೆಲೆ ಅರ್ಧ ಶತಕ ಬಾರಿಸಿ ತಿಂಗಳುಗಳೇ ಕಳೆದಿವೆ. ಬೆಂಗಳೂರಿನಲ್ಲಿ ಸದ್ಯ ಕೆಜಿಗೆ 80-85 ರೂ. ಇದೆ. ಇಂದಿನ ದಿನಗಳಲ್ಲಿ ಮನೆಯಲ್ಲಿ ಈರುಳ್ಳಿ ಇಟ್ಟುಕೊಂಡವರೇ ಶ್ರೀಮಂತರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+