ಮಂಗಳೂರು: ದೋಣಿ ಮುಳುಗಡೆ, ಓರ್ವ ಮೀನುಗಾರ ನಾಪತ್ತೆ, 6 ಮಂದಿ ರಕ್ಷಣೆ
ಮಂಗಳೂರು, 30: ನಗರದ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಂಪಾಡಿ ಸಮೀಪದ ಮೀನಕಳಿಯದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡ ದೋಣಿಯೊಂದು ಭಾನುವಾರ ಮಧ್ಯಾಹ್ನ ಅರಬ್ಬೀ ಸಮುದ್ರದಲ್ಲಿ ಮುಳುಗಿದೆ.
ಈ ಅವಘಡದಲ್ಲಿ ಮೀನುಗಾರರೊಬ್ಬರು ನಾಪತ್ತೆಯಾಗಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ. ಉಳ್ಳಾಲದ ಅಶೋಕ್ ಮೆಂಡನ್ ಎಂಬುವವರಿಗೆ ಸೇರಿದ ನಾಡದೋಣಿಯಲ್ಲಿ ಏಳು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಮೀನಕಳಿಯ ಬಳಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮುಳುಗಿದೆ.

ಸಮೀಪದಲ್ಲಿ ಮತ್ತೊಂದು ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರು ಮುಳುಗುತ್ತಿದ್ದ ದೋಣಿಯಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಪ್ರೇಮನಾಥ್ (54) ಎಂಬುವವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ.












Click it and Unblock the Notifications