ದೇವಸ್ಥಾನದ ಕೊಳಕ್ಕೆ ಬಿದ್ದ ಕಾಡುಕೋಣವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು

ಮಂಗಳೂರು, ಮೇ 05:ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ ಹಿಂಡು ಕಾಡಂಚಿನ ಊರುಗಳಿಗೆ ನುಗ್ಗುತ್ತಿವೆ.ರಾತ್ರಿ ಹೊತ್ತಿನಲ್ಲಿ ಆ ಭಾಗದಲ್ಲಿ ಕಾಡುಕೋಣಗಳ ಓಡಾಟ ಹೆಚ್ಚಾಗಿದೆ. ಆದರೆ ಕಾಡುಕೋಣದ ಮರಿಯೊಂದು ದೇವಸ್ಥಾನದ ಕೊಳಕ್ಕೆ ಬಿದ್ದ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆ ಮಹಾವಿಷ್ಣು ದೇವಸ್ಥಾನದ ಬಳಿ ಇರುವ ತೆರೆದ ಕೊಳಕ್ಕೆ ಕಾಡುಕೋಣ ಆಕಸ್ಮಿಕವಾಗಿ ಬಿದ್ದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಕೊಳದ ಸುತ್ತ ಕಾಡುಕೋಣ ನೋಡಲು ಜಮಾಯಿಸಿದ್ದರು.

Bison falls into pond near Sullia

ರಾತ್ರಿ ಹೊತ್ತಿನಲ್ಲಿ ಆ ಭಾಗದಲ್ಲಿ ಕಾಡುಕೋಣಗಳ ಹಿಂಡಿನ ಜೊತೆ ಸಾಗುವಾಗ ಆಕಸ್ಮಿಕವಾಗಿ ಕೊಳಕ್ಕೆ ಬಿದ್ದಿರಬಹುದು ಹೇಳಲಾಗಿದೆ.ಕೊಳಕ್ಕೆ ಕಾಡುಕೋಣ ಬಿದ್ದ ವಿಷಯವನ್ನು ಕೂಡಲೇ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಕೋಣವನ್ನು ಕೊಳದಿಂದ ಮೇಲೆಕ್ಕೆತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+