ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಗೋಮಾಂಸ ತ್ಯಾಜ್ಯ: ಹಿಂದೂ ಹಬ್ಬಗಳಿಗೆ ನಿಯಮ ರೂಪಿಸುವ ಸರ್ಕಾರಕ್ಕೆ ಕಣ್ಣಿಲ್ಲವೇ: ಯತ್ನಾಳ್ ಗರಂ
ಮಂಗಳೂರು, ಜನವರಿ 02: ಧರ್ಮಸ್ಥಳಕ್ಕೆ ತೆರಳುವವ ಭಕ್ತರು ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಆದರೆ ಈ ನೇತ್ರವಾತಿ ಪುನದಿಯಲ್ಲಿ ಗೋಮಾಂಸದ ತ್ಯಾಜ್ಯ ಎಸೆಯಲಾಗಿದೆ. ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ನದಿ ತಟದಲ್ಲಿ ಮೂಟೆ ಮೂಟೆ ತ್ಯಾಜ್ಯ ಸಿಕ್ಕಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಹಿಂದೂಪರ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದೂಗಳ ಹಬ್ಬಕ್ಕೆ ನಿಯಮ ರೂಪಿಸುವ ರಾಜ್ಯ ಸರ್ಕಾರಕ್ಕೆ ಕಣ್ಣಿಲ್ಲವೇ ಎಂದು ಗುಡುಗಿದ್ದಾರೆ.

ಧರ್ಮಸ್ಥಳದ ಪವಿತ್ರ ಸನ್ನಿಧಿಯಲ್ಲಿರುವ ನೇತ್ರಾವತಿಯ ಉಪ ನದಿಯಲ್ಲಿ ಗೋ ಮಾಂಸ ತ್ಯಾಜ್ಯವನ್ನು ಹಾಕಿರುವುದು ನಿಜಕ್ಕೂ ಹೇಯ ಹಾಗೂ ಖಂಡನೀಯ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಗಣೇಶ ಚತುರ್ಥಿ, ದೀಪಾವಳಿ ಆಚರಿಸುವುದಕ್ಕೆ ಪುಟಗಟ್ಟಲೆ ನಿಯಮಾವಳಿ ರೂಪಿಸುವ ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇದು ಕಣ್ಣಿಗೆ ಬೀಳದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ದೂರಿದ್ದಾರೆ.
ಹಿಂದೂ ಪವಿತ್ರ ಸ್ಥಳದ ನೈರ್ಮಲ್ಯವನ್ನು ಕೆಡಿಸುತ್ತಿರುವವರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಹಾಗೂ ನೇತ್ರೆಯ ಪಾವಿತ್ರ್ಯತೆಯನ್ನು ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದ್ದಾರೆ.
ಮೂಟೆಗಟ್ಟಲೇ ಗೋಮಾಂಸ ತ್ಯಾಜ್ಯ
ಪಶ್ಚಿಮ ಘಟ್ಟದ ಧಾರ್ಮಿಕ ಕ್ಷೇತ್ರಗಳ ಪೈಕಿ ಪ್ರಸಿದ್ಧಿ ಪಡೆದಿರುವ ಧರ್ಮಸ್ಥಳದ ಪಕ್ಕದಲ್ಲೇ ನೇತ್ರಾವತಿ ನದಿ ಹರಿಯುತ್ತದೆ. ಇದರ ಉಪನದಿಯಾದ ಮೃತ್ಯುಂಜಯ ನದಿಗೆ ಕಿಡಿಗೇಡಿಗಳು ಗೋಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಮೂಟೆಗಳಲ್ಲಿ ತಂದು ಎಸೆದು ಹೋಗಿದ್ದಾರೆ. ಇದು ಇದರಿಂದ ಭಕ್ತರ ಭಾವನೆಗೆ ಧಕ್ಕೆ ಆಗಿದೆ. ಹಿಂದೂಗಳ ಪವಿತ್ರ ಸ್ಥಳದಲ್ಲಿ ಬೇಕು ಅಂತಲೇ ನೈರ್ಮಲ್ಯ ಕೆಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮೂಟೆಗಳಲ್ಲಿ ಗೋವುಗಳ ತಲೆ, ಮಾಂಸ ಸೇರಿದಂತೆ ಇನ್ನಿತರ ತ್ಯಾಜ್ಯ ಕಂಡು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮದ ಹೊಳೆಯ ದಡದಲ್ಲಿ ಈ ರೀತಿ ತ್ಯಾಜ್ಯ ಬೀಸಾಡಲಾಗಿದೆ. ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಧರ್ಮಸ್ಥಳಕ್ಕೆ ಬರುವವರು ಮಾತ್ರವಲ್ಲದೇ ನಿತ್ಯ ದೇವಸ್ಥಾನದ ಧಾಮಿರ್ಕ ಕೈಂಕರ್ಯಗಳಿಗೆ ನೇತ್ರಾವತಿ ನದಿ ನೀರು ಬಳಕೆ ಆಗುತ್ತದೆ. ನದಿ ಪಾತ್ರದ ಜನರು ಸಹ ದೈನಂದಿನ ಬಳಕೆಗೆ ನದಿ ನೀರು ಬಳಸುತ್ತಾರೆ. ಹೀಗಿದ್ದಾಗ ಜನರ ಭಾವನೆಗೆ ಕುಂದುಂಟು ತರಲು, ನದಿ ಅಪವಿತ್ರಗೊಳಿಸುವ ದುರುದ್ದೇಶದಿಂದಲೇ ಹೀಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಧುರುಳರನ್ನು ಕೂಡಲೇ ಶಿಕ್ಷಿಸಬೇಕು ಎಂದು ಭಜರಂಗದಳ ಕಾರ್ಯಕರ್ತರು, ಹಿಂದೂಪರ ಸಂಗಟನೆಗಳು ಸದಸ್ಯರು ಆಗ್ರಹಿಸಿದ್ದಾರೆ.












Click it and Unblock the Notifications