ಮಂಗಳೂರಿನಲ್ಲಿ ಮಾ.30ರಂದು ಬ್ಯಾರಿ ಜಾನಪದ ಸಾಂಸ್ಕೃತಿಕ ಲೇಸ್
ಮಂಗಳೂರು, ಮಾರ್ಚ್ 28:ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಾರ್ಚ್ 30ರಂದು ಸಂಜೆ 7.00 ಗಂಟೆಗೆ ಗುರುಪುರ ಕೈಕಂಬದ ಆದರ್ಶ ನಗರದಲ್ಲಿ "ಬ್ಯಾರಿ ಜಾನಪದ ಸಾಂಸ್ಕೃತಿಕ ಲೇಸ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಕಾಡೆಮಿ ಅಧ್ಯಕ್ಷರಾದ ಕರಂಬಾರ್ ಮಹಮದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಾಲೀಮು ಮಾಸ್ಟರ್ ಗಳಾದ ಎಂ.ಜಿ. ಅಬ್ದುಲ್ಲ ಗುರುಪುರ, ಎಂ.ಜಿ. ಶಾಹುಲ್ ಹಮೀದ್, ತಾಲೀಮು ಕಲಿಗಾರರಾದ ಇಬ್ರಾಹಿಂ ನಡುಗುಡ್ಡೆ, ಅಮೀರ್ ಗುರುಪುರ ಇವರುಗಳನ್ನು ಸನ್ಮಾನಿಸಲಾಗುವುದು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾತ್ರಿ 8.30 ಗಂಟೆಗೆ ನಡೆಯಲಿರುವ ಬ್ಯಾರಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರು ವಹಿಸಲಿದ್ದು, ಶರೀಫ್ ನಿರ್ಮುಂಜೆ, ಆರೀಸ್ ತೋಡಾರ್, ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ಲುಕ್ಮಾನ್ ಅಡ್ಯಾರ್, ಕಾ ಶಿಖ ಬಜ್ಪೆ, ಇಬ್ರಾಹಿಮ್ ಖಲೀಲ್ ಪುತ್ತೂರು ಕವಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 7.00 ರಿಂದ 8.00ಗಂಟೆಯವರೆಗೆ ಶರೀಫ್ ಬೆಳ್ಳಾರೆ ಮತ್ತು ಬಳಗದಿಂದ ಬ್ಯಾರಿ ಹಾಡು, ರಾತ್ರಿ 9.00ಗಂಟೆಯಿಂದ 10.00ಗಂಟೆಯವರೆಗೆ ಎಂ.ಜಿ.ಎಂ. ತಾಲೀಮು ಸ್ಪೋರ್ಟ್ಸ್ ಇವರಿಂದ ತಾಲೀಮು ಕಲಿ ನಡೆಯಲಿದೆ.











Click it and Unblock the Notifications