ಮಗಳ ಮೇಲೆ ರೇಪ್ ಮಾಡ್ತಿದ್ದ ಅಪ್ಪ ಬಂಧನ
ಮಂಗಳೂರು, ಜೂ.29: ಕಳೆದ ಮೂರ್ನಾಲ್ಕು ತಿಂಗಳಿಂದ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ಕಾಮುಕ ತಂದೆ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಜಪೆ ಸಮೀಪದ ಕರಂಬಾರು ಅಂಬೇಡ್ಕರ್ ನಗರದ ಚಂದ್ರಶೇಖರ್ (46) ಎಂಬಾತನನ್ನು ಬಜಪೆ ಪೊಲೀಸರು ಬಂಧಿಸಿದ್ದು. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಡುಬಿದ್ರಿ ನಿವಾಸಿ ಚಂದ್ರಶೇಖರ್ ಕರಂಬಾರಿನ ಮಹಿಳೆಯನ್ನು ವಿವಾಹವಾಗಿದ್ದ. ಆತನ ಪತ್ನಿ ಎಂಟು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ ಬಳಿಕ ಮನೆಗೆ ಹೆಚ್ಚಾಗಿ ಬರುತ್ತಿರಲಿಲ್ಲ. ಈ ಮನೆಯಲ್ಲಿ ಪತ್ನಿಯ ತಂಗಿಯ ಜತೆಗೆ ಈತನ ಮಗಳು ವಾಸಿಸುತ್ತಿದ್ದಳು.

ಈ ಮಧ್ಯೆ ದಲಿತ ಸಂಘಟನೆಗಳು ಒಂದಾಗಿ ಬಾಲಕಿಯನ್ನು ಬೆಳ್ತಂಗಡಿಯಲ್ಲಿ ವಸತಿ ಶಾಲೆಗೆ ಸೇರಿಸಿ ಆಕೆಯ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದರು. ಮೂರ್ನಾಲ್ಕು ತಿಂಗಳ ಹಿಂದೆ ಅಲ್ಲಿಂದ ಬಿಟ್ಟು ಬಂದು ಮನೆಯಲ್ಲೇ ಇದ್ದು, ಆಗಿನಿಂದ ಚಂದ್ರಶೇಖರ್ ಮತ್ತೆ ಕರಂಬಾರಿಗೆ ಆಗಮಿಸಿ ಅತ್ಯಾಚ್ಯಾರ ಎವೆಸಗುತ್ತಿದ್ದ ಎನ್ನಲಾಗಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಚೈಲ್ಡ್ ವೆಲ್ಫೇರ್ ಸಂಸ್ಥೆ ದಾಳಿ ನಡೆಸಿ ಬಜಪೆ ಪೊಲೀಸರ ವಶಕ್ಕೆ ನೀಡಿದ್ದರು. ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಜಿಲ್ಲಾ ವೆನ್ಲಾಕ್ ಆಸ್ಪತೆಗೆ ದಾಖಲಿಸಲಾಗಿದೆ.
ಬೆಳಗಾವಿಯಲ್ಲಿ ಇಂಥದ್ದೇ ಘಟನೆ ಭಾನುವಾರ ವರದಿಯಾಗಿದ್ದು, ಸ್ಥಳೀಯರು ಕಾಮುಕ ತಂದೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಬಾಲಕಿಯನ್ನು ರಕ್ಷಿಸಿರುವ ಸುದ್ದಿ ಬಂದಿದೆ.












Click it and Unblock the Notifications