ಅಣುಶಕ್ತಿ, ಜ್ಞಾನಶಕ್ತಿ, ಮತದಾನ ಬಗ್ಗೆ ಕಲಾಂ ಪಾಠ
ಮಂಗಳೂರು, ಏ.3: ಮುಂದಿನ ದಶಕದಲ್ಲಿ ಭಾರತ ವಿಶ್ವದಲ್ಲೇ ಕಡಿಮೆ ವೆಚ್ಚದಲ್ಲಿ ಹೆಚ್ಚು ಸುರಕ್ಷಿತ ಅಣುಶಕ್ತಿಯ ಸ್ಥಾವರ ಹೊಂದಿರುವ ರಾಷ್ಟ್ರವಾಗಿ ಮೂಡಿಬರಲಿದೆ ಎಂದು ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದ್ದಾರೆ.ಕರಾವಳಿ ಭಾಗದ ವಿದ್ಯಾರ್ಥಿಗಳ ಜತೆ ಎರಡು ದಿನಗಳ ಸಂವಾದ ನಡೆಸಿದ ಅಬ್ದುಲ್ ಕಲಾಂ ಅವರು ಮತದಾನದ ಮಹತ್ವದ ಬಗ್ಗೆ ಕೂಡಾ ಯುವ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮದ ನಂತರ ಲೋಕಸಭೆ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಿಮ್ಮೆಲ್ಲರ ಹಕ್ಕು ಎಂದರು.
ದೇರಳಕಟ್ಟೆಯಲ್ಲಿರುವ ಯೆನೆಪೊಯ ವಿಶ್ವವಿದ್ಯಾನಿಲಯ ಕಾಲೇಜಿನ ಸಭಾಂಗಣದಲ್ಲಿ ಯೆನೆಪೊಯ ವಿಶ್ವ ವಿದ್ಯಾನಿಲಯದ ದಂತ ವೈದ್ಯಕೀಯ ಕಾಲೇಜಿನ ಎರಡನೆ ಬ್ಲಾಕ್ ಉದ್ಘಾಟಿಸಿದರು. ನಂತರ ಬಳಿಕ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಜಪಾನಿನ ಅಣು ಸ್ಥಾವರಗಳು ಸಮುದ್ರ ಮಟ್ಟದಿಂದ ಕೇವಲ 2 ಮೀಟರ್ ಎತ್ತರದಲ್ಲಿದೆ. ಇದರಿಂದಾಗಿ ಸುನಾಮಿಯಂಥ ಪ್ರಾಕೃತಿಕ ಆಪತ್ತುಗಳಿಗೆ ಅದು ತುತ್ತಾಗುವ ಅಪಾಯ ಹೆಚ್ಚು. ಆದರೆ ಭಾರತದ ಅಣು ಸ್ಥಾವರಗಳು ಸಮುದ್ರ ಮಟ್ಟದಿಂದ 12 ಮೀ. ಎತ್ತರದಲ್ಲಿರುವುದರಿಂದ ಅಂತಹ ಅಪಾಯ ಕಡಿಮೆ. ಅಲ್ಲದೇ ಭಾರತದಲ್ಲಿ ಥೋರಿಯಂ ಸಂಪನ್ಮೂಲ ಲಭ್ಯವಾಗುತ್ತಿದ್ದು, ಅಣುಶಕ್ತಿ ಉತ್ಪಾದನೆಗೆ ಇದನ್ನು ಬಳಸಬಹುದು. [ಚಿತ್ರಗಳು: ಐಸಾಕ್ ರಿಚರ್ಡ್]

ಭಾರತದ ರಕ್ಷಣಾ ವೆಚ್ಚದಲ್ಲಿ ಕಡಿತ ಸಾಧ್ಯವಿಲ್ಲ
'ಭಾರತದ ರಕ್ಷಣಾ ವೆಚ್ಚದಲ್ಲಿ ಕಡಿತ ಗೊಳಿಸಿ ಅದನ್ನು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಬಹುದಲ್ವ?' ಎಂದು ವಿದ್ಯಾರ್ಥಿನಿಯೊಬ್ಬಳು ಡಾ.ಕಲಾಂರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಲಾಂ, ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ.

ಇತಿಹಾಸವನ್ನು ಗಮನಿಸಿ ನೋಡಿ
ಭಾರತದ 600 ವರ್ಷಗಳ ಇತಿಹಾಸವನ್ನು ತೆಗೆದುಕೊಂಡರೆ ಕೇವಲ 200 ವರ್ಷ ಮಾತ್ರ ಭಾರತದವರು ಅಂದರೆ ಚಂದ್ರಗುಪ್ತರ ಕಾಲದಲ್ಲಿ ಮಾತ್ರ ಆಳ್ವಿಕೆ ಮಾಡಲು ಸಾಧ್ಯವಾಗಿದೆ. ಇದನ್ನು ಗಮನಿಸಿದಾಗ ಭಾರತೀಯರಲ್ಲಿ ಇನ್ನೂ ಸ್ವ ಸಾಮರ್ಥ್ಯದ ಬಗೆಗಿನ ನಂಬಿಕೆಯ ಕೊರತೆ ಇದೆ. ಆದುದರಿಂದ ರಕ್ಷಣಾ ವೆಚ್ಚವನ್ನು ಸದ್ಯ ಕಡಿತಗೊಳಿಸುವಂತಿಲ್ಲ ಎಂದರು.

ಸಂಶೋಧನಾ ಕ್ಷೇತ್ರಕ್ಕೆ ಕಂಪ್ಯೂಟರ್ ಬಳಕೆ
2023ರಲ್ಲಿ ಕಂಪ್ಯೂಟರ್ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಪ್ರವೇಶಿಸಬಹುದು. ಆದರೆ ಸಂಶೋಧನಾ ಕ್ಷೇತ್ರವೊಂದನ್ನು ಹೊರತುಪಡಿಸಿ ಎಂದ ಕಲಾಂ, ಮನುಷ್ಯನ ಮಿದುಳು ಕಂಪ್ಯೂಟರಿಗಿಂತ ಹೆಚ್ಚು ಶಕ್ತಿಶಾಲಿಯಾದುದು, ಜ್ಞಾನವೆ ಶಕ್ತಿ ಎಂದು ವಿವರಿಸಿದರು.

ವೈದ್ಯರಿಗೆ ಕಲಾಂ ಕಿವಿಮಾತು
ಯುವ ವೈದ್ಯರು ಸಮಾಜದ ಬಡವರಲ್ಲಿ ಕಡು ಬಡವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ ಎಂದು ಕಿವಿ ಮಾತು ಹೇಳಿದ ಅವರು, ಈ ನಿಟ್ಟಿನಲ್ಲಿ ಯೆನೆಪೊಯ ಸಂಸ್ಥೆಯ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮತದಾನ ನಮ್ಮ ಹಕ್ಕು ತಪ್ಪದೇ ಚಲಾಯಿಸಿ
ಶಿರ್ವ ಬಂಟಕಲ್ಲಿನಲ್ಲಿರುವ ಶ್ರೀ ಮಧ್ವ ವಾದಿರಾಜ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್ ಮೆಂಟ್ (SMVITM)ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಾನು ಮತದಾನ ಮಾಡುತ್ತೇನೆ, ನೀವು ಮತದಾನ ಮಾಡಿ ಸಮರ್ಥ ನಾಯಕರನ್ನು ಆಯ್ಕೆ ಮಾಡಿ ಎಂದರು.

ವಿದ್ಯಾರ್ಥಿಗಳ ಜತೆ ಸಂವಾದ, ಕಲಾಂ ಪಾಠ
ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ, ವಿಜ್ಞಾನಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಜಿಲ್ಲೆಯ ಎರಡು ಕಾಲೇಜಿನ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.












Click it and Unblock the Notifications