ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರಿನ ಮಹಾಲಿಂಗೇಶ್ವರ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ಮಳಿಗೆ ತೆರೆಯಲು ಅವಕಾಶ

|
Google Oneindia Kannada News

ಮಂಗಳೂರು, ಮಾರ್ಚ್ 23: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕಾಗಿ ಹಿಂದೂಯೇತರ ಸಮುದಾಯಕ್ಕೆ ತಾತ್ಕಾಲಿಕ ಮಳಿಗೆಗಳ ಹರಾಜನ್ನು ನಿರ್ಬಂಧಿಸಿದೆ.

ಏಪ್ರಿಲ್ 10ರಿಂದ 25 ರವರೆಗೆ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಹಿಂದೂಗಳು ಮಾತ್ರ ತಮ್ಮ ಅಂಗಡಿಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ. ಈ ವೇಳೆ ನೂರಾರು ಜಾತ್ರಾ ಮಳಿಗೆಗಳು ದೇವಸ್ಥಾನದ ಬಾಕಿ ಮಾರುಗದ್ದೆಯಲ್ಲಿ ಇರಲಿದೆ. ಈ ಜಾತ್ರಾ ಮಳಿಗೆಗಳಲ್ಲೂ ಹಿಂದೂಯೇತರರು ವ್ಯಾಪಾರ ಮಾಡಲು ಅವಕಾಶ ನಿರಾಕರಿಸಲಾಗಿದೆ.

ದೇವಾಲಯದ ಆಡಳಿತವು ಮಾರ್ಚ್ 19, 2022ರಂದು ಇಂಗ್ಲಿಷ್ ದೈನಿಕ 'ದಿ ಹಿಂದೂ'ದಲ್ಲಿ ಇದನ್ನು ಪ್ರಕಟಿಸಲು ಸೂಚನೆ ನೀಡಿದೆ. ಮಾ.22ರಿಂದ ಆರಂಭವಾಗುವ ಐದು ದಿನಗಳ ಉತ್ಸವದಲ್ಲಿ ಕೇವಲ ಹಿಂದೂ ಅಂಗಡಿಕಾರರಿಗೆ ಮಾತ್ರ ಅಂಗಡಿ ತೆರೆಯಲು ಶಿವಮೊಗ್ಗದ ಕೋಟೆ ಮಾರಿಕಾಂಬಾ ಜಾತ್ರೆಯ ಸಂಘಟನಾ ಸಮಿತಿ ನಿರ್ಧರಿಸಿತ್ತು. ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Allows Only Hindus To Set Up Stalls During In The Upcoming Puttur Mahalingeshwar Temple Jatre

ಇದಕ್ಕೂ ಮುನ್ನ ಉಡುಪಿಯ ಹೊಸ ಮಾರಿಗುಡಿ ದೇವಸ್ಥಾನವು ತನ್ನ ವಾರ್ಷಿಕ ಜಾತ್ರೆಯಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅಂಗಡಿಗಳನ್ನು ಹಂಚಲು ನಿರ್ಧರಿಸಿತ್ತು. ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಮಾರ್ಚ್ 17ರಂದು ಕರಾವಳಿ ಪ್ರದೇಶದ ಮುಸ್ಲಿಮರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದ ನಂತರ ವಾರ್ಷಿಕ "ಸುಗ್ಗಿ ಮಾರಿ ಪೂಜೆ' ಸಮಯದಲ್ಲಿ ಹಿಂದೂಗಳಿಗೆ ಮಾತ್ರ ಹಬ್ಬಕ್ಕೆ ಅಂಗಡಿಗಳನ್ನು ನೀಡಲು ಸಮಿತಿ ನಿರ್ಧರಿಸಿತ್ತು.

ಶಿವಮೊಗ್ಗ ಮತ್ತು ಉಡುಪಿಯ ದೇವಸ್ಥಾನಗಳ ನಂತರ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನವೂ ಇದೇ ಹಾದಿ ಹಿಡಿದಿದ್ದು, ಈ ವರ್ಷ ಏಪ್ರಿಲ್‌ನಲ್ಲಿ ನಡೆಯಲಿರುವ ಜೋತ್ರಾವತಿ ಉತ್ಸವದಲ್ಲಿ ಹಿಂದೂ ಮಾರಾಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿಯ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Recommended Video

IPL ನ ಕೆಟ್ಟ ದಾಖಲೆಗಳು: ಬೇಡವಾದ ದಾಖಲೆಯಲ್ಲಿ RCB ಕೂಡ ಇದೆ | Oneindia Kannada

ಮೇ 29ರಂದು ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಪೂಜೆ ನಡೆಯಲಿದ್ದು, ತಾತ್ಕಾಲಿಕ ಅಂಗಡಿಕಾರರಿಗೆ ದೇವಸ್ಥಾನದ ಕಚೇರಿಯಿಂದ ಗುರುತಿಸಲಾದ ಜಾಗವನ್ನು ಮಂಜೂರು ಮಾಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

English summary
The auction of Temporary stalls to the non-Hindu community has been Banned for the annual Jatra festival held at Mahalingeshwara Temple in Puttur, Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X