ಮಂಗಳೂರು ವಿಮಾನ ನಿಲ್ದಾಣ ಸುರಕ್ಷಿತ: ಅಧಿಕಾರಿಗಳ ಸ್ಪಷ್ಟನೆ

ಮಂಗಳೂರು ಜೂನ್ 05 : ಮಹಾಮಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಬದಿಯ ರನ್ ವೇ ತಡೆಗೋಡೆ ಕುಸಿದ ಘಟನೆಗೆ ಸಂಬಂದಿಸಿದಂತೆ ಅನೇಕ ವೂಹಾಪೋಹಗಳು ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವೆಂಕಟೇಶ್ವರ ರಾವ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲ ಸುಳ್ಳು ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ.

All operations in Mangaluru Airport is normal, clarifies director

ಮಂಗಳೂರಿನಲ್ಲಿ ಮೇ 29 ರಂದು ಸುರಿದ ಮಹಾಮಳೆಗೆ ವಿಮಾನ ನಿಲ್ದಾಣದ ಒಂದು ಕಡೆಯ ತಡೆ ಗೋಡೆ ಕುಸಿದಿತ್ತು. ಅದನ್ನು ದುರಸ್ಥಿ ಪಡಿಸಲಾಗಿದೆ. ಆದರೆ ಕೆಲವು ದೃಶ್ಯಮಾಧ್ಯಮಗಳಲ್ಲಿ ರನ್ ವೇ ಕುಸಿತ, ಅಪಾಯದಲ್ಲಿ ವಿಮಾನ ನಿಲ್ದಾಣ ಎಂದು ತಪ್ಪು ಮಾಹಿತಿ ರವಾನೆಯಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಮಂಗಳೂರು ವಿಮಾನ ನಿಲ್ದಾಣವು ಎಂದಿನಂತೆಯೇ ಕಾರ್ಯಾಚರಿಸುತ್ತಿದೆ. ಯಾವುದೇ ರಿತಿಯ ಆತಂಕವಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ಅಸ್ಪಷ್ಟ ಮಾಹಿತಿಗಳನ್ನು ಬಿತ್ತರಿಸಲಾಗುತ್ತಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ಸಾರ್ವಜನಿಕರು ಕಿವಿಗೊಡುವುದು ಬೇಡ . ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲವೂ ಸುರಕ್ಷಿತ ವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+