ನಾಳೆ ತಂದೆಯ ಅಸ್ಥಿ ವಿಸರ್ಜನೆಗೆ ಐಶ್ವರ್ಯಾ ರೈ ದಂಪತಿ ಮಂಗಳೂರಿಗೆ
ಮಂಗಳೂರು, ಏಪ್ರಿಲ್ 7: ಖ್ಯಾತ ಬಹುಭಾಷಾ ನಟಿ ಐಶ್ವರ್ಯ ರೈ ತಂದೆ ಕೃಷ್ಣರಾಜ್ ರೈ ಇತ್ತೀಚೆಗೆ ನಿಧಾನರಾಗಿದ್ದರು. ಅವರ ಪಿಂಡ ಪ್ರದಾನ ಕಾರ್ಯಕ್ರಮಕ್ಕೆ ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್ ಜತೆ ನಾಳೆ ಮಂಗಳೂರಿಗೆ ಬರಲಿದ್ದಾರೆ.
ನಾಳೆ 9 ಗಂಟೆ ಸುಮಾರಿಗೆ ವಿಮಾನದಲ್ಲಿ ಮಂಗಳೂರಿಗೆ ಆಗಮಿಸುವ ಐಶ್ವರ್ಯ ಕುಟುಂಬ ಮಂಗಳೂರು ಕದ್ರಿ ದೇವಸ್ಥಾನದಲ್ಲಿ ಪ್ರಾರ್ಥನೆ ಪೂರೈಸಿ ಬಳಿಕ ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ದೇವಸ್ಥಾನ ಬಳಿಯ ನದಿಯಲ್ಲಿ ಪಿಂಡ ಪ್ರದಾನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.[ಬಾಲಿವುಡ್ ನಟಿ ಐಶ್ಚರ್ಯ ರೈ ಅವರಿಗೆ ಪಿತೃವಿಯೋಗ]

ಐಶ್ವರ್ಯ ರೈ ಕುಟುಂಬ ಮಂಗಳೂರಿಗೆ ಬರುವುದನ್ನು ಗೌಪ್ಯವಾಗಿ ಇಡಲಾಗಿತ್ತು. ಪೊಲೀಸರಿಗೆ ಮಾತ್ರ ಈ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಹೀಗಾಗಿ ಪೊಲೀಸರು ಸುರಕ್ಷಾ ವ್ಯವಸ್ಥೆ ಒದಗಿಸಲಿದ್ದಾರೆ.

ದಕ್ಷಿಣ ಕನ್ನಡದ ಮಂಗಳೂರು ಮೂಲದ ಕೃಷ್ಣರಾಜ್ ರೈ (78) ಅವರು ಮಾರ್ಚ್ 18ರಂದು ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಅಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದರು.












Click it and Unblock the Notifications