ನದಿಗೆ ಜಿಗಿದು ಪರಾರಿಯಾಗಲು ಯತ್ನಿಸಿದ್ದ ಆರೋಪಿ ಸಾವು
ಮಂಗಳೂರು ಜುಲೈ 16: ಪತ್ನಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆತರುವಾಗ ಸೇತುವೆ ಮೇಲಿಂದ ನದಿಗೆ ಜಿಗಿದು ಪರಾರಿಯಾಗುವ ವೇಳೆ ಕುದ್ರೋಳಿ ನಿವಾಸಿ ಮುನೀರ್ (42) ಎಂಬಾತ ಮೃತಪಟ್ಟಿದ್ದಾನೆ.
ಮಂಗಳೂರಿನ ಕುದ್ರೋಳಿ ನಿವಾಸಿ ಮಹಮ್ಮದ್ ಎಂಬುವರು ನಗರದ ಬಂದರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮುನೀರ್ ಎಂಬಾತ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮುನೀರ್ ಮಂಗಳೂರು ತೊರೆಯಲು ಯತ್ನಿಸಿದ್ದಾನೆ.

ಆರೋಪಿಯು ಆಟೋವೊಂದರಲ್ಲಿ ನಗರ ಹೊರವಲಯದ ಹಳೆಯಂಗಡಿ ಸಮೀಪ ಹೋಗುತ್ತಿದ್ದ ಮಾಹಿತಿ ಪಡೆದ ಮುಲ್ಕಿ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಅದೇ ಆಟೋದಲ್ಲಿ ಮಂಗಳೂರಿನ ಬಂದರ್ ಠಾಣೆಗೆ ಕರೆತರುವಾಗ ಕೂಳೂರು ಸೇತುವೆ ಬಳಿ ಮೂತ್ರ ವಿಸರ್ಜಿಸಲು ಆಟೋದಿಂದ ಇಳಿದ ಮುನೀರ್ ಸೇತುವೆಯಿಂದ ನದಿಗೆ ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ನಂತರ ಆತ ಪತ್ತೆಯಾಗಿರಲಿಲ್ಲ. ಸೋಮವಾರ ಸಂಜೆ ಬೆಂಗರೆ ಬಳಿ ಆತನ ಮೃತದೇಹ ಪತ್ತೆಯಾಗಿದೆ.












Click it and Unblock the Notifications