• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಾಂತ್ಯದಲ್ಲಿ ಪ್ರಿಯತಮೆಗೆ ಚೂರಿಯಿಂದ ಇರಿದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ

|

ಮಂಗಳೂರು, ಸೆಪ್ಟೆಂಬರ್.28: ಯುವಕನೋರ್ವ ತಾನು ಪ್ರೀತಿಸುತ್ತಿದ್ದ ಯುವತಿಗೆ ಚೂರಿಯಿಂದ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮೂಡಬಿದ್ರೆಯ ಪ್ರಾಂತ್ಯ ಎಂಬಲ್ಲಿ ನಡೆದಿದೆ.

ಅಪ್ಪನ ಆಸ್ಪತ್ರೆ ಬಿಲ್ ಪಾವತಿಸದೆ ಮಗ ಆತ್ಮಹತ್ಯೆ, ಇತ್ತ ಅಪ್ಪನೂ ಸಾವು

ಮಂಗಳೂರಿನ ಬಜಾಲ್ ಮೂಲದ ಯುವಕ ಲೋಹಿತ್ (26) ಹಾಗೂ ಚರಿಷ್ಮಾ (22) ಕಳೆದ ಕೆಲವು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮೂಡಬಿದ್ರೆ ಬಳಿಯ ಪ್ರಾಂತ್ಯ ನಿವಾಸಿಯಾದ ಚರಿಷ್ಮಾ ಅವರ ಮನೆಗೆ ಲೋಹಿತ್ ಆಗಾಗ ಬರುತ್ತಿದ್ದ ಎಂದು ಹೇಳಲಾಗಿದೆ.

ಸುಳ್ಯದಲ್ಲಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

ಚರಿಷ್ಮಾ ಮಂಗಳೂರಿನ ಡ್ಯಾನ್ಸ್ ತಂಡವೊಂದರ ಸದಸ್ಯೆಯಾಗಿದ್ದಳು. ಆದರೆ ಇತ್ತೀಚೆಗೆ ಚರಿಷ್ಮಾ ಹಾಗೂ ಲೋಹಿತ್ ನಡುವೆ ಕೆಲ ವಿಚಾರದಲ್ಲಿ ಮನಸ್ತಾಪ ಹೆಚ್ಚಾಗಿ ಜಗಳವಾಡಿಕೊಂಡಿದ್ದರು.

ಇಂದು ಶುಕ್ರವಾರ ಚರಿಷ್ಮಾ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಆಗಮಿಸಿದ ಲೋಹಿತ್ ಚರಿಷ್ಮಾ ಗೆ ಚೂರಿಯಿಂದ ಇರಿದಿದ್ದಾನೆ . ನಂತರ ತಾನೂ ಚರಿಷ್ಮಾ ಮನೆಯ ಕೊಠಡಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿ

ವಿಷಯ ತಿಳಿಯುತ್ತಿದ್ದಂತೆ ಗಂಭೀರ ಪರಿಸ್ಥಿತಿಯಲ್ಲಿ ನರಳಾಡುತ್ತಿದ್ದ ಚರಿಷ್ಮಾ ಹಾಗೂ ಲೋಹಿತ್ ನನ್ನು ಸ್ಥಳೀಯರು ಆತ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಮೂಡಬಿದ್ರೆ ಪೊಲೀಸರು ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಆರಂಭಿಸಿದ್ದಾರೆ.

English summary
A young man stabbed a young woman who was in love with her.Then he committed suicide incident occurred in Moodbidri near pranthya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X