ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು: ಒಟ್ಟಿಗೆ ಅಬ್ಬರಿಸಿದ 18 ಗುಳಿಗ

ಮಂಗಳೂರು, ಫೆಬ್ರವರಿ 06: ಇದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ದುರ್ಗಾಪರಮೇಶ್ವರಿ ದೇವಿಯ ದೂತನಾಗಿ ನವಗುಳಿಗ ದೈವಗಳಿರುವ ಏಕೈಕ ಸ್ಥಳ ಬರ್ಕಜೆಯಲ್ಲಿ 9ನೇ ವಾರ್ಷಿಕ ಜಾತ್ರೆ ಮಹೋತ್ಸವ ನಡೆದಿದ್ದು, ಒಂದೇ ಬಾರಿ 18 ಗುಳಿಗ ದೈವದ ಗಗ್ಗರ ಸೇವೆ ನಡೆದಿದೆ.

ಪ್ರತಿ ವರ್ಷದಂತೆ ಒಂಬತ್ತು ಗುಳಿಗ ದೈವಗಳಿಗೆ ಏಕಕಾಲದಲ್ಲಿ ಗಗ್ಗರ ಸೇವೆ ನಡೆದರೆ ಈ ಬಾರಿ ಮಾತ್ರ ಭಕ್ತರ ಹರಕೆ ಸೇವಾ ರೂಪದಲ್ಲಿ 18 ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆದಿದ್ದು ವಿಶೇಷವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಈ ಬಾರಿ ವಿಶೇಷ ಎಂಬಂತೆ 18 ಗುಳಿಗ ದೈವದ ಗಗ್ಗರ ಸೇವೆ ನಡೆದು, ನೆರೆದಿದ್ದ ದೈರಾಧಕರನ್ನು ರೋಮಾಂಚನ ಗೊಳಿಸಿತ್ತು. ಅಲ್ಲದೆ ಶಿವಧೂತ ಗುಳಿಗ ದೈವಗಳ ಅಬ್ಬರ ಕೂಡಾ ಜೋರಾಗಿತ್ತು.

A Special Event For The First Time In The History Of Daivaradhane In Tulunadu

ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂಬತ್ತು ಗುಳಿಗ ದೈವದ ನರ್ತನ ಸೇವೆ ನಡೆಯುತ್ತಿತ್ತು.‌ ಆದ್ರೆ ಈ ಬಾರಿ ಸಂಪ್ರದಾಯದಂತೆ ಒಂಬತ್ತು ಹಾಗೂ ಸೇವೆಯಾಗಿ 9, ಹೀಗೆ ಒಟ್ಟು 18 ಗುಳಿಗ ದೈವದ ನರ್ತನ ಸೇವೆ ನಡೆದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು ಎಂಬಂತಾಗಿದೆ.

ಇನ್ನು ಪ್ರತ್ಯೇಕವಾಗಿ ನಡೆದ 18 ಗುಳಿಗ ದೈವದ ವಿಶೇಷ ಗಗ್ಗರ ಸೇವೆಯನ್ನು ಕಣ್ತುಂಬಿಕೊಳ್ಳುದಕ್ಕೆ ಮುಂಬೈ ಬೆಂಗಳೂರು ಸೇರಿದಂತೆ ಕರಾವಳಿಯ ಸಾವಿರಾರು ದೈವಾರಾಕರು ಸೇರಿದ್ದರು. ಗುಳಿಗ ದೈವಗಳ ಗಗ್ಗರ ಸೇವೆ ಕಣ್ತುಂಬಿಕೊಂಡರು. ಒಟ್ಟಿನಲ್ಲಿ ದೈವಾರಾದನೆ ಎಂಬುದು ಕರಾವಳಿ ಅಸ್ಮಿತೆ. ಜನರ ನಂಬಿಕೆ. ಇತಿಹಾಸದಲ್ಲೇ ಮೊದಲಾಗಿ ನಡೆದ 18 ಗುಳಿಗ ದೈವದ ನರ್ತನ ಸೇವೆ ಕಂಡು ಭಕ್ತರು ಪುನೀತರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+