ಮಂಗ್ಳೂರು: ರೌಡಿ ಶೀಟರ್ ಗೆ ಚಾಕು ಇರಿತ, ಚಿಂತಾಜನಕ ಸ್ಥಿತಿ

ಮಂಗಳೂರು, ಡಿಸೆಂಬರ್, 09: ಕಾರು, ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಹರೆಯದ ವ್ಯಕ್ತಿಯೊಬ್ಬನಿಗೆ ಚೂರಿ ಇರಿದು ಪರಾರಿಯಾದ ಘಟನೆ ಮಂಗಳೂರಿನ ಬಂಟ್ವಾಳದ ಮಾರಿಪ್ಪಳ್ಳದಲ್ಲಿ ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ನಡೆದಿದೆ.

ಮಂಗಳೂರಿನ ರೌಡಿ ಶೀಟರ್ ಹನೀಫ್ ಯಾನೆ ಮಾದ ಹನೀಫ್ (30) ದುಷ್ಕರ್ಮಿಗಳ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಬಂಟ್ವಾಳ ರಿಕ್ಷಾ ಚಾಲಕ ರಿಫಾಯಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಹನೀಫ್ ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದನು.[ಮಾರಕಾಸ್ತ್ರದಿಂದ ಹಲ್ಲೆ, ವ್ಯಕ್ತಿ ಸ್ಥಳದಲ್ಲೇ ಸಾವು]

A miscreants stabbed with knife to youth at Mangaluru

ಹನೀಫ್ ಸುಮಾರು 11 ಗಂಟೆಗೆ ಮಾರಿಪ್ಪಳದಲ್ಲಿರುವ ತನ್ನ ಮನೆಯಿಂದ ಬರುತ್ತಿದ್ದನು. ಆಗ ಅಲ್ಲಿಗೆ ಬಂದ 6 ಜನರ ದುಷ್ಕರ್ಮಿಗಳ ತಂಡ ಸಮೀಪದಲ್ಲಿದ್ದ ಅಂಗಡಿಯ ಮುಂದೆ ಚೂರಿ ಚುಚ್ಚಿ ಅಲ್ಲಿಂದ ಕಾಲು ಕಿತ್ತಿದ್ದಾರೆ. ಈ ಘಟನೆ ಕಂಡ ಸಾರ್ವಜನಿಕರು ಚಿಂತಾಜನಕ ಸ್ಥಿತಿಯಲ್ಲಿದ್ದ ಈತನನ್ನು ತಕ್ಷಣ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದಾರೆ.[ತಾಯಿಯನ್ನು ಮದುವೆಯಾಗಲು ಮಕ್ಕಳನ್ನೇ ಕೊಂದ ಭೂಪ!]

ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಪೊಲೀಸ್ ಅಧಿಕಾರಿಗಳಾದ ಬೆಳ್ಳಿಯಪ್ಪ, ರಕ್ಷಿತ್ ಕುಮಾರ್ ಸೇರಿದಂತೆ ಪೊಲೀಸ್ ತಂಡ ಸ್ಥಳದಲ್ಲಿ ಮುಖಾಂ ಹೂಡಿದ್ದಾರೆ. ಘಟನೆಯ ಹಿನ್ನಲೆ ಸ್ಥಳದಲ್ಲಿ ಏರ್ಪಟ್ಟ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+