ಮಂಗಳೂರಿನ ಮನೆಯೊಳಗೆ ಬುಸ್..ಬುಸ್: ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ
ಮಂಗಳೂರು, ಮೇ 28: ದಕ್ಷಿಣ ಕನ್ನಡ ಜಿಲ್ಲೆಯ ಇಂದಬೆಟ್ಟುವಿನ ಬಂಗಾಡಿ ಎನ್ನುವಲ್ಲಿ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಇಂದಬೆಟ್ಟುವಿನ ಮನೆಯೊಳಗೆ ಬೃಹತ್ ಗಾತ್ರ ಕಾಳಿಂಗ ಸರ್ಪ ಕಂಡು ಬಂದಿದ್ದು, ಕೂಡಲೇ ಅದನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಇಂದಬೆಟ್ಟು ಗ್ರಾಮದ ಬಂಗಾಡಿ ಮನೆಯೊಂದರಲ್ಲಿ ಮನೆಯ ಒಂದು ಪಾರ್ಶ್ವವನ್ನು ಮಾತ್ರ ಬಳಸುತ್ತಿದ್ದರು. ಮತ್ತೊಂದು ಪಾರ್ಶ್ವದ ಕೋಣೆಯನ್ನು ಬಳಸದೇ ಹಾಗೇ ಬಿಡಲಾಗಿತ್ತು. ಇಂದು ಕೋಣೆಯ ಬಾಗಿಲು ತೆಗೆದಾಗ ಮಂಚದಡಿಯಲ್ಲಿ ಕೇಳಿ ಬಂದ ಶಬ್ದ ಕೇಳಿ ಬಂದಿದೆ.

ಕೂಡಲೇ ಮನೆಯವರು ಪರೀಕ್ಷಿಸಿದಾಗ ಮಂಚದ ಅಡಿಯಲ್ಲಿ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ತಕ್ಷಣವೇ ಮನೆಯಲ್ಲಿದ್ದವರು ಉರಗ ರಕ್ಷಕ ಅಶೋಕ್ ಲಾಯಿಲ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಶೋಕ್ ಲಾಯಿಲ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಮನೆಯ ಫ್ಯಾನ್‌ನಲ್ಲಿ ನಾಗರಹಾವು
ಹಾಸನ: ಮನೆಯ ಫ್ಯಾನ್‌ನಲ್ಲಿ ನಾಗರಹಾವು ಕಾಣಿಸಿಕೊಂಡ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಹಳೇ ಸಂತವೇರಿ ಬಡಾವಣೆಯಲ್ಲಿ ನಡೆದಿದೆ. ಸಂತವೇರಿ ಬಡಾಣೆಯಲ್ಲಿರುವ ಮನೆಯೊಂದರ ಅಟ್ಟದ ಮೇಲೆ ನಾಗರಹಾವು ಪತ್ತೆಯಾಗಿದೆ. ನಾಗರಹಾವು ಕಂಡು ಭಯಭೀತರಾದ ಮನೆ ಮಂದಿ ಕಿರುಚಾಡಲು ಶುರು ಮಾಡಿದ್ದಾರೆ.

ಮನೆಯಲ್ಲಿದ್ದವರು ಕಿರುಚಾಡುತ್ತಿದ್ದಂತೆ ನಾಗರಹಾವು ಫ್ಯಾನ್ ಏರಿ ಕುಳಿತಿದೆ. ಹಾವು ಕೆಳಗೆ ಬೀಳಲಿ ಎಂದು ಫ್ಯಾನ್ ಆನ್ ಮಾಡಿದ ಕೂಡಲೇ ನಾಗರಹಾವು ಹೆಡೆ ಎತ್ತಿ ಬುಸುಗುಡಲು ಶುರು ಮಾಡಿದೆ. ಕೂಡಲೇ ಮನೆಯ ಮಾಲೀಕ ಉರುಗತಜ್ಞ ದಸ್ತಗೀರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಉರುಗತಜ್ಞ ದಸ್ತಗೀರ್ ನಾಗರಹಾವನ್ನು ಸೆರೆ ಹಿಡಿದಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆ ಹಿಡಿದ ಹಾವನ್ನು ಉರುಗತಜ್ಞ ದಸ್ತಗೀರ್ ದೋಣಿಗಾಲ್ ಬಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.












Click it and Unblock the Notifications