ಅಕ್ರಮ ವಿದೇಶಿ ಮದ್ಯ: ಕಾಸರಗೋಡಿನಲ್ಲಿ ಒಬ್ಬನ ಸೆರೆ
ಮಂಗಳೂರು: 500 ಬಾಟ್ಲಿ ವಿದೇಶಿ ಮದ್ಯ ಸಹಿತ ಓರ್ವನನ್ನು ಕಾಸರಗೋಡು ಅಬಕಾರಿ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ತಳಂಗರೆ ಕೊಪ್ಪಲ್ ಕಾಲನಿಯ ರಮೇಶ್ ( 39) ಎಂದು ಗುರುತಿಸಲಾಗಿದೆ.
ರಮೇಶ್ ಬರೋಬ್ಬರಿ 500 ಬಾಟ್ಲಿ ವಿದೇಶಿ ಮದ್ಯವನ್ನು ಮನೆಯ ಅಡುಗೆ ಕೋಣೆಯ ನೆಲದಡಿ ನಾಲ್ಕು ಪ್ಲಾಸ್ಟಿಕ್ ಗೋಣಿ ಮತ್ತು ಚೀಲಗಳಲ್ಲಿ ಬಚ್ಚಿಟ್ಟಿದ್ದ.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ತಳಂಗರೆ , ಕಾಸರಗೋಡು ಪೇಟೆ, ಕರಂದಕ್ಕಾಡ್ , ಕೇಳುಗುಡ್ಡೆ ಮೊದಲಾದ ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.
ಹಲವೆಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಬಕಾರಿ ದಳಕ್ಕೆ ಮಾಹಿತಿ ಲಭಿಸಿದ್ದು, ಮುಂದಿನ ದಿನಗಳಲ್ಲೂ ವಿಶೇಷ ನಿಗಾ ಇಡಲು ಅಬಕಾರಿ ದಳದ ಸಿಬಂದಿಗಳು ಮುಂದಾಗಿದ್ದಾರೆ.












Click it and Unblock the Notifications