ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುರತ್ಕಲ್ ಟೋಲ್ ಗೇಟ್‌ನ 31 ಕಾರ್ಮಿಕರಿಗೆ ಬೇರೆಡೆ ಉದ್ಯೋಗ ಕೊಡಿಸುತ್ತೇನೆ; ಪ್ರತಿಭಾ ಕುಳಾಯಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರಿನ, ಸೆಪ್ಟೆಂಬರ್‌, 15: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ತೆರವಿಗೆ ಅಕ್ಟೋಬರ್ 18ರವರೆಗೆ ಟೋಲ್ ವಿರೋಧಿ ಹೋರಾಟ ಸಮಿತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗಡುವು ನೀಡಿದೆ. ಗಡುವು ನೀಡಿದ ದಿನಾಂಕದೊಳಗೆ ಟೋಲ್ ತೆರವು ಮಾಡದಿದ್ದಲ್ಲಿ ಜನ ಟೋಲ್ ಕಿತ್ತೆಸೆಯುತ್ತಾರೆ ಎಂದು ಎಚ್ಚರಿಕೆ ನೀಡಿತ್ತು. 60 ಕೀಲೋ ಮೀಟರ್‌ ವ್ಯಾಪ್ತಿಯಲ್ಲಿ ಟೋಲ್ ಇರಬಾರದೆಂಬ ನಿಯಮ ಇರುವ ಕಾರಣಕ್ಕಾಗಿ ಒಂದು ತಿಂಗಳೊಳಗೆ ಟೋಲ್ ತೆರವು ಆಗುವ ಸಾಧ್ಯತೆಗಳಿವೆ.

ಟೋಲ್ ಗೇಟ್‌ನಲ್ಲಿ ಮೂವತ್ತಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಟೋಲ್ ತೆರವು ಆದರೆ ಅವರ ಕೆಲಸಕ್ಕೆ ಅಡ್ಡಿ ಆಗುತ್ತದೆ. ಆದ್ದರಿಂದ ಟೋಲ್‌ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಜೀವನ ಭಧ್ರತೆಗಾಗಿ ಕೆಲಸ ನೀಡುವುದಾಗಿ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಘೋಷಣೆ ಮಾಡಿದ್ದಾರೆ. ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪ್ರತಿಭಾ ಕುಳಾಯಿ, ಸುರತ್ಕಲ್ ಎನ್‌ಐಟಿಕೆ ಬಳಿ ಇರುವ ಅಕ್ರಮ ಟೋಲ್ ಗೇಟ್ ಕಳೆದ ಹಲವು ವರ್ಷಗಳಿಂದ ಕಾರ್ಯಚರಣೆ ನಡೆಸುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈಗಾಗಲೇ ಟೋಲ್ ತೆರವು ಮಾಡುವುದಾಗಿ ದಿನಾಂಕ ಘೋಷಣೆ ಮಾಡಿದ್ದರೂ ಟೋಲ್ ಮುಚ್ಚಲು ಸಾಧ್ಯ ಆಗಿಲ್ಲ ಎಂದು ಗುಡುಗಿದರು.

ಸುರತ್ಕಲ್ ಎನ್ಐಟಿಕೆ ಟೋಲ್‌ತೆರವು ಆಗಬೇಕು: ಇಲ್ಲದಿದ್ದರೆ ಅ. 18ರಂದು ಧ್ವಂಸದ ಎಚ್ಚರಿಕೆಸುರತ್ಕಲ್ ಎನ್ಐಟಿಕೆ ಟೋಲ್‌ತೆರವು ಆಗಬೇಕು: ಇಲ್ಲದಿದ್ದರೆ ಅ. 18ರಂದು ಧ್ವಂಸದ ಎಚ್ಚರಿಕೆ

ಟೋಲ್‌ ಕಾರ್ಮಿಕರಿಗೆ ಉದ್ಯೋಗ ನೀಡುವ ಭರವಸೆ
ಕೆಲವೇ ಸಮಯದಲ್ಲಿ ಟೋಲ್ ತೆರವು ಆಗುವುದು ನಿಶ್ಚಿತವಾಗಿದೆ. ಸದ್ಯ ಟೋಲ್ ಗೇಟ್‌ನಲ್ಲಿ 31ಕ್ಕೂ ಹೆಚ್ಚು ಜನ ಯುವಕ-ಯುವತಿಯರು ಕೆಲಸ ಮಾಡುತ್ತಿದ್ದು, ಟೋಲ್ ತೆರವು ಮಾಡಿದರೆ ಅವರ ಕುಟುಂಬದ ಜೀವನ ನಿರ್ವಹಣೆ ಕಷ್ಟ ಆಗಲಿದೆ. ಇದನ್ನು ಮನಗಂಡು ಅವರಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ನೀಡುವ ಭರವಸೆಯನ್ನು ನಾನು ನೀಡುತ್ತೇನೆ ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಭರವಸೆ ನೀಡಿದ್ದಾರೆ.

31 workers of Suratkal toll gate will given employment: Pratibha Kulai

ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ
ಕಾರ್ಮಿಕರಿಗೆ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ನೀಡಲು ಈಗಾಗಲೇ ವಿವಿಧ ಕಂಪನಿಗಳು ಮತ್ತು ಉದ್ಯಮಿಗಳ ಜೊತೆ ಚರ್ಚಿಸಿದ್ದೇನೆ. ಟೋಲ್ ಗೇಟ್‌ನಲ್ಲಿ ದುಡಿಯುತ್ತಿರುವ ಕಾರ್ಮಿಕರ ಮೇಲೆ ಹತ್ತಾರು ಕ್ರಿಮಿನಲ್ ಕೇಸ್‌ಗಳಿದ್ದು, ಟೋಲ್ ತೆರವುಗೊಂಡ ಬಳಿಕ ಅತಂತ್ರ ಸ್ಥಿತಿ ಎದುರಿಸಲಿದ್ದಾರೆ. ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಸಂಪರ್ಕದಲ್ಲಿದ್ದು, ಟೋಲ್ ತೆರವುಗೊಂಡ ತಕ್ಷಣ ಅವರ ಉದ್ಯೋಗ ಭದ್ರತೆಗೆ ಸೂಕ್ತ ಕ್ರಮ ಜರುಗಿಸುವುದಾಗಿ ಪ್ರತಿಭಾ ಕುಳಾಯಿ ತಿಳಿಸಿದರು.

ಈ ಬಗ್ಗೆ ಹಲವು ಪ್ರೈವೇಟ್ ಕಂಪನಿಗಳೊಂದಿಗೆ ಚರ್ಚಿಸಿದ್ದೇನೆ. ಮಂಗಳೂರು ಬಿಟ್ಟು ಹೊರಗಡೆ ಹೋಗುವವರಿಗೂ ಕೆಲಸದ ಅವಕಾಶ ಮಾಡಿಕೊಡುತ್ತೇನೆ. 31 ಉದ್ಯೋಗಿಗಳಿಗೆ ಸಹಾಯಕವಾಗುವಂತೆ ಮಾಡುತ್ತೇನೆ. ಈಗ ವಿದ್ಯಾರ್ಹತೆ ತಕ್ಕಂತೆ ಹೆಚ್ಚಿನ ಸಂಬಳದ ಜೊತೆಗೆ ಕೆಲಸ ಮಾಡಿಸುತ್ತೇನೆ. ಮುಂದಿನ ವಾರದಲ್ಲಿ ಎಲ್ಲಾ ಕಾರ್ಮಿಕರನ್ನು ಕರೆಸಿ ಮಾತನಾಡಿ ಕೆಲಸ ಮಾಡಿಸಿಕೊಡುವುದಾಗಿ ಪ್ರತಿಭಾ ಕುಳಾಯಿ ಭರವಸೆಯನ್ನು ನೀಡಿದ್ದಾರೆ.

English summary
Pratibha Kulai promised to give employment to 31 workers of Suratkal Toll in Mangalru district. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X