ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುದ್ಧಿವಂತರ ಜಿಲ್ಲೆಯಲ್ಲೇ ಬಾಲ್ಯ ವಿವಾಹ, ಅಧಿಕಾರಿಗಳು ಶಾಮೀಲು ಆರೋಪ

|
Google Oneindia Kannada News

ಮಂಗಳೂರು, ಡಿಸೆಂಬರ್ 06: ಬುದ್ಧಿವಂತರ ಜಿಲ್ಲೆ ಎಂದೇ ಗುರುತಿಸಲಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸವಣೂರಿನ ಅಪ್ರಾಪ್ತ ಬಾಲಕಿ ಹಾಗೂ ಉಪ್ಪಿನಂಗಡಿ ಯುವಕನ ನಡುವೆ ಈ ಮದುವೆ ನಡೆದಿದೆ.

ಈ ಸಂಬಂಧ ಬಾಲಕಿಯ ತಂದೆಯೇ ಮಕ್ಕಳ‌ ರಕ್ಷಣಾ ಸಮಿತಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪುತ್ತೂರು ಸಿ.ಡಿ.ಪಿ.ಒ ಉಪ್ಪಿನಂಗಡಿ, ಬೆಳ್ಳಾರೆ ಹಾಗೂ ಪುತ್ತೂರು ಮಹಿಳಾ ಠಾಣೆಯಲ್ಲಿ ಬಾಲಕಿ ಹಾಗೂ ಮದುವೆಯಾದ ಯುವಕನ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಬಾಲ್ಯ ವಿವಾಹ: ಶಾಲೆ ಬಿಟ್ಟ ಬಾಲಕಿಯರ ಮೇಲೆ ಸರ್ಕಾರ ನಿಗಾಬಾಲ್ಯ ವಿವಾಹ: ಶಾಲೆ ಬಿಟ್ಟ ಬಾಲಕಿಯರ ಮೇಲೆ ಸರ್ಕಾರ ನಿಗಾ

ನವಂಬರ್ 14 ರಂದು ಈ ಮದುವೆಯನ್ನು ಬಂಟ್ವಾಳ ತಾಲೂಕಿನ ನೇರಳಕಟ್ಟೆ ಎಂಬಲ್ಲಿರುವ ಹಾಲ್ ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈ‌ ಬಗ್ಗೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮದುವೆಯನ್ನು ರದ್ದುಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

26 year old man married minor girl in Savanuru

ಅಂದಹಾಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಕ್ಕಳ ರಕ್ಷಣಾ ಘಟಕದಲ್ಲಿರುವ ಮಹಿಳೆಯೊಬ್ಬರು ಅಧಿಕಾರಿಗಳು ಹಾಲ್ ಗೆ ಬರುವ ಮೊದಲೇ ಹಾಲ್ ನ ಸಿಬ್ಬಂದಿಗಳಿಗೆ ಅಧಿಕಾರಿಗಳು ದಾಳಿ ನಡೆಸುವ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮದುವೆಯನ್ನು ಹಾಲ್ ನಲ್ಲಿ ಗುಪ್ತವಾಗಿ ಮಾಡಲಾಗಿದೆ.

 ಮೊಮ್ಮಗಳ ಬಾಲ್ಯ ವಿವಾಹ ತಡೆಯಲು ಹೋದ ಅಜ್ಜ ಕೊಲೆಯಾದ ಮೊಮ್ಮಗಳ ಬಾಲ್ಯ ವಿವಾಹ ತಡೆಯಲು ಹೋದ ಅಜ್ಜ ಕೊಲೆಯಾದ

ಈ ವಿಚಾರ ಬಾಲಕಿಯ ತಂದೆ ಮುನೀರ್ ಗೆ ತಿಳಿದ ಹಿನ್ನೆಲೆಯಲ್ಲಿ ಅವರು ಮಕ್ಕಳ ರಕ್ಷಣಾ ಸಮಿತಿಗೆ ದೂರು ನೀಡಿದ್ದಾರೆ. ಮುನೀರ್ ಅವರ ಮೊದಲನೇ ಪತ್ನಿಯ ಮಗಳು ಅಪ್ರಾಪ್ತ ಬಾಲಕಿಯಾಗಿದ್ದು, ಅವರ ಮೊದಲನೇ ಪತ್ನಿಗೆ ಬೇರೊಬ್ಬರೊಂದಿಗೆ ಮದುವೆಯಾಗಿತ್ತು.

 ಸುಡುಗಾಡು ಬಾಲ್ಯವಿವಾಹ ಮೆಟ್ಟಿನಿಂತ ಬೆಳಗಾವಿ ಹುಡುಗಿ ತುಳಸಿ ಸುಡುಗಾಡು ಬಾಲ್ಯವಿವಾಹ ಮೆಟ್ಟಿನಿಂತ ಬೆಳಗಾವಿ ಹುಡುಗಿ ತುಳಸಿ

ಮೊದಲನೇ ಪತ್ನಿ ಆಕೆಯ ಎರಡನೇ ಪತಿ ಜೊತೆ ಸೇರಿಕೊಂಡು ಈ ಕಾನೂನುಬಾಹಿರ ಮದುವೆ ನಡೆಸಿದ್ದಾರೆ ಎಂದು ಮುನೀರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಮದುವೆ ನಡೆಯುವುದರ ಹಿಂದೆ ಕೆಲವು ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎನ್ನುವ ಆರೋಪವೂ ಇದೀಗ ಕೇಳಿ ಬರುತ್ತಿದೆ‌.

English summary
In a shocking incident 26 year old man married minor girl in Savanuru of Putturu taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X