ಮಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಬರ್ಬರ ಹತ್ಯೆ
ಮಂಗಳೂರು, ಫೆಬ್ರವರಿ 19 : ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ಮಧ್ಯರಾತ್ರಿ ಮಂಗಳೂರು ನಗರದ ಮರೋಳಿಯಲ್ಲಿ ನಡೆದಿದೆ.
ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಸರಪಲ್ಲ ನಿವಾಸಿ ಪ್ರತಾಪ್ ಕೊಲೆಗೀಡಾದ ದುರ್ದವೈ. ಗಾಂಜಾ ಸೇವನೆ ಮಾಡಿ ತಡರಾತ್ರಿ ಸ್ನೇಹಿತರ ನಡುವೆ ನಡೆದ ಜಗಳ ಪ್ರತಾಪ್ ನ ಕೊಲೆಯಲ್ಲಿ ಅಂತ್ಯವಾಗಿದೆ.

ಮಿಥುನ್ ಮತ್ತು ಸಹಚರರು ತಡರಾತ್ರಿ ಪ್ರತಾಪ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪಡೀಲ್ ದಲ್ಲಿ ಗ್ಯಾಂಗ್ ಕಟ್ಟಿ ಕೊಂಡಿದ್ದ ಮಿಥುನ್ ತಂಡದಲ್ಲಿ ಕೊಲೆಯಾದ ಪ್ರತಾಪ್ ಕೂಡಾ ಸಕ್ರೀಯನಾಗಿದ್ದ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಮಂಗಳೂರು ಕಮೀಷನರ್ ಎಂ ಚಂದ್ರಶೇಖರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.












Click it and Unblock the Notifications