ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ
ಮಂಗಳೂರು, ಏಪ್ರಿಲ್ 06 : ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯೇ ನಿರಂತರವಾಗಿ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದಲ್ಲಿ ಬೆಳಕಿಗೆ ಬಂದಿದೆ.ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿ ಈ ಘಟನೆ ನಡೆದಿದ್ದು , ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕುಕ್ಕಾಜೆ ನಿವಾಸಿ ದಾವೂದ್ ಅತ್ಯಾಚಾರ ಎಸಗಿದ ಆರೋಪಿ. ತಂದೆ ದಾವೂದ್ ತನ್ನ ಮೇಲೆ ಮೂರು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ಅರೊಪಿಸಿದ್ದಾಳೆ. ಆರೋಪಿ ದಾವೂದ್ ಪಾಣೆಮಂಗಳೂರು ನಿವಾಸಿಯಾಗಿದ್ದು, ಕೆಲ ವರ್ಷಗಳಿಂದ ಮಂಚಿಗೆ ಬಂದು ವಾಸವಾಗಿದ್ದಾರೆ. ನಾಲ್ಕು ಮದುವೆಯಾಗಿರುವ ದಾವೂದ್ ಗೆ 15 ಮಕ್ಕಳಿದ್ದು, ತನ್ನ 2ನೆ ಪತ್ನಿಯ ಮಗಳ ಮೇಲೆ ಅತ್ಯಾಚಾರ ಎಸಗಿರುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಬಾಲಕಿ ಆರೋಪಿಸಿರುವ ಪ್ರಕಾರ ಎರಡು ಬಾರಿ ಮನೆಯಲ್ಲಿ ಒಂದು ಬಾರಿ ಮೆಲ್ಕಾರ್ ನ ಲಾಡ್ಜ್ ವೊಂದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.ದಾವೂದ್ ನ ಮೊದಲನೆ ಪತ್ನಿ ಬಿಟ್ಟು ಹೋಗಿದ್ದು, ಉಳಿದವರು ಒಂದೊಂದು ಕಡೆ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.
ವಾರಗಳ ಹಿಂದೆ ಸಂತ್ರಸ್ತೆಯ ಮೇಲೆ ಬಾಲಕಿಯ ಅಕ್ಕನ ಗಂಡ ಕೂಡ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚೈಲ್ಡ್ ಹೆಲ್ಪ್ ಲೈನ್ ಅವರು ಸಂತ್ರಸ್ತೆಯನ್ನು ವಿಚಾರಣೆ ನಡೆಸಿದಾಗ ತಂದೆಯು ಕೂಡಾ ತನ್ನ ಮೇಲೆ ಮೂರು ಬಾರಿ ಅತ್ಯಾಚಾರ ಮಾಡಿದ್ದಾರೆನ್ನುವ ಆಘಾತಕಾರಿ ವಿಷಯ ಬೆಳಕಿದೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications