ಬಾಳಿಗಾ ಹತ್ಯೆ ಪ್ರಕರಣ: ನರೇಶ್ ಶೆಣೈಗೆ ಸುಪ್ರೀಂನಿಂದ ನೋಟಿಸ್!

Posted By:
Subscribe to Oneindia Kannada

ನವದೆಹಲಿ, ನವೆಂಬರ್ 28: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಪ್ರಮುಖ ಆರೋಪಿ ನರೇಶ್ ಶೆಣೈಗೆ ಮತ್ತೆ ಹಿನ್ನಡೆಯಾಗಿದೆ. ನರೇಶ್ ಶೆಣೈಗೆ ಸುಪ್ರೀಂಕೋರ್ಟಿನಿಂದ ಸೋಮವಾರ ನೋಟಿಸ್ ಜಾರಿಯಾಗಿದೆ.

ಶೆಣೈಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಬಾಳಿಗಾ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಹಾಕಿದ್ದ ಅರ್ಜಿ ಹಾಕಿದ್ದರು.

ವಿನಾಯಕ್ ಬಾಳಿಗ ಅವರ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವಾಗ ಪ್ರಮುಖ ಆರೋಪಿಗೆ ಜಾಮೀನು ನೀಡಿದ್ದರಿಂದ ತನಿಖೆಗೆ ತಡೆಯಾಗುತ್ತದೆ. ತಮ್ಮ ಕುಟುಂಬಕ್ಕೂ ಅಪಾಯ ಹಾಗೂ ಸಾಕ್ಷಿ ನಾಶಕ್ಕೂ ಸಹಕಾರಿಯಾಗಲಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. [ಶೆಣೈಗೆ ಜಾಮೀನು ನೀಡಿದ್ದೇಕೆ, ಬಾಳಿಗಾ ಕುಟುಂಬದಿಂದ ಸುಪ್ರೀಂಗೆ ಅರ್ಜಿ]

Supreme Court issues notice to Vinayak Baliga murder accused

ಈ ಮಧ್ಯೆ ನಾರ್ಕೊ ಅನಾಲಿಸಿಸ್‌ಗೆ ಆರೋಪಿ ನರೇಶ್ ಶೆಣೈ ನಿರಾಕರಿಸಿರುವುದನ್ನು ಮಂಗಳೂರು ಸೆಷನ್ಸ್ ಕೋರ್ಟ್‌ ಎತ್ತಿಹಿಡಿದಿದೆ. ಈ ತೀರ್ಪಿನ ವಿರುದ್ಧವೂ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್‌ನ ನ್ಯಾಯವಾದಿ ರವೀಂದ್ರ ಕಾಮತ್ ತಿಳಿಸಿದ್ದಾರೆ.

ಆರೋಪಿಗೆ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಹೊರಬೀಳುವ ಸಾಧ್ಯತೆ ಇದೆ. ಆದ್ದರಿಂದ ಮಂಪರು ಪರೀಕ್ಷೆಗೆ ಸಮ್ಮತಿ ನೀಡುವಂತೆ ಕೋರಿ ಬಾಳಿಗಾ ಕುಟಂಬ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ. ತನ್ನನ್ನು ತಾನು ಅಮಾಯಕನೆಂದು ಹೇಳಿಕೊಳ್ಳುತ್ತಿರುವ ನರೇಶ್ ಶೆಣೈಗೆ ಮಂಪರು ಪರೀಕ್ಷೆಗೆ ಒಳಪಡಲು ಆತಂಕ ಯಾಕೆ ಎಂದು ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court on Monday issued notice to Naresh Shenoy accused in the murder of RTI activist Vinayak Baliga. The slain RTI activist's family had approached the Supreme Court after Naresh Shenoy was granted bail by the Karnataka High Court.
Please Wait while comments are loading...