ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಯಿಯೇ ನನಗೆ ಸ್ಫೂರ್ತಿ: ಪಿಯುಸಿ ಟಾಪರ್ ಸೃಜನಾ

ನನ್ನ ತಾಯಿಯೇ ನನಗೆ ಸ್ಫೂರ್ತಿ , ಆಕೆಯೇ ನನ್ನ ಬಲ ಎಂದು ಸೃಜನಾ ಇದು ಇಂದು ಹೊರಬಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿರುವ ಸೃಜನಾ ಮಾತು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 11: ನನ್ನ ತಾಯಿಯೇ ನನಗೆ ಸ್ಫೂರ್ತಿ , ಆಕೆಯೇ ನನ್ನ ಬಲ ಎಂದು ಸೃಜನಾ ಇದು ಇಂದು ಹೊರಬಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿರುವ ಸೃಜನಾ ಮಾತು. ಒಟ್ಟು 596 (600) ಅಂಕ ಪಡೆದ ಅವರು ತಮ್ಮ ಸಂತಸವನ್ನು 'ಒನ್ ಇಂಡಿಯಾ' ಜೊತೆ ಹಂಚಿಕೊಂಡರು.

ತುಮಕೂರು ಮೂಲದ ಸೃಜನಾ ಎನ್. 596 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದು, ಈಕೆ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.[ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಸೃಜನಾ, ರಾಧಿಕಾ, ಚೈತ್ರಾ ಟಾಪರ್ಸ್]

My mother is an inspiration to me: Srujana Karnataka 2nd PUC topper

ಉದ್ಯಮಿ ನಿರಂಜನ್ ಪಿ. ಹಾಗೂ ಬೆಂಗಳೂರಿನ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿರುವ ಡಾ. ನಳಿನಿ ಎನ್. ದಂಪತಿಯ ಪುತ್ರಿ ಸೃಜನಾ.

ಭೌತಶಾಸ್ತ್ರ, ರಸಾಯನಶಾಸ್ತ್ರ, ವಿಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ ಗಳಲ್ಲಿ ತಲಾ 100 ಅಂಕಗಳು ಹಾಗೂ ಇಂಗ್ಲಿಷ್‌ನಲ್ಲಿ 97 ಮತ್ತು ಹಿಂದಿಯಲ್ಲಿ 99 ಅಂಕಗಳನ್ನು ಸೃಜನಾ ಪಡೆದುಕೊಂಡಿದ್ದಾರೆ. ಸೃಜನಾ ನಿಟ್ಟೆ ಇಂಟರ್ ನ್ಯಾಷನಲ್ ಶಾಲೆಯಲ್ಲಿ 10ನೆ ತರಗತಿಯಲ್ಲಿ ಸಿಜಿಪಿಎ ಗ್ರೇಡ್ 10 ಅಂಕಗಳನ್ನು ಪಡೆದಿದ್ದರು.[ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಈಗ ಲಭ್ಯ]

My mother is an inspiration to me: Srujana Karnataka 2nd PUC topper

'ನನ್ನ ತಾಯಿಯೇ ನನಗೆ ಎಲ್ಲ ಆಕೆಯ ನನ್ನ ಸ್ಪೋರ್ತಿ ಹಾಗೂ ನನ್ನ ಬಲ, ಪ್ರಸ್ತುತ ಬೆಂಗಳೂರಿನ ನಿಟ್ಟೆ ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ನನ್ನ ತಾಯಿ ಫ್ರೊಫೆಸರ್ ಆಗಿದ್ದಾರೆ. 2 ವರ್ಷ ಎಕ್ಸ್ಪರ್ಟ್ ಕಾಲೇಜಿನ ಹಾಸ್ಟೆಲ್ ನಲ್ಲಿದ್ದುಕೊಂಡೇ ನಾನು ದ್ವಿತೀಯ ಪಿಯುಸಿ ಮುಗಿಸಿದ್ದೇನೆ. ಉತ್ತಮ ಕೋಚಿಂಗ್ ಸಿಕ್ಕಿದ್ದರಿಂದಲೇ ನಾನು ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೆ. ಉತ್ತಮ ಅಂಕಗಳನ್ನು ನಿರೀಕ್ಷಿಸಿದ್ದೆ ಎಂದು ಸಜನಾ ಒನ್ ಇಂಡಿಯಾಕ್ಕೆ ತಿಳಿಸಿದರು.

'ನನ್ನ ಮಗಳ ಈ ಸಾಧನೆಗೆ ಬಹಳ ಖುಷಿ ಆಗಿದೆ. ಆಕೆ ಪಿಸಿಎಂಸಿಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವುದಾಗಿ ಹೇಳಿಕೊಂಡಿದ್ದಳು. ತನ್ನ ಮಾತನ್ನು ಆಕೆ ಉಳಿಸಿಕೊಂಡಿದ್ದಾಳೆ. ಆಕೆಯ ಸಾಧನೆ ಖುಷಿ ತಂದಿದೆ ಎಂದು ಸೃಜನಾ ತಾಯಿ ಡಾ. ನಳಿನಿ ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.

English summary
My mother is an inspiration to me, and she is my strength, 2nd PUC topper from Mangaluru expert college Srujana N. told to Oneindia
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X