Viral: ರೈಲಿನಲ್ಲಿ ಊಟಕ್ಕೆ ದುಪ್ಪಟ್ಟು ದರ: 139ಕ್ಕೆ ದೂರು ನೀಡುತ್ತಿದ್ದಂತೆ ಮಾರಾಟಗಾರ ಶಾಕ್

Viral News: ರಸ್ತೆ ಬದಿ, ಹೋಟೆಲ್‌ಗಳಲ್ಲಿ ಅದೆಷ್ಟೋ ಬಾರಿ ನಾವು ಆಹಾರ ದರ ಕೇಳದೇ ಅಥವಾ ಪರಿಸ್ಥಿತಿಗೆ ಕಟ್ಟು ಬಿದ್ದು ಕೇಳಿದ ಬೆಲೆ ಊಟ, ತಿಂಡಿ ಖರೀದಿಸುತ್ತೇವೆ. ಕೆಲವು ಇದೇ ವಿಚಾರವಾಗಿ ಜಗಳ ಆಡಿದರೂ ಪ್ರಯೋಜನವಾಗಿರಲ್ಲ. ಅದೇ ಇಲ್ಲೊಬ್ಬರು ರೈಲಿನಲ್ಲಿ ಊಟ ಆರ್ಡರ್ ಮಾಡಿ ಪಡೆದ ಮೇಲೆ ಅದರ ಬೆಲೆ ನೋಡಿ ಪ್ರಯಾಣಿಕರು ದಂಗಾಗಿದ್ದಾರೆ. ಕುಡಲೇ ದೂರು ನೀಡುತ್ತಿದ್ದಂತೆ ಹೆಚ್ಚು ಹಣ ಪಡೆದ ಮಾರಾಟಗಾರ ಸಂಕಷ್ಟ ಎದುರಿಸುವಂತಾಗಿದೆ. ವಾದಕ್ಕಿಂತ ಅರಿವು, ಜ್ಞಾನ ಮುಖ್ಯ ಎಂಬ ಪಾಠ ಹೇಳಿಕೊಡುವ ಘಟನೆ ವೈರಲ್ ಆಗಿದೆ.

ರೈಲಿನಲ್ಲಿ ಹೆಚ್ಚಿನ ಬೆಲೆಗೆ ಆಹಾರ ಮಾರಾಟ ಮಾಡಿದ ಮಾರಾಟಗಾರ ಪರದಾಡಿತ ಘಟನೆ ಕುರಿತು ಆರಾಧ್ಯ ಎಂಬುವವರು (@ItsAradhya__) ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರೈಲಿನಲ್ಲಿ ನಡೆದ ಘಟನೆ ವೈರಲ್ ಆಗುತ್ತಿದೆ.

Train Passenger

ರೈಲಿನಲ್ಲಿ ಪ್ರಯಾಣಿಕರೊಬ್ಬರು ಊಟ ಆರ್ಡರ್ ಮಾಡಿದ್ದರು. ಆದರೆ ಅದಕ್ಕೆ ದುಪ್ಪಟ್ಟು ಹಣ ಪಡೆದಿದ್ದು ಅವರ ಗಮನಕ್ಕೆ ಬಂದಿತ್ತು. ಸಾಮಾನ್ಯವಾಗಿ ರೈಲಿನಲ್ಲಿನ 70-80 ರೂಪಾಯಿ ಊಟದ ಪ್ಯಾಕೆಟ್‌ಗೆ ಅಧಿಕ ದರ ವಿಧಿಸಲಾಗಿತ್ತು. ಹಣ ಪಡೆದ ಕುರಿತು ಬಿಲ್ ನೀಡುವಂತೆ ಪ್ರಯಾಣಿಕರು ಕೇಳಿದರು ಮಾರಾಟಗಾರ ನೀಡಲಿಲ್ಲ. ಇದಕ್ಕೆಲ್ಲ 'ಬಿಲ್ ಲಭ್ಯವಿಲ್ಲ" ಎಂಬ ಮನಬಂದಂತೆ ಪ್ರತಿಕ್ರಿಯಿಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಪ್ರಯಾಣಿಕ ದೂರು ನೀಡಲು ಮುಂದಾದರು.

Karnataka Railways: ಪಂಚಗಂಗಾ ಸೇರಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ, ಹೊಸ ವೇಳಾಪಟ್ಟಿ
Karnataka Railways: ಪಂಚಗಂಗಾ ಸೇರಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ, ಹೊಸ ವೇಳಾಪಟ್ಟಿ

ದೂರು ಕೊಡುತ್ತಿದ್ದಂತೆ ಪರಿಸ್ಥಿತಿ ಸಂಪೂರ್ಣ ಬದಲು

ಅನೇಕ ಕಡೆಗಳಲ್ಲಿ ಈ ರೀತಿ ಆದಾಗ ಜನರು/ಪ್ರಯಾಣಿಕರು ಇಂತಹ ಘಟನೆಗಳನ್ನು ನಿರ್ಲಕ್ಷಿಸುತ್ತಾರೆ. ಅವರೊಂದಿಗೆ ಜಗಳವಾಡಲು ಸಿದ್ಧರಿರುವುದಿಲ್ಲ. ಅಕ್ಕಪಕ್ಕದವರು ಯಾರಾದರೂ, ಏನಾದರೂ ಅಂದುಕೊಳ್ಳುತ್ತಾರೆಂದು ಯೋಚಿಸುತ್ತಾರೆ. ಇಲ್ಲಿ ರೈಲು ಪ್ರಯಾಣಿಕರು ಸುಮ್ಮನಿರದೇ ತಕ್ಷಣವೇ ರೈಲ್ವೆ ಸಹಾಯವಾಣಿ 139ಕ್ಕೆ ಮಾಡಿದ್ದಾರೆ. ಅಲ್ಲಿ ತಮಗಾದ ಅನುಭವದ ಕುರಿತು ದೂರು ದಾಖಲಿಸುತ್ತಿದ್ದಂತೆ ಕೂಡಲೇ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.

ರೈಲು ನಿಯಮ ಉಲ್ಲಂಘನೆ; ದಂಡ-ಶಿಕ್ಷೆಯ ಭೀತಿ

ದೂರು ಕೊಟ್ಟ ಕೆಲವೇ ನಿಮಿಷಗಳಲ್ಲಿ ಆ ಪ್ರಯಾಣಿಕರತ್ತ ಮಾರಾಟಗಾರ ಆತಂಕ ಮತ್ತು ಕೋಪದಿಂದ ದೌಡಾಯಿಸಿದ್ದಾನೆ. ದಯವಿಟ್ಟು ದೂರು ಹಿಂಪಡೆಯಬೇಕು. ಊಟ ಹಿಂದಿರುಗಿಸುವಂತೆ ಆತ ಪ್ರಯಾಣಿಕನ ಬಳಿ ವಿನಂತಿಸಿಕೊಂಡಿದ್ದಾರೆ. ಬಿಲ್ ಇಲ್ಲದೆ ಆಹಾರ ಮಾರಾಟ ಮಾಡುವುದು ರೈಲ್ವೆ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ತಾವು ಇಂದಿನ ಘಟನೆಯಿಂದ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಜೊತೆಗೆ ದಂಡ ಸಹ ಬೀಳಬಹುದು ಎಂದು ಮಾರಾಟಗಾರ ಪ್ರಯಾಣಿಕರಲ್ಲಿ ಹೇಳಿಕೊಂಡಿದ್ದಾರೆ. ನಂತರ ಪರಿಸ್ಥಿತಿ ತಿಳಿ ಆಯಿತು ಎನ್ನಲಾಗಿದೆ.

ಈ ಘಟನೆ ತಿಳಿಯುವುದೇನೆಂದರೆ ಯಾರೂ ಪ್ರಶ್ನಿಸುವುದಿಲ್ಲ ಎಂಬ ಭಾವನೆಯಿಂದಲೇ ಅನೇಕರು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಾರೆ. ಇದ್ದ ಬೆಲೆಗಿಂತ ಹೆಚ್ಚು ಹಣ ಪಡೆಯಲು ಮುಂದಾಗುತ್ತಾರೆ. ಆ ಬಗ್ಗೆ ಪಾರದರ್ಶಕತೆ ಮತ್ತು ಪುರಾವೆಗಳನ್ನು ಕೇಳಿದ ತಕ್ಷಣ ಅವರ ಆತ್ಮವಿಶ್ವಾಸ ಕುಗ್ಗಿಬಿಡುತ್ತದೆ. ಕೆಲವೊಮ್ಮೆ ಇಂತವರ ಬಳಿ ವಾದ ಮಾಡದೇ ಜ್ಞಾನ, ಅರಿವಿನಿಂದ ಮಾತನಾಡಿದರೆ ಬುದ್ಧಿ ಕಲಿಸಬಹುದು ಎಂಬುದು ಈ ಘಟನೆ ತೋರಿಸಿಕೊಡುತ್ತದೆ.

ನೆಟ್ಟಿಗರು ಹೇಳಿದ್ದೇನು?

ಈ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ದಿನಕ್ಕೆ ಹೀಗೆ ನೂರಾರು ರೂಪಾಯಿ ಲಾಭ ಪಡೆಯುವ ಇಂಥವರು ಕನಿಷ್ಠ 5 ಸಾವಿರ ರೂಪಾಯಿ ಸಂಪಾದಿಸಬಹುದು. 100 ಆಹಾರ ಪೊಟ್ಟಣಕ್ಕೆ 50 ರೂ. ಅಧಿಕ ಹಣ ಪಡೆದರೂ ಐದು ಸಾವಿರ ರೂಪಾಯಿ ಆಗುತ್ತದೆ. ಮಾಸಿಕ, 1.50 ಲಕ್ಷ ರೂಪಾಯಿ ಆದಾಯ. ಇದು ಶಿಕ್ಷಕರು, ಇಂಜಿನಿಯರ್ ಸೇರಿದಂತೆ ಇತರ ವೃತ್ತಿಪರರ ಆದಾಯಕ್ಕಿಂತಲೂ ಅಧಿಕ ಎಂದು ಕಾಮೆಂಟ್ ಮಾಡಿದ್ದಾರೆ. ಇಂತವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಕೆಲವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+