ನನ್ನ ಅಮ್ಮ ಕಳೆದುಹೋಗಿದ್ದಾರೆ, ಯಾರಾದರೂ ಹುಡುಕಿಕೊಡಿ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್, 10 : ತಾಯಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿಯ ಹುಡುಕಾಟದಲ್ಲಿ ತೊಡಗಿರುವ ಮಗ ಒಂದು ವೆಬ್‌ಸೈಟ್ ತೆರೆದಿದ್ದು, ತಾಯಿಯ ಪ್ರೀತಿಗಾಗಿ ಹಂಬಲಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಕೊರ್ಗಿ ಗ್ರಾಮದ ಮಾಲತಿ ಬಿ ಶೆಟ್ಟಿ ನಾಪತ್ತೆಯಾದ ಮಹಿಳೆ. 65ವರ್ಷದವರಾದ ಇವರು ಜೂನ್ 24ರ, ಬುಧವಾರ ಮನೆಯಲ್ಲಿ ಸಂಬಂಧಿಕರ ಮನೆಗೆ ತೆರಳುವೆ ಎಂದು ಹೇಳಿ ಹೊರಟವರು ಇನ್ನು ಮನೆ ಸೇರಿಲ್ಲ.[ಸಾಮಾಜಿಕ ಮಾಧ್ಯಮ ದಿನಕ್ಕೆ ಒನ್ಇಂಡಿಯಾ ಕೊಡುಗೆ]

Mother goes missing; techie son launches website, announces cash reward in Mangaluru

ತಾಯಿ ಕಳೆದುಕೊಂಡಿರುವ ದುಃಖದಲ್ಲಿರುವ ಸತೀಶ್ ಶೆಟ್ಟಿ ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ತಾಯಿಯನ್ನು ಪತ್ತೆ ಹಚ್ಚುವುದಕ್ಕಾಗಿ ಆಗಸ್ಟ್ 8 ಶನಿವಾರದಂದು "http://www.mommissing.org/" ಹೆಸರಿನ ವೆಬ್‌ಸೈಟ್ ಸೃಷ್ಟಿಸಿ ಅವರ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ವೆಬ್‌ಸೈಟ್‌ ನಲ್ಲಿ ಏನಿದೆ?

ನನ್ನ ತಾಯಿಯ ಹೆಸರು ಮಾಲತಿ ಬಿ ಶೆಟ್ಟಿ. ಅವರು ಹುಟ್ಟಿದ್ದು ಕಂದಾವರದ ಹೆಬ್ಚಾಗಿಲು ಮನೆ, ಚಾರುಕೊಟ್ಟಿಗೆ, ಕೊರ್ಗಿ ಗ್ರಾಮ, ಕುಂದಾಪುರ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ. ಮಾಲತಿ ಅವರು ಜೂನ್ 24ರ ಬುಧವಾರ ಕಾಣೆಯಾಗಿದ್ದಾರೆ.

ಕೇದೂರ್ ಭಾಸ್ಕರ್ ಶೆಟ್ಟಿಯೊಂದಿಗೆ ಮದುವೆಯಾದ ಇವರು ಮಗಳು ಸರಳ ಶೆಟ್ಟಿ, ಅಳಿಯ ಡಾ. ರಾಮ್ ಮನೋಹರ್‌ ಶೆಟ್ಟಿ ಮತ್ತು ಮಗ ಸತೀಶ್ ಶೆಟ್ಟಿ ಅವರನ್ನು ಹೊಂದಿದ್ದಾರೆ.[ಗಂಡನ ಕಳೆದುಕೊಂಡ ಮಹಿಳೆಯ ನೋವಿನ ಪತ್ರ]

ಇವರು ಜೂನ್ 24ರಂದು ಸುಮಾರು 1.30 ಗೆ ಮನೆಯಿಂದ ತೆರಳಿದ್ದು, ಅವರ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಮ್ಮನನ್ನು ಪತ್ತೆ ಹಚ್ಚಲು ಜುಲೈ 4ನೇ ತಾರೀಖಿಗೆ ಭಾರತಕ್ಕೆ ಬಂದಿದ್ದು, ಜುಲೈ 19ರವರೆಗೆ ಅವರ ಹುಡುಕಾಟದಲ್ಲಿ ತೊಡಗಿದ್ದೆ. ಈ ವಿಚಾರವಾಗಿ ಉಡುಪಿಯ ಸಬ್ ಇನ್ಸ್ ಪೆಕ್ಟರ್ ಅಣ್ಣಾಮಲೈ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಗಿದೆ.

ಮನೆ ಬಿಟ್ಟು ಹೊರಟ ಸಮಯದಲ್ಲಿ ಕ್ರಿಮ್ ಸೀರೆ ಹಾಗೂ ಗುಲಾಬಿ ಬಣ್ಣದ ಕುಪ್ಪಸ ಧರಿಸಿದ್ದರು. 5.5 ಅಡಿ ಉದ್ದವಿರುವ ಇವರು ೬೫ ವರ್ಷದವರಾಗಿದ್ದು, ಬಿಳಿವರ್ಣದವರಾಗಿದ್ದಾರೆ. ಸುಮಾರು 3.7 ಲಕ್ಷ ಬೆಲೆಬಾಳುವ ಒಡವೆ ಧರಿಸಿದ ನನ್ನ ತಾಯಿಯ ಬೆರಳುಗಳಲ್ಲಿ ಸ್ವಲ್ಪ ಮಟ್ಟಿನ ದೋಷ ಕಂಡು ಬರುತ್ತದೆ.

ನಾನು ನಿಮ್ಮ ಸಲಹೆ ಸಹಕಾರ ಬಯಸಿದ್ದು, ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಗೂ ವಾಟ್ಸಪ್ ನಲ್ಲಿ ಶೇರ್ ಮಾಡುವ ಮೂಲಕ ನನ್ನ ತಾಯಿಯ ಹುಡುಕಾಟದಲ್ಲಿ ಕೈ ಜೋಡಿಸಬೇಕೆಂದು ವಿನಂತಿಸಿಕೊಳ್ಳುದ್ದೇನೆ.

ಪೊಲೀಸ್ ಪ್ರಕರಣ :
ನನ್ನ ತಾಯಿ ಮಾಲತಿ ನಾಪತ್ತೆ ಕುರಿತಾಗಿ ಜೂನ್ 26ರಂದು ಕುಂದಾಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಸುಮಾರು ರಾತ್ರಿ 9.30ರ ವೇಳೆಯಲ್ಲಿ ದೂರು ದಾಖಲಿಸಿದ್ದೇವೆ.

ಇದರ ಕುರಿತಾಗಿ ಉಡುಪಿ ಎಸ್ ಪಿ, ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತನಿಖೆ ಕೈಗೊಂಡಿದ್ದು, ಸಂಬಂಧಿಸಿದ ಎಲ್ಲರನ್ನು ವಿಚಾರಣೆ ನಡೆಸಲಾಗಿದೆ. ಉಡುಪಿ ಎಸ್‌ಪಿ ಅವರು ವಿಚಾರಣೆ ಮುಂದುವರಿಕೆಗಾಗಿ ಡಿವೈಎಸ್ ಪಿ ಮಂಜುನಾಥ್ ಅವರ ಮುಂದಾಳತ್ವದಲ್ಲಿ ವಿಶೇಷ ತನಿಖಾ ದಳ ನೇಮಿಸಲಾಗಿದೆ.

ಬಹುಮಾನ ಪ್ರಕಟ:
ಸತೀಶ್ ಶೆಟ್ಟಿ ಅವರು ಕಾಣೆಯಾದ ತನ್ನ ತಾಯಿಯನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಕೊಡುವುದಾಗಿ ತಿಳಿಸಿದ್ದಾರೆ.

ನನ್ನ ತಾಯಿಯ ಮಾಹಿತಿ ದೊರೆತಲ್ಲಿ ಇಲ್ಲಿಗೆ ಸಂಪರ್ಕಿಸಿ:

India Contact Numbers: 9448770427, 9480402280, 9686376273
USA Contact number: +01-425-985-8004
Email us at shetty123@gmail.com

Or

Contact Kundapur Police Station: 08254-230338, Email: cpikundapuraudp@ksp.gov.in, sdpokndudp@ksp.gov.in

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Its 65-year-old woman went missing in Korgi village of Kundapur taluk in Udupi district, on Wednesday, June 24.In a hope to find his mother Malathi B Shetty, Satish Shetty, her techie son launch website, "http://www.mommissing.org/" on Saturday, Aug 8.
 
Please Wait while comments are loading...