ಫಲಿತಾಂಶ : ಬೆಳ್ತಂಗಡಿಯ ಸುಶ್ರುತ್ ರಾಜ್ಯಕ್ಕೆ ದ್ವಿತೀಯ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 16 : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಶ್ರುತ್ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ.

ಸುಶ್ರುತ್ ಬೆಳ್ತಂಗಡಿ ತಾಲೂಕಿನ ಲ್ಯಾಲ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ. ಯು.ವಿ. ಕಿಶೋರ್ ಕುಮಾರ್, ಸುರೇಖಾ ದಂಪತಿಯ ಪುತ್ರ ಸುಶ್ರುತ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಮಗನ ಸಾಧನೆ ಬಗ್ಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. [SSLC ಫಲಿತಾಂಶ ಆನ್ ಲೈನ್ ನಲ್ಲಿ ಲಭ್ಯ]

sushruth

ಒನ್ ಇಂಡಿಯಾ ಜೊತೆ ಮಾತನಾಡಿದ ಸುಶ್ರುತ್ ಪೋಷಕರು, 'ಸುಶ್ರುತ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದಕ್ಕೆ ಹೆಮ್ಮೆ ಇದೆ. ಅವನಿಗೆ ಹಿಂದಿ ಕಠಿಣವಾದ ವಿಷಯವಾಗಿತ್ತು' ಎಂದು ಹೇಳಿದರು. [ಸರ್ಕಾರಿ ವೆಬ್ ಸೈಟ್ ನಲ್ಲಿ ಮಾತ್ರ ಫಲಿತಾಂಶ]

'624 ಅಂಕಗಳನ್ನು ನೋಡಿ ಭಾರೀ ಸಂತಸವಾಗಿದೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಫಾರ್ಮಸಿ ಅಧ್ಯಯನ ಮಾಡಬೇಕು ಎಂಬ ಆಸೆ ಇದೆ' ಎಂದರು ಶುಶ್ರುತ್.

ಸುಶ್ರುತ್ ಬೆಳಗ್ಗೆ 5 ಗಂಟೆಯಿಂದ 8 ಗಂಟೆ ತನಕ ಮತ್ತು ರಾತ್ರಿ 8 ರಿಂದ 11 ರ ತನಕ ಅಭ್ಯಾಸ ಮಾಡುತ್ತಿದ್ದ. ಸುಶ್ರುತ್ ಯಾವುದೇ ಟ್ಯೂಷನ್‌ಗೆ ಹೋಗಿಲ್ಲ. ತಾಯಿ ಸುರೇಖಾ ಅವರು ಗುರುವಾಯನಕೆರೆ ಹೈಸ್ಕೂಲ್ ಶಿಕ್ಷಕಿಯಾಗಿದ್ದು, ಮಗನ ಓದಿಗೆ ಸಹಕಾರ ನೀಡುತ್ತಿದ್ದರು. [SSLC ಫಲಿತಾಂಶ : ಯಾವ ಜಿಲ್ಲೆ ಪ್ರಥಮ, ಯಾವುದು ಕೊನೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka SSLC results 2016 : Sushrutha student of Laila ST.Marys English medium school Belthangady, Dakshina Kannada obtained state second rank with 624 marks.
Please Wait while comments are loading...