Get Updates
Get notified of breaking news, exclusive insights, and must-see stories!

ನಾಡೋಜ, ಶತಾಯುಷಿ ಕಯ್ಯಾರರಿಗೆ ಬಂಟರಿಂದ ಸನ್ಮಾನ

ಮಂಗಳೂರು, ಜೂ.8: ಕವಿ, ಸ್ವಾತಂತ್ರ್ಯ ಹೋರಾಟಗಾರ, ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರು 100ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಶತಾಯುಷಿ ಡಾ. ಕಯ್ಯಾರ ಅವರನ್ನು ಬಂಟರ ಯಾನೆ ನಾಡವರ ಮಾತೃ ಸಂಘವು ಭಾನುವಾರ ಆತ್ಮೀಯವಾಗಿ ಸನ್ಮಾನಿಸಿದೆ.

ಬದಿಯಡ್ಕದಲ್ಲಿರುವ ಕಿಂಞಣ್ಣರೈಯವರ ಕವಿತಾ ಕುಟೀರದಲ್ಲಿ ಡಾ. ಕಯ್ಯಾರ ಕಿಂಞಣ್ಣ ರೈ ಅವರನ್ನು ಸನ್ಮಾನಿಸಿ ಬಂಟರ ಸಂಘದವರು ಧನ್ಯತೆ ಅನುಭವಿಸಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈಯವರ ನೇತೃತ್ವದಲ್ಲಿ ಕವಿ ಕಯ್ಯಾರ ಕಿಂಞಣ್ಣ ರೈಯವರನ್ನು ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ.ಕಯ್ಯಾರ ಅವರನ್ನು ಕರ್ನಾಟಕ ಸರಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ. ಕಯ್ಯಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರಕಾರ ನೀಡುವಂತೆ ಬಂಟರ ಯಾನೆ ನಾಡವರ ಮಾತೃ ಸಂಘವು ಈಗಾಗಲೇ ಮನವಿ ಮಾಡಿದೆ. ಆ ಪುರಸ್ಕಾರವೂ ಕಯ್ಯಾರರಿಗೆ ಶೀಘ್ರದಲ್ಲೇ ದೊರೆಯಲಿ ಎಂದು ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು. ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರ ಸನ್ಮಾನ ಕಾರ್ಯಕ್ರಮದ ಚಿತ್ರಗಳು ಮುಂದಿವೆ ನೋಡಿ...[ಸಚಿತ್ರ ಮಾಹಿತಿ : ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು]

ಬಂಟರ ಯಾನೆ ನಾಡವರ ಮಾತೃಸಂಘದಿಂದ ಸನ್ಮಾನ

ಬಂಟರ ಯಾನೆ ನಾಡವರ ಮಾತೃಸಂಘದಿಂದ ಸನ್ಮಾನ

ಕವಿ, ಸ್ವಾತಂತ್ರ್ಯ ಹೋರಾಟಗಾರ, ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರು 100ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಶತಾಯುಷಿ ಡಾ. ಕಯ್ಯಾರ ಅವರನ್ನು ಬಂಟರ ಯಾನೆ ನಾಡವರ ಮಾತೃ ಸಂಘವು ಭಾನುವಾರ ಆತ್ಮೀಯವಾಗಿ ಸನ್ಮಾನಿಸಿದೆ.

ಕಯ್ಯಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗಲಿ

ಕಯ್ಯಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗಲಿ

ನಾಡೋಜ ಡಾ. ಕಯ್ಯಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರಕಾರ ನೀಡುವಂತೆ ಬಂಟರ ಯಾನೆ ನಾಡವರ ಮಾತೃ ಸಂಘವು ಈಗಾಗಲೇ ಮನವಿ ಮಾಡಿದೆ. ಆ ಪುರಸ್ಕಾರವೂ ಕಯ್ಯಾರರಿಗೆ ಶೀಘ್ರದಲ್ಲೇ ದೊರೆಯಲಿ ಎಂದು ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು

ಬಂಟರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು

ಬಂಟರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು

ಕಯ್ಯಾರ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಡಾ.ಆಶಾಜ್ಯೋತಿ ರೈ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಜಯರಾಮ ಸಾಂತ.

ಬಂಟರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ಸುಂದರ ಶೆಟ್ಟಿ, ಎಂ. ಕರುಣಾಕರ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ವಿಕಾಶ್ ಹೆಗ್ಡೆ, ಪತ್ರಕರ್ತ ರವೀಂದ್ರ ಶೆಟ್ಟಿ, ಪ್ರತಾಪ್ ಭಂಡಾರಿ, ನಿವೇದಿತಾ ಶೆಟ್ಟಿ, ಸಾರಿಕಾ ಭಂಡಾರಿ, ಕೋಟಿ ಪ್ರಸಾದ್ ಆಳ್ವ, ಸುಜಯ ಸೇಮಿತ, ಜಗದೀಶ್ ಶೆಟ್ಟಿ , ಅಶ್ವಥಾಮ ಹೆಗ್ಡೆ, ರವಿರಾಜ್ ಶೆಟ್ಟಿ, ರಘು ಪಡೀಲ್ ಕಾಸರಗೋಡು ತಾಲೂಕು ಸಮಿತಿಯ ಸಂಚಾಲಕ ಪದ್ಮನಾಭ ರೈ, ಸುಬ್ಬಯ್ಯ ರೈ, ಸತೀಶ್ ಅಡಪ ಮೊದಲಾದವರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲೂ ಕಯ್ಯಾರ 100 ಆಚರಣೆ

ಬೆಂಗಳೂರಿನಲ್ಲೂ ಕಯ್ಯಾರ 100 ಆಚರಣೆ

ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈಶತಮಾನೋತ್ಸವವನ್ನು ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಬೆಂಗಳೂರಿನಲ್ಲಿ ಆಚರಿಸಿದ್ದಾರೆ. ಸಾರೋಟದಲ್ಲಿ ವೈಭವವಾಗಿ ಕಯ್ಯಾರ ಅವರ ಭಾವಚಿತ್ರ ಮೆರವಣಿಗೆ ನಡೆಸಿ ಮಾತನಾಡಿದ ವಾಟಾಳ್, ಕಯ್ಯಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗಬೇಕಿದೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಿದೆ, ಮಹಾಜನ್ ವರದಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಕಯ್ಯಾರ ಅವರ ಹೋರಾಟಕ್ಕೆ ಬೆಲೆ ಸಿಗಬೇಕಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+