• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿರಾಜ್ಯ ಮಟ್ಟದ ಪ್ರಥಮ ಯುವ ವೈಜ್ಞಾನಿಕ ಸಂಸತ್ ಅಧಿವೇಶನ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 28: ಯುವಜನತೆ ಹೊಸ ಆವಿಷ್ಕಾರಗಳನ್ನು ಮಾಡುವ ಚಿಂತನೆ ನಡೆಸಬೇಕು ಎಂದು ಇಸ್ರೋ ಮಾಜಿ ಅಧ್ಯಕ್ಷ, ವಿಜ್ಞಾನಿ ಡಾ. ಎ.ಎಸ್. ಕಿರಣ್‌ಕುಮಾರ್ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಹಾಗೂ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ನಡೆದ ರಾಜ್ಯ ಮಟ್ಟದ ಪ್ರಥಮ ಯುವ ವೈಜ್ಞಾನಿಕ ಸಂಸತ್ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆ ಕಾಯಕರ್ತರ ಪ್ರತಿಭಟನೆರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆ ಕಾಯಕರ್ತರ ಪ್ರತಿಭಟನೆ

"ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸಿಕೊಂಡಲ್ಲಿ ಮಾತ್ರ ಮನುಷ್ಯನ ಪ್ರಗತಿ ಸಾಧ್ಯವಾಗುತ್ತದೆ. ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತಾಗಬೇಕು. ಭಾರತ ಇಂದು ವಿಶ್ವ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದರ ಹಿಂದೆ ಪೂರ್ವಜರ ಶ್ರಮ ಸಾಕಷ್ಟಿದೆ" ಎಂದು ಹೇಳಿದರು.

"ವಿಜ್ಞಾನ ವಿಸ್ತರಿಸುತ್ತಿದೆ. ತಂತ್ರಜ್ಞಾನ ಬೆಳೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ವೈಜ್ಞಾನಿಕ ಚಿಂತನೆಗಳು ಬೆಳೆಯುತ್ತಿರುವುದರಿಂದ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಯುವಕರು ಹೆಚ್ಚು ಹೆಚ್ಚು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವಂತಾಗಬೇಕು, ಸಂಶೋಧನೆ ನಡೆಸುವತ್ತ ಹೆಚ್ಚು ಗಮನ ಹರಿಸಬೇಕು" ಎಂದು ಕರೆ ನೀಡಿದರು.

ಮಂಡ್ಯ; 5 ರೂ. ಡಾಕ್ಟರ್‌ ಶಂಕರೇಗೌಡರಿಗೆ ಹೃದಯಾಘಾತಮಂಡ್ಯ; 5 ರೂ. ಡಾಕ್ಟರ್‌ ಶಂಕರೇಗೌಡರಿಗೆ ಹೃದಯಾಘಾತ

ವಿಜ್ಞಾನವನ್ನು ದುರುಪಯೋಗಪಡಿಸಿಕೊಂಡರೆ ಅಪಾಯ

ನಂತರ ಮಾತನಾಡಿದ ಚಲನಚಿತ್ರ ನಿರ್ದೇಶಕ ಡಾ. ನಾಗತಿಗಳ್ಳಿ ಚಂದ್ರಶೇಖರ್, "ವಿಜ್ಞಾನವನ್ನು ವಿಕೃತವಾಗಿ ಬಳಸಿಕೊಂಡಲ್ಲಿ ಜಗತ್ತಿಗೆ ಅಪಾಯ ಕಾದಿದೆ. ವಿಜ್ಞಾನ ಹಣೆತೆಯೂ ಹೌದು, ಬೆಂಕಿಯೂ ಹೌದು. ಅದನ್ನು ಬಳಸಿಕೊಳ್ಳುವ ಮನೋಧರ್ಮವನ್ನು ಉತ್ತಮಪಡಿಸಿಕೊಳ್ಳಬೇಕಿದೆ" ಎಂದರು.

"ಪ್ರತಿಯೊಂದು ಮಗುವಿನಲ್ಲಿಯೂ ವೈಜ್ಞಾನಿಕ ವಿಚಾರಗಳನ್ನು ಧಾರೆ ಎರೆಯುವ ಮೂಲಕ ಆದರ್ಶ ವ್ಯಕ್ತಿಯನ್ನಾಗಿ ಮಾಡುವಲ್ಲಿ ವಿಜ್ಞಾನದ ಪಾತ್ರ ಪ್ರಮುಖವಾಗಿದೆ. ವಿಜ್ಞಾನವು ಪರೀಕ್ಷಿಸಿ ಪರಿಶೀಲಿಸಿ, ಸಾಕ್ಷೀಕರಿಸುವ ಪ್ರಮುಖ ಕ್ಷೇತ್ರವಾಗಿದೆ" ಎಂದರು.

"ವಿಜ್ಞಾನಕ್ಕೆ ಖಚಿತತೆ ಇದೆ. ವಿಜ್ಞಾನ ಮನುಷ್ಯನ ಕುತೂಹಲಗಳನ್ನು ಹೆಚ್ಚಿಸುತ್ತದೆ. ಆವಿಷ್ಕಾರಕ್ಕೆ ಪ್ರಚೋದಿಸುತ್ತದೆ, ಹೊಸ ಹೊಸ ವಿಷಯಗಳನ್ನು ಅರಿಯಲು ಅವಕಾಶ ಮಾಡಿಕೊಡುತ್ತದೆ. ಆಧುನಿಕ ಕಾಲಕ್ಕೆ ಇಂದಿನ ತಲೆಮಾರಿಗೆ ವಿಜ್ಞಾನ ಅತ್ಯಂತ ಅವಶ್ಯಕವಾಗಿದೆ. ಅಂತರಂಗದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಂಡಲ್ಲಿ ಮಾತ್ರ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯ" ಎಂದು ತಿಳಿಸಿದರು.

ವಚನಗಳಲ್ಲೂ ಇದೆ ವೈಚಾರಿಕತೆ

ವಿಜ್ಞಾನ ಮತ್ತು ಧರ್ಮವನ್ನು ಬೇರೆ ಮಾಡಬಾರದು. ಮನುಕುಲದ ಮುಗ್ಧತೆಯ ನಾಶವಾಗುತ್ತಿದೆ. ಅನೇಕ ವೈಜ್ಞಾನಿಕ ಸತ್ಯವನ್ನು ನಾವು ಮರೆಮಾಚುತ್ತಿದ್ದೇವೆ. 12ನೇ ಶತಮಾನದ ವಚನಗಳಲ್ಲೂ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳು ಪ್ರಬಲವಾಗಿವೆ. ಕುವೆಂಪು ಹಾಗೂ ಅನೇಕ ಚಿಂತಕರು ವೈಜ್ಞಾನಿಕ ಚಿಂತನೆಗಳನ್ನು ಮಂಡಿಸಿರುವುದು ಹೆಚ್ಚು ಪ್ರಚಲಿತವಾಗಿದೆ ಎಂದು ಹೇಳಿದರು.

ಸಮೂಹ ಮಾಧ್ಯಮಗಳಲ್ಲಿ ದಾರಿ ತಪ್ಪಿಸುವ ಅನೇಕ ಅಂಶಗಳಿಂದ ಯುವಕರು ದೂರವಾಗಿರಬೇಕಿದೆ. ನಮ್ಮನ್ನು ನಾವು ತೀರ್ಮಾನಿಸಿಕೊಳ್ಳುವ ಮನೋಭೂಮಿಕೆಯನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಇದೇ ವೇಳೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್, ಕೆ.ಮಾಯಿಗೌಡ ಬರೆದಿರುವ 'ಮಕ್ಕಳಿಗೇಕೆ ವೈಚಾರಿಕತೆ' ಎನ್ನುವ ಕೃತಿ ಬಿಡುಗಡೆ ಮಾಡಿದರು.

English summary
Former ISRO Chairman, scientist Dr. A.S. Kiran Kumar said, that young people should think about making new inventions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X