Get Updates
Get notified of breaking news, exclusive insights, and must-see stories!

ಮಂಡ್ಯ; ವಿದೇಶಿ ವ್ಯಾಮೋಹ ಬಿಟ್ಟು ತಾಯ್ನಾಡಿನಲ್ಲೇ ಸಾಧನೆ ಮಾಡಿ, ನಿರ್ಮಲಾನಂದ ಸ್ವಾಮೀಜಿ

ಮಂಡ್ಯ, ಅಕ್ಟೋಬರ್‌, 12: ವಿದೇಶಿ ವ್ಯಾಮೋಹ ಬಿಟ್ಟು ತಾಯ್ನಾಡಿನಲ್ಲೇ ಗುರುತರ ಸಾಧನೆ ಮಾಡಿ. ಈ ಮೂಲಕ ಹಿರಿಯರು, ಮಕ್ಕಳಿಗೆ ಆದರ್ಶಗಳನ್ನು ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ ಯುವಜನರಿಗೆ ಮಂಡ್ಯದಲ್ಲಿ ಮನವಿ ಮಾಡಿದರು.

ತಾಲೂಕಿನ ಹೊಳಲು ಗ್ರಾಮದಲ್ಲಿ ಡಾ.ಎಚ್‌.ಡಿ.ಚೌಡಯ್ಯ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ನಿರ್ಮಿಸಿರುವ ಡಾ.ಹೆಚ್.ಡಿ ಚೌಡಯ್ಯ ಪ್ರತಿಮೆ ಅನಾವರಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಮೆ ಅನಾವರಣದ ನಂತರ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರು ಆದರ್ಶವಾದರೆ, ವಿವೇಕಾನಂದರು ಅರವಿಂದರಿಗೆ ಆದರ್ಶವಾಗಿದ್ದರು. ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದಲ್ಲೇ ಉದ್ಯಮಗಳನ್ನು ಸ್ಥಾಪಿಸುವ ಮಟ್ಟಕ್ಕೆ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಮಹಾನ್ ಪುರುಷರು ಯುವಜನರಿಗೆ ಪ್ರೇರಣೆ
ಜಗತ್ತಿಗೆ ಯಾತ್ರಿಕರಾಗಿ ಬಂದು ಅಳಿಯದಂತಹ ಸಾಧಕರನ್ನು ನೆನಪು ಮಾಡಿಕೊಳ್ಳುವುದು ಸಮಾಜದ ಕರ್ತವ್ಯ ಆಗಿದೆ. ಪ್ರತಿಷ್ಠಾಪನೆಗೊಳಿಸುವ ಅಂತಹ ಸಾಧಕರ ಪ್ರತಿಮೆಗಳು ಯುವ ಪೀಳಿಗೆಗೆ ಪ್ರೇರಣೆಯಾಗಿ ಉಳಿಯಬೇಕು. ನಮ್ಮಲ್ಲಿ ಆದರ್ಶಗಳಿಗೇನೂ ಕೊರತೆ ಇಲ್ಲ. ಮಹಾನ್ ಪುರುಷರ ಪ್ರತಿಮೆಗಳು ಯುವಜನರಿಗೆ ಪ್ರೇರಣೆ ನೀಡುವಂತಿರಬೇಕು. ಅಂತಹ ಪ್ರತಿಮೆಗಳಿಂದ ಯುವಜನರು ಉದ್ದೀಪನಗೊಂಡು ಅವರ ವೌಲ್ಯಗಳು ನೆನಪಿಗೆ ಬರುವುದಾದರೆ, ಅಂತಹ ಹತ್ತಾರು ಪ್ರತಿಮೆಗಳಿದ್ದರೂ ತೊಂದರೆ ಇಲ್ಲ. ಚೌಡಯ್ಯನವರಂತಹ ಪ್ರೇರಕರು ಇಂದಿನ ಯುವಜನರಿಗೆ ಮಾದರಿ. ಚೌಡಯ್ಯನವರ ಸಿಡಿಮಿಡಿಯ ಹಿಂದೆ ಪ್ರಾಮಾಣಿಕತೆ ಇರುತ್ತಿತ್ತು. ಅವರ ಸಮಯ ಪಾಲನೆ ಎಲ್ಲರಿಗೂ ಮಾದರಿ ಆಗಿತ್ತು. ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು.

Mandya: Youth can achieve in own country: Nirmalananda Swamiji

ಚೌಡಯ್ಯನ ಬಗ್ಗೆ ಪುಟ್ಟರಾಜು ಹೇಳಿದ್ದೇನು?
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, "ನಮ್ಮಂತಹ ನಾಯಕರಿಗೆ ಚೌಡಯ್ಯನವರು ಪ್ರೀತಿಯ ಆಶೀರ್ವಾದ ಮಾಡಿದ್ದಾರೆ. ಸಮಾರಂಭಕ್ಕೆ ತಡವಾಗಿ ಬಂದರೆ ಪ್ರೀತಿಯಿಂದ ಗದರಿದ್ದಾರೆ. ಕೆ.ವಿ.ಶಂಕರಗೌಡ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡರಂತೆ ಚೌಡಯ್ಯನವರು ಎಲ್ಲರನ್ನೂ ಒಗ್ಗೂಡಿಸಿ ಜಿಲ್ಲೆಯನ್ನು ಮುನ್ನಡೆಸಿದ್ದಾರೆ. ಮಂಡ್ಯ ಎಂದರೆ ಇಂಡಿಯಾ ಎಂಬಂತೆ ಚೌಡಯ್ಯನವರ ವಿಷಯ ದೆಹಲಿಯಲ್ಲೂ ಪ್ರಸ್ತಾಪವಾಗುತ್ತಿತ್ತು. ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಅವರು ನಡೆದಂತಹ ದಾರಿಯಲ್ಲಿ ಹೆಜ್ಜೆ ಹಾಕುವುದು ನಮ್ಮ ಕರ್ತವ್ಯ," ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ನಂತರ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ ಅವರಿಗೆ ಡಾ.ಹೆಚ್.ಡಿ.ಚೌಡಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಥಳೀಯ ಸಾಧಕರಾದ ಮೂಳೆ ಮತ್ತು ಕೀಲು ಶಸ್ತ್ರ ಚಿಕಿತ್ಸಕ ಡಾ.ಹೆಚ್.ಎಸ್.ರವಿಕುಮಾರ್ ಹಾಗೂ ಬಂಟ್ವಾಳ ತಾಲೂಕು ತಹಶೀಲ್ದಾರ್ ಡಾ.ಸ್ಮಿತಾ ರಾಮು ಅವರನ್ನು ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಸನ್ಮಾನಿಸಿದರು. ವಿದ್ಯಾರ್ಥಿಗಳಾದ ಹೊಳಲು ಸರ್ಕಾರಿ ಪ್ರೌಢಶಾಲೆಯ ವಿಸ್ಮಯ ಹೆಚ್.ಕೆ.ಸತ್ಯಮೂರ್ತಿ, ಹಾಗೂ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯ ದಿಶಾ, ಭುವನ್‌ಸಿ.ಎಸ್ ಅವರನ್ನು ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

Mandya: Youth can achieve in own country: Nirmalananda Swamiji

ಈ ಸಂದರ್ಭದಲ್ಲಿ ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಚ್‌.ಎಂ. ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಪದ್ಮಾ ನಾಗರಾಜು, ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಎಚ್‌ಚ್.ಎಲ್.ಶಿವಣ್ಣ, ಕಾರ್ಯದರ್ಶಿ ಲಿಂಗಪ್ಪ, ಎಚ್.ಸಿ.ಹರಿಪ್ರಸಾದ್, ಮೋಹನ್, ಎಚ್.ಬಿ.ಶಿವಣ್ಣ, ಎಚ್.ಸಿ.ಶ್ರೀಧರ್, ವಿಜಯಕುಮಾರ್, ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+