• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನ್ನಭಾಗ್ಯದ ಅಕ್ಕಿ ತೆಗೆದುಕೊಂಡ್ರೆ ಹುಳು ಭಾಗ್ಯ ಫ್ರೀ..!

|

ಮಂಡ್ಯ, ಆಗಸ್ಟ್ 19: ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಿಗೆ ವಿತರಿಸುವ ಪಡಿತರ ಧಾನ್ಯ ಹಾಗೂ ಅಕ್ಕಿಯಲ್ಲಿ ಹುಳು, ಕ್ರಿಮಿಕೀಟಗಳು ಪತ್ತೆಯಾಗಿವೆ.

ಅನ್ನಭಾಗ್ಯ ರದ್ದುಪಡಿಸುವುದಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

ಮಂಡ್ಯದ ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಪಡಿತರ ಅಂಗಡಿಯಲ್ಲಿ ಹುಳು ತುಂಬಿದ ಪಡಿತರ ವಿತರಣೆ ಮಾಡಲಾಗಿದೆ. ಅಕ್ಕಿಯ ಪ್ಯಾಕೆಟ್ ನಲ್ಲಿ ಈ ರೀತಿಯ ಹುಳಗಳು ಪತ್ತೆಯಾಗಿವೆ. ಹುಳು ಪತ್ತೆಯಾಗಿರುವುದನ್ನು ವಿಡಿಯೋ ಮಾಡಿದ ಗ್ರಾಮಸ್ಥರು ಅನ್ನಭಾಗ್ಯದ ಅವಾಂತರವನ್ನು ಬಯಲಿಗೆ ಎಳೆದಿದ್ದಾರೆ. ಆಹಾರದಲ್ಲಿ ಹುಳುಗಳು ಪತ್ತೆಯಾದರೆ ತಿನ್ನುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಹುಳುಭಾಗ್ಯ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಹುಳು ತುಂಬಿರುವ ಅಕ್ಕಿ ವಿತರಣೆ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯನ ಅನ್ನಭಾಗ್ಯದ ಅಕ್ಕಿ ತಿಂದು ಮೋದಿಗೆ ವೋಟ್ ಹಾಕ್ತಾರೆ!

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಯಿಂದ ಸಾಕಷ್ಟು ಬಡವರಿಗೆ ಅನೂಕೂಲವಾಗಿದೆ. ಆದರೆ ಈ ಯೋಜನೆ ಹುಳುಗಳ ಭಾಗ್ಯ ಎನ್ನುವಂತಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ನೀಡುವ ಈ ಆಹಾರ ಧಾನ್ಯಗಳಲ್ಲಿ ಈಗ ಹುಳುಗಳದ್ದೇ ಕಾರುಬಾರಾಗಿದೆ. ಇನ್ನಾದರೂ ಆಹಾರ ಇಲಾಖೆ ಎಚ್ಚೆತ್ತುಕೊಂಡು ಗಮನ ಹರಿಸಬೇಕಿದೆ.

English summary
Worms found in Annabhaghya rice distributed in Mandya district Nidagatta place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X