ಮಂಡ್ಯ: ಹೊಸ ವರ್ಷ ಪಾರ್ಟಿ ಮುಗಿಸಿ ಬರ್ತಿದ್ದಾಗ ಗೆಳೆಯರಿಬ್ಬರು ಸಾವು

Posted By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಜನವರಿ 02: ಹೊಸವರ್ಷಾಚರಣೆ ಮುಗಿಸಿಕೊಂಡು ಬೈಕ್ ನಲ್ಲಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೌಡೇನಹಳ್ಳಿ ಸಮೀಪ ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿ ಹೊಡೆದು ಗೆಳೆಯರಿಬ್ಬರು ಮೃತಪಟ್ಟಿದ್ದಾರೆ.

ಬೆಳಗಾವಿ: ಮರಕ್ಕೆ ಕಾರು ಡಿಕ್ಕಿ, ತಾಯಿ ಇಬ್ಬರು ಮಕ್ಕಳು ದುರ್ಮರಣ

ನಾಗಮಂಗಲದ ನಿವಾಸಿಗಳಾದ ಪವನ್ ಮತ್ತು ಪ್ರದೀಪ್ ಮೃತ ದುರ್ದೈವಿಗಳು. ಇವರಿಬ್ಬರು ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ಸೋಮವಾರ ತಡರಾತ್ರಿ ಬೆಳ್ಳೂರು ಕ್ರಾಸ್ ಕಡೆಯಿಂದ ನಾಗಮಂಗಲಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಚೌಡೇನಹಳ್ಳಿ ಸಮೀಪ ಚೆಕ್ ಪೋಸ್ಟ್ ಬಳಿ ಹಾಕಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದಿದೆ.

Two youths killed after bike hits barricade in Chowdenahalli village

ದುರ್ಘಟನೆಯಲ್ಲಿ ಗೆಳೆಯರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರೂ ಯುವಕರು ನಾಗಮಂಗಲ ಪಟ್ಟಣದ ನಿವಾಸಿಗಳಾಗಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two youths Pawan and Pradeep killed after bike hits barricade in Chowdenahalli village near Nagamangala, Mandya district on Monday late night.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ