ಮಂಡ್ಯ; ಮೇಲುಕೋಟೆಯಲ್ಲಿ ತೆಲುಗು ಚಿತ್ರತಂಡ ಮಹಾ ಯಡವಟ್ಟು, ಜನಾಕ್ರೋಶ

ಮಂಡ್ಯ, ಅಕ್ಟೋಬರ್‌ 09: ಮೇಲುಕೋಟೆ ಭವ್ಯಸ್ಮಾರಕ ರಾಯಗೋಪುರದಲ್ಲಿ ತೆಲುಗು ಚಿತ್ರತಂಡವೊಂದು ಬಾರ್ ಮಾದರಿ ಸೆಟ್ ನಿರ್ಮಿಸಿದೆ. ಅಲ್ಲದೆ ಮದ್ಯದ ಬಾಟಲಿಗಳನ್ನು ಜೋಡಿಸಿ ಚಿತ್ರೀಕರಣ ಮಾಡಿ ಯಡವಟ್ಟು ಮಾಡಿಕೊಂಡಿದೆ. ಚಿತ್ರತಂಡದ ಈ ನಡೆಯನ್ನು ನಾಗರೀಕರು ವಿರೋಧಿಸಿದ ಕಾರಣ ದೇವಾಲಯದ ಆಡಳಿತಾಧಿಕಾರಿಗಳಾದ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಚಿತ್ರೀಕರಣ ಸ್ಥಗಿತಗೊಳಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿಗಳಿಂದ ಶನಿವಾರ ಮತ್ತು ಭಾನುವಾರ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದರು. ನಾಗಚೈತನ್ಯ ನಟನೆಯ 3 ನಾಟ್ 2 ಚಿತ್ರತಂಡ ಆದೇಶದಲ್ಲಿನ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ರಾಯಗೋಪುರದಲ್ಲಿ ಮನಬಂದಂತೆ ಕಬ್ಬಿಣದ ಕಂಬಗಳನ್ನು ಹಾಕಿ ಮದುವೆ ಸೆಟ್ ನಿರ್ಮಿಸಿದ್ದಾರೆ.

ಅಲ್ಲದೆ ಪಕ್ಕದಲ್ಲೇ ಬಾರ್ ಮಾದರಿಯ ಸೆಟ್ ನಿರ್ಮಿಸಿ ವಿವಿಧ ಬ್ರಾಂಡ್‌ಗಳ ಮಧ್ಯದ ಬಾಟಲಿಗಳನ್ನು ಸಹ ಜೋಡಿಸಿ ರಾತ್ರಿ ವೇಳೆ ಚಿತ್ರೀಕರಣ ಮಾಡಿದ್ದಾರೆ. ಚಿತ್ರೀಕರಣ ವೀಕ್ಷಿಸಿ ಅಸಮದಾನಗೊಂಡ ನಾಗರೀಕರು ರಾಜಮಹಾರಾಜರು ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಕ್ತಿಭಾವದಿಂದ ನಿರ್ಮಿಸಿರುವ ಸಂಸ್ಕೃತಿ, ಪರಂಪರೆ ಬಿಂಬಿಸುವ ರಾಯಗೋಪುರದಂತಹ ಭವ್ಯ ಸ್ಮಾರಕಗಳಲ್ಲಿ ಮದ್ಯದ ಬಾಟಲಿಗಳನ್ನಿಟ್ಟು ಅವಮಾನ ಮಾಡಿದ್ದಾರೆ.

ಸ್ಮಾರಕಗಳ ಬಳಕೆಯ ನಿಯಮಳನ್ನು ಉಲ್ಲಂಘಿಸಿ ಮದುವೆ ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಜೊತೆಗೆ ಶ್ರೀವೈಷ್ಣ ಕ್ಷೇತ್ರದ ಪಾವಿತ್ರತೆಗೆ ಭಂಗ ತರುವಂತೆ ಚಿತ್ರತಂಡ ನಡೆದುಕೊಂಡಿದೆ. ಚಿತ್ರೀಕರಣವನ್ನು ತಕ್ಷಣ ಸ್ಥಗಿತಗೊಳಿಸಿ ಮೇಲುಕೋಟೆ ಪರಂಪರೆಯನ್ನು ಉಳಿಸಬೇಕು ಎಂದು ಆಗ್ರಹಿಸಿ ಚಿತ್ರತಂಡದ ನಡೆಯ ವಿರುದ್ಧ ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಚಿತ್ರೀಕರಣ ಸ್ಥಗಿತಗೊಳಿಸಿದ ಚಿತ್ರತಂಡ

ಚಿತ್ರೀಕರಣ ಸ್ಥಗಿತಗೊಳಿಸಿದ ಚಿತ್ರತಂಡ

ಮೇಲುಕೋಟೆ ದ್ರುವಕುಮಾರ್ ಮತ್ತು ನಾಗರೀಕರ ಮನವಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿ ಚಿತ್ರೀಕರಣವನ್ನು ತಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ನಂತರ ತೆಲಗು ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ. ಭಾನುವಾರ ಮದ್ಯಾಹ್ನ ಚಿತ್ರೀಕರಣ ಸೆಟ್ ಹಾಕಿದ್ದ ಸ್ಥಳಕ್ಕೆ ತೆರಳಿದ ದೇವಾಲಯ, ಪ್ರಾಚ್ಯವಸ್ತು ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ, ಭಕ್ತರ ವೀಕ್ಷಣೆಗೆ ಅಡಚಣೆಯುಂಟು ಮಾಡುವಂತೆ ಇದನದನು ನಿರ್ಮಿಸಿದ್ದಾರೆ. ಚಿತ್ರೀಕರಣದ ಸೆಟ್‌ ಅನ್ನು ತಕ್ಷಣ ತೆರವುಗೊಳಿಸುವಂತೆ ಪ್ರೊಡಕ್ಷನ್ ಮ್ಯಾನೇಜರ್ ಶಾಸ್ತ್ರಿಗೆ ಸೂಚನೆ ನೀಡಿದ್ದಾರೆ

2ನೇ ಬಾರಿ ತೆಲುಗು ಚಿತ್ರತಂಡ ಮಹಾ ಯಡವಟ್ಟು

2ನೇ ಬಾರಿ ತೆಲುಗು ಚಿತ್ರತಂಡ ಮಹಾ ಯಡವಟ್ಟು

ಕಳೆದ 2021ರ ನವೆಂಬರ್‌ನಲ್ಲಿ ನಡೆದ ರಾಜಮುಡಿಯ ಅಷ್ಠತೀರ್ಥೋತ್ಸವ ದಿನ ಕಲ್ಯಾಣಿಯಲ್ಲಿ ನಾಗಚೈತನ್ಯ ಸೆಟ್ ಹಾಕಿತ್ತು. ಆಗಲೂ ಕೂಡ ಚಿತ್ರತಂಡ ಚೆಲುವನಾರಾಯಣಸ್ವಾಮಿ ಅವರ ವಜ್ರಖಚಿತ ರಾಜಮುಡಿ ಉತ್ಸವಕ್ಕೆ ಅಡಚಣೆ ಉಂಟುಮಾಡಿತ್ತು. ಕಲ್ಯಾಣಿ ಸಮುಚ್ಚಯದ ಒಳಭಾಗಕ್ಕೆ ಚಿತ್ರೀಕರಣಕ್ಕೆ ಬಳಸಲು ಭಾರಿ ಗಾತ್ರದ ಕ್ರೇನ್ ತಂದಾಗ ಅದು ಹೂತು ಹೋಗಿ ಅವಾಂತರ ಸೃಷ್ಟಿ ಮಾಡಿತ್ತು. ಈ ಘಟನೆಯ ನಂತರ 6 ತಿಂಗಳುಗಳ ಕಾಲ ಮೇಲುಕೋಟೆಯಲ್ಲಿ ಚಿತ್ರೀಕರಣ ನಿಷೇಧ ಮಾಡಲಾಗಿತ್ತು.

ಪಜೀತಿ ತಂದಿಟ್ಟ ಚಿತ್ರತಂಡದ ದುರ್ವರ್ತನೆ

ಪಜೀತಿ ತಂದಿಟ್ಟ ಚಿತ್ರತಂಡದ ದುರ್ವರ್ತನೆ

ರಾಯಗೋಪುರದ ಮಧ್ಯಭಾಗದಲ್ಲೇ ಮದುವೆ ಸೆಟ್ ಹಾಕಿ ವಿದ್ಯುತ್ ಅಲಂಕಾರ ಮಾಡಲು ಬೃಹತ್ ಕಬ್ಬಿಣದ ಕಂಬಗಳನ್ನು ಅಳವಡಿಸಿದ್ದರು. ಇದರಿಂದ ಭಾನುವಾರ ಸ್ಮಾರಕ ರಾಯಗೋಪುರ ವೀಕ್ಷಣೆಗೆ ಬಂದಂತಹ ಸಾವಿರಾರು ಪ್ರವಾಸಿಗರಿಗೆ ತೊಂದರೆ ಆಗಿದೆ. ಚಿತ್ರತಂಡದ ಈ ರೀತಿಯ ವರ್ತನೆಯ ಬಗ್ಗೆ ಭಕ್ತರು ತೀವ್ರ ಸಮದಾನ ವ್ಯಕ್ತಪಡಿಸಿದ್ದು, ಚಿತ್ರ ತಂಡದ ಸ್ಮಾರಕಗಳ ದರ್ಬಳಕೆಯನ್ನು ಸಂಬಂಧಿಸಿದ ಅಧಿಕಾರಿಗಳು ತಡೆಗಟ್ಟಬೇಕು ಎಂದು ಮನವಿ ಮಾಡಿದ್ದಾರೆ.

ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದೇನು?

ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದೇನು?

ತೆಲುಗು ಚಿತ್ರತಂಡ ಎರಡು ದಿನಗಳ ಕಾಲ ಮೇಲುಕೋಟೆಯಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಪಡೆದಿತ್ತು. ರಾತ್ರಿ ಚಿತ್ರೀಕರಣ ಮಾಡಲು ಯಾರೂ ಅನುಮತಿ ನೀಡಿರಲಿಲ್ಲ. "ನಾನು ಮಲೆಮಹದೇಶ್ವರದಲ್ಲಿ ಮಹದೇಶ್ವರ ಜ್ಯೋತಿ ರಥ ಯಾತ್ರೆಯ ಕರ್ತವ್ಯದಲ್ಲಿದ್ದೇನೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಚಿತ್ರೀಕರಣ ಸ್ಥಗಿತಗೊಳಿಸಲು ಮೇಲುಕೋಟೆ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ತಿಳಿಸಿದ್ದೇನೆ," ಎಂದು ಮೇಲುಕೋಟೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+