• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ನಿಜಕ್ಕೂ ಸುಮಲತಾ ಪ್ಲಾನ್ ಏನು?

|
   ಮತ್ತೆ ಅಬ್ಬರಿಸೋಕೆ ಪ್ಲ್ಯಾನ್ ಮಾಡಿದ ದರ್ಶನ್, ಯಶ್, ಸುಮಲತಾ | Oneindia Kannada

   ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ 'ವಿಜಯದ ಬಂಡಿ' ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು.

   ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ 'ಸ್ವಾಭಿಮಾನದ ವಿಜಯೋತ್ಸವ' ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ.

   ಏಕಾಂಗಿಯಾಗಿ ಹೋರಾಡಿದ್ದರೆ ಕಾಂಗ್ರೆಸ್ 10 ಸ್ಥಾನ ಗೆಲ್ಲುತ್ತಿತ್ತು: ಸುಮಲತಾ

   ಈ ನಡುವೆ ಸುಮಲತಾ ಅವರು ಇನ್ನೊಂದು ಹೆಜ್ಜೆ ಮುಂದೆ ಇಟ್ದಿದ್ದಾರೆ. ಮಂಡ್ಯ ಜನರಿಗಾಗಿ ತಾನು ಮತ್ತು ತನ್ನ ಜೊತೆ ಜೋಡೆತ್ತುಗಳು ಯಾವಾಗಲೂ ಇರ್ತಾರೆ ಎಂಬುದನ್ನ ಸಾರಿ ಹೇಳಲು ಮತ್ತೊಂದು ಪ್ಲಾನ್ ಮಾಡಿದ್ದಾರೆ. ಅಷ್ಟಕ್ಕೂ, ಮಂಡ್ಯ ನೂತನ ಸಂಸದೆಯ ಹೊಸ ಹೆಜ್ಜೆ ಏನು? ಮುಂದೆ ಓದಿ....

   ಮಂಡ್ಯ ಜನರ ಮನಗೆ ಬಾಗಿಲಿಗೆ ಜೋಡೆತ್ತು

   ಮಂಡ್ಯ ಜನರ ಮನಗೆ ಬಾಗಿಲಿಗೆ ಜೋಡೆತ್ತು

   ಚುನಾವಣೆಗೂ ಮುಂಚೆ ಸುಮಾರು 20 ದಿನಗಳವರೆಗೂ ಮಂಡ್ಯದಲ್ಲಿ ಪ್ರಚಾರ ಮಾಡಿದ್ದ ದರ್ಶನ್ ಮತ್ತು ಯಶ್, ಈಗ ಮತ್ತೆ ಮಂಡ್ಯದಲ್ಲಿ ಅಬ್ಬರಿಸಲಿದ್ದಾರೆ. 'ಸ್ವಾಭಿಮಾನ ವಿಜಯೋತ್ಸವ'ದಲ್ಲಿ ಮಂಡ್ಯ ಜನರ ಕಾಲಿಗೆ ನಮಸ್ಕರಿಸಿದ್ದ ಜೋಡತ್ತುಗಳು ಈಗ ಮಂಡ್ಯ ಜನರ ಮನೆ ಬಾಗಿಲಿಗೆ ಹೋಗಲು ನಿರ್ಧರಿಸಿದ್ದಾರಂತೆ.

   ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೇ ಮಂಡ್ಯ ಸಂಸದೆ ಸುಮಲತಾ?

   200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ

   200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ

   ಸುಮಲತಾ ಪರ ಪ್ರಚಾರ ಮಾಡುವಾಗ ಬಹುತೇಕ ಎಲ್ಲ ಹಳ್ಳಿಗಳಿಗೂ ದರ್ಶನ್ ಮತ್ತು ಯಶ್ ಹೋಗಿದ್ದರು. ಈಗ ಮತ್ತೊಮ್ಮೆ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಲು ನಿರ್ಧರಿಸಿದ್ದಾರೆ. ಮಂಡ್ಯ ಜಿಲ್ಲೆಯ 8 ವಿಧಾನಸಭೆಯ ಸುಮಾರು 200 ಹಳ್ಳಿಗಳಿಗೆ ದರ್ಶನ್-ಯಶ್ ಮತ್ತು ಸುಮಲತಾ ಭೇಟಿ ನೀಡಿ ಕೃತಜ್ಞತೆ ಸಲ್ಲಿಸುವ ಯೋಜನೆ ಹಾಕಿಕೊಂಡಿದ್ದಾರಂತೆ.

   ನಾವು ಮಂಡ್ಯದಲ್ಲೇ ಇರುತ್ತೇವೆ

   ನಾವು ಮಂಡ್ಯದಲ್ಲೇ ಇರುತ್ತೇವೆ

   ಗೆದ್ದು ಸಂಭ್ರಮಿಸಿ ಸುಮ್ಮನಾಗದ ಸುಮಲತಾ ಮತ್ತು ಜೋಡೆತ್ತುಗಳು, ಮಂಡ್ಯ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯಲು ಮುಂದಾಗಿದ್ದಾರೆ. 'ನಾವು ಮಂಡ್ಯದಲ್ಲೇ ಇರುತ್ತೇವೆ, ಮಂಡ್ಯ ಜನರ ಜೊತೆಯಲ್ಲೇ ಇರುತ್ತೇವೆ. ಮಂಡ್ಯ ಅಭಿವೃದ್ದಿಗಾಗಿ ನಾವು ಇರುತ್ತೇವೆ' ಎಂದು ಸಾರಲು ವಿಜಯಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಯಿಂದ ಸುಮಲತಾ ಅವರಿಗೆ ಮತ್ತಷ್ಟು ಜನಬೆಂಬಲ ಸಿಗುವುದು ಪಕ್ಕಾ.

   'ಅಮ್ಮನ ಭರ್ಜರಿ ಜಯ': ಸಾಯುವವರೆಗೂ ಮಂಡ್ಯಕ್ಕೆ ಋಣಿ ಎಂದ ದರ್ಶನ್

   ಯಾವ ಪಕ್ಷಕ್ಕೂ ಹೋಗಲ್ಲ ಅಂಬಿ ಪತ್ನಿ

   ಯಾವ ಪಕ್ಷಕ್ಕೂ ಹೋಗಲ್ಲ ಅಂಬಿ ಪತ್ನಿ

   ಮಂಡ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು. ಗೆದ್ದ ಬಳಿಕ ಸುಮಲತಾ ಬಿಜೆಪಿಗೆ ಹೋಗ್ತಾರೆ ಎನ್ನಲಾಗುತ್ತಿತ್ತು. ಅದೇ ರೀತಿ ಮಂಡ್ಯದ ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಸುಮಲತಾ ಗೆಲುವಿಗೆ ಶ್ರಮಿಸಿದ್ದರು. ನಂತರ ಕಾಂಗ್ರೆಸ್ ಗೆ ಸುಮಲತಾ ಅವರನ್ನ ಕರೆತರುವ ಪ್ರಯತ್ನ ಸಾಗುತ್ತಿದೆ ಎಂಬ ಮಾತು ಚರ್ಚೆಯಾಯಿತು. ಈ ನಡುವೆ ಯಾವ ಪಕ್ಷಕ್ಕೂ ಹೋಗದಿರಲು ಸುಮಲತಾ ನಿರ್ಧರಿಸಿದ್ದಾರಂತೆ. 'ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದು, ಹಾಗೆ ಕೆಲಸ ಮಾಡುತ್ತೇನೆ' ಎಂಬ ಮಾತು ಹೇಳಿದ್ದಾರಂತೆ.

   ಮಂಡ್ಯ ಜನರ ಜೊತೆಗಿರ್ತೇನೆ ಅಂಬರೀಶ್ ಮೇಲಾಣೆ: ಸುಮಲತಾ

   ಸುಮಲತಾ ಪ್ಲಾನ್ ಏನು?

   ಸುಮಲತಾ ಪ್ಲಾನ್ ಏನು?

   ಯಾವುದೇ ರಾಜಕೀಯ ಪಕ್ಷದ ಮುಖ ನೋಡಿ ಸುಮಲತಾಗೆ ಮಂಡ್ಯ ಜನ ವೋಟ್ ಹಾಕಿಲ್ಲ. ಅಂಬರೀಶ್ ಪತ್ನಿ, ಪಕ್ಷೇತರ ಅಭ್ಯರ್ಥಿ ಎಂದು ಗೆಲ್ಲಿಸಿದ್ದಾರೆ. ಈಗ ಯಾವುದಾದರೂ ಪಕ್ಷಕ್ಕೆ ಹೋದರೇ ಮುಂದಿನ ದಿನದಲ್ಲಿ ಕಷ್ಟವಾಗುತ್ತೆ. ಹಾಗಾಗಿ, ಪಕ್ಷೇತರವಾಗಿ ಉಳಿದು, ಜೋಡೆತ್ತುಗಳ ಜೊತೆಯಲ್ಲಿ ಮಂಡ್ಯ ಸಂಸದೆಯಾಗಿ ಮುಂದುವರಿಯಲು ಸುಮಲತಾ ಪ್ಲಾನ್ ಮಾಡಿದ್ದಾರೆ. ಇದನ್ನ ಮತ್ತೊಮ್ಮೆ ಮಂಡ್ಯ ಜನರಿಗೆ ಸಾರಿ ಹೇಳಲು ವಿಜಯಯಾತ್ರೆ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

   English summary
   Mandya new Mp sumalatha ambarish, challenging star darshan and yash have decided to visit all 8 assembly constituency in mandya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X