• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದೇ ಕ್ಷೇತ್ರದಲ್ಲಿ ಸುಮಲತಾ, ನಿಖಿಲ್ ಪ್ರಚಾರ: ಮುಖಾಮುಖಿಯಾಗ್ತಾರಾ?

|
   ಮಂಡ್ಯದ ಪ್ರಚಾರದಲ್ಲಿ ಇಂದು ಸುಮಲತಾ ಹಾಗು ನಿಖಿಲ್ ಮುಖಾಮುಖಿಯಾಗ್ತಾರಾ?

   ಮಂಡ್ಯ, ಏ. 12: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಉಳಿದೆಲ್ಲಾ ಲೋಕಸಭಾ ಕ್ಷೇತ್ರಗಳಿಗಿಂತ ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದತ್ತ ಎಲ್ಲರ ಚಿತ್ತವಿದೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಎರಡೂ ಕಡೆ ಇರುವವರೂ ಪ್ರಬಲ ಅಭ್ಯರ್ಥಿಗಳೇ, ಇಂದು ದೋಸ್ತಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಒಂದೇ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇಬ್ಬರು ಮುಖಾಮುಖಿಯಾಗಲಿದ್ದಾರಾ ಎಂದು ಕಾದು ನೋಡಬೇಕಿದೆ.

   ಕೆಆರ್ ಪೇಟೆಯಿಂದ ಇಬ್ಬರ ಪ್ರಚಾರ ಆರಂಭ

   ಕೆಆರ್ ಪೇಟೆಯಿಂದ ಇಬ್ಬರ ಪ್ರಚಾರ ಆರಂಭ

   ನಿಖಿಲ್ ಕುಮಾರಸ್ವಾಮಿ ಕೆಆರ್ ಪೇಟೆಯ ಹೊಸರಳು ಗ್ರಾಮದಿಂದ ಬೆಳಗ್ಗೆ 10 ಗಂಟೆಗೆ ಪ್ರಚಾರ ಆರಂಭಿಸಲಿದ್ದಾರೆ. ಸುಮಲತಾ ಅವರು ತೆಂಡೆಕೆರೆ ಗ್ರಾಮದಿಂದ ಪ್ರಚಾರ ಆರಂಭಿಸಲಿದ್ದಾರೆ. ದರ್ಶನ್ ಮಳವಳ್ಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದು, ಯಶ್ ಎರಡು ದಿನಗಳ ಕಾಲ ಪ್ರಚಾರ ನಡೆಸುವುದಿಲ್ಲ.

   ಮಂಡ್ಯದಲ್ಲಿ ದೇವೇಗೌಡ-ಸಿದ್ದರಾಮಯ್ಯ ಜಂಟಿ ಪ್ರಚಾರ

   ಮಂಡ್ಯದಲ್ಲಿ ದೇವೇಗೌಡ-ಸಿದ್ದರಾಮಯ್ಯ ಜಂಟಿ ಪ್ರಚಾರ

   ಇಂದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಖಿಲ್ ಪರ ಪ್ರಚಾರ ನಡೆಸಲಿದ್ದಾರೆ. ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರಿಗೂ ಹೆಚ್ಚಿನ ಅಭಿಮಾನಿಗಳಿದ್ದಾರೆ ಹೀಗಾಗಿ ಅವರಿಬ್ಬರ ನಡುವೆ ತೀವ್ರ ಹಣಾಹಣಿ ಇದೆ. ಯಾರು ಗೆಲ್ಲಬಹುದು ಎಂದು ಫಲಿತಾಂಶ ಬರುವವರೆಗೂ ಹೇಳುವುದು ಕಷ್ಟವೇ.

   ನಿಖಿಲ್ ಗೆಲುವಿಗಾಗಿ ಮಂಡ್ಯದಲ್ಲಿ ಇಂದು ಗುರು-ಶಿಷ್ಯರ ಜಂಟಿ ಪ್ರಚಾರ

   ನೀತಿ ಸಂಹಿತೆ ಉಲ್ಲಂಘನೆ: ನಿಖಿಲ್, ಸುಮಲತಾ ವಿರುದ್ಧ ಪ್ರತ್ಯೇಕ ಎಫ್‌ಐಆರ್

   ನೀತಿ ಸಂಹಿತೆ ಉಲ್ಲಂಘನೆ: ನಿಖಿಲ್, ಸುಮಲತಾ ವಿರುದ್ಧ ಪ್ರತ್ಯೇಕ ಎಫ್‌ಐಆರ್

   ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಮಂಡ್ಯ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಪ್ರತ್ಯೇಕ ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿದೆ. ಹಾಗೆಯೇ ನಾಗಮಂಗಲ ವ್ಯಾಪ್ತಿಯಲ್ಲಿ ಅನುಮತಿ ಪಡೆದದ್ದಕ್ಕಿಂತ ಹೆಚ್ಚು ಸಮಯ ಪ್ರಚಾರ ನಡೆಸಿದ ಆರೋಪದಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಬೆಂಬಲಿಗ ರವಿಕಾಂತ ಎಂಬುವವರ ವಿರುದ್ಧ ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಮುಗಿಯದ ನಿಖಿಲ್ ನಾಮಪತ್ರ ಗೊಂದಲ: ಅಸಿಂಧುಗೊಳಿಸುವಂತೆ ಮತ್ತೆ ದೂರು

   ಹಾಸನದಲ್ಲಿ ಪ್ರಜ್ವಲ್ ಪರ ಪ್ರಚಾರ ನಡೆಸಿದ್ದರು

   ಹಾಸನದಲ್ಲಿ ಪ್ರಜ್ವಲ್ ಪರ ಪ್ರಚಾರ ನಡೆಸಿದ್ದರು

   ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ಪರವಾಗಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಎ.ಮಂಜು ಬಿಜೆಪಿ ಸೇರ್ಪಡೆಯಾಗಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್​ ರೇವಣ್ಣ ನಿಂತರೆ, ಬಿಜಪಿ ಅಭ್ಯರ್ಥಿಯಾಗಿ ಮಂಜು ಕಣದಲ್ಲಿದ್ದಾರೆ. ಇಲ್ಲೂ ಕೂಡ ತೀವ್ರ ಹಣಾಹಣಿ ಏರ್ಪಟ್ಟಿದೆ.

   ಎ.ಮಂಜು ಲಜ್ಜೆಗೆಟ್ಟ ರಾಜಕಾರಣ ಮಾಡ್ತಿದ್ದಾರೆ:ಪ್ರಜ್ವಲ್ ರೇವಣ್ಣ ವಾಗ್ದಾಳಿ

   English summary
   Lok sabha elections 2019: Independent candidate Sumalatha Ambareesh and JDS candidate Nikhil Kumaraswamy will hold the election campaign in KR Pete same assembly constituency today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X