ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳ್ಳವಳ್ಳಿಯಲ್ಲಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಅಕ್ಟೋಬರ್‌, 16: ಮಳವಳ್ಳಿಯಲ್ಲಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆ.ಆರ್‌. ಪೇಟೆಯಲ್ಲಿ ಘೋಷಿಸಿದರು.

ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆದ ಮಹಾಕುಂಭಮೇಳ ಸಮಾರಂಭದ ಉದ್ಘಾಟನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು, ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಎಲ್ಲಾ ಸೆಕ್ಷನ್‌ಗಳನ್ನು ಹಾಕಿದ್ದಾರೆ. ಪ್ರಕರಣ ಸಂಬಂಧ ಕೂಡಲೇ ತನಿಖೆ ಆಗಬೇಕು. ಹಾಗೂ ತಪ್ಪಿತಸ್ಥನಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಪೊಲೀಸರಿಗೆ ಸೂಚಿಸಿದರು. ಎಫ್‌ಎಸ್‌ಎಲ್ ವರದಿಯನ್ನು ವಾರದ ಒಳಗೆ ಕಳುಹಿಸುವುದಾಗಿ ಪೊಲೀಸರು ಹೇಳಿದ್ದಾರೆ. ವರದಿ ಬಂದ ಕೂಡಲೇ ದೋಷಾರೋಪಣಾ ಪಟ್ಟಿಯನ್ನು ಪೋಕ್ಸೋ ನ್ಯಾಯಾಲಯಕ್ಕೆ ರವಾನಿಸಿ ಆದಷ್ಟು ಬೇಗ ಈ ಪ್ರಕರಣಕ್ಕೆ ನ್ಯಾಯ ದೊರಕಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಮಳವಳ್ಳಿ: ಬಾಲಕಿ ಹತ್ಯೆಗೈದವನಿಗೆ ಗಲ್ಲುಶಿಕ್ಷೆ ವಿಧಿಸಲು ಪಕ್ಷಾತೀತವಾಗಿ ಹೋರಾಟಮಳವಳ್ಳಿ: ಬಾಲಕಿ ಹತ್ಯೆಗೈದವನಿಗೆ ಗಲ್ಲುಶಿಕ್ಷೆ ವಿಧಿಸಲು ಪಕ್ಷಾತೀತವಾಗಿ ಹೋರಾಟ

Rape case in Malavalli: Rs 10 lakh compensation for victim family announced by CM Bommai

ಕಠಿಣ ಕ್ರಮ ಜರುಗಿಸುವಂತೆ ಸೂಚನೆ

ಇಂತಹ ಅತ್ಯಾಚಾರ ಕೃತ್ಯ ನಡೆಸುವವರಿಗೆ ಈ ಪ್ರಕರಣ ಉದಾಹರಣೆ ಆಗಬೇಕಿದೆ. ಇನ್ನೊಮ್ಮೆ ಈ ರೀತಿಯ ಅತ್ಯಾಚಾರ ನಡೆದರೆ ಅತಿ ಕಡಿಮೆ ಅವಧಿಯಲ್ಲಿ ಉಗ್ರ ಶಿಕ್ಷೆ ನೀಡಲಾಗುತ್ತದೆ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಬೇಕು. ಮನುಷ್ಯತ್ವ ಇಲ್ಲದವರು ಮಾತ್ರ ಇಂತಹ ಕೃತ್ಯ ಮಾಡಲು ಸಾಧ್ಯ. ಏನೂ ತಿಳಿಯದ ಆ ಕಂದಮ್ಮನ ಮೇಲಿನ ಅತ್ಯಾಚಾರ, ಹತ್ಯೆಯನ್ನು ನೆನೆದರೆ ಕರುಳು ಕಿತ್ತು ಬರುತ್ತದೆ. ವೌಲ್ಯಗಳ ಕುಸಿತದಿಂದ ಹೀಗೆಲ್ಲಾ ಆಗುತ್ತಿದೆ. ಯಾವುದು ಸರಿ, ತಪ್ಪು ಎಂಬ ಸ್ಪಷ್ಟತೆ ಇಲ್ಲ. ಭಯಭಕ್ತಿ ಇರಬೇಕಾದ ಸಂಸ್ಕಾರ ಇರಬೇಕು. ನೈತಿಕವಾಗಿ ಇರುವಂತಹ ಬದ್ಧತೆ, ತಪ್ಪು ಮಾಡಲು ಎದರುವ ಸಂಸ್ಕಾರ ಇರಬೇಕು. ನಾಗರೀಕತೆ ಮತ್ತು ಸಂಸ್ಕೃತಿ ನಡುವೆ ವ್ಯತ್ಯಾಸವಿದೆ. ನಮ್ಮ ಹತ್ತಿರ ಇರುವುದು ನಾಗರೀಕತೆ. ನಾವು ಏನು ಆಗಿದ್ದೆವೋ ಅದು ಸಂಸ್ಕೃತಿ ಎಂದು ತಿಳಿಸಿದರು.

English summary
Rape case in Malavalli: Chief Minister Basavaraja Bommai announced compensation of 10 lakhs for victim girl's family. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X