ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ : ಮದ್ದೂರು ಬಳಿ ಖಾಸಗಿ ಬಸ್ ಬೆಂಕಿಗಾಹುತಿ

|
Google Oneindia Kannada News

ಮಂಡ್ಯ, ನವೆಂಬರ್ 30 : ಮದ್ದೂರು ಸಮೀಪ ತಡರಾತ್ರಿ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದೆ. ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಚಾಲಕ ಮತ್ತು ನಿರ್ವಾಹಕ ಸುರಕ್ಷಿತವಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನ ಕೊಲ್ಲಿ ವೃತ್ತದ ಬಳಿ ತಡರಾತ್ರಿ 1.45ಕ್ಕೆ ಎಸ್‌ಆರ್‌ಎಸ್ ಕಂಪನಿಯ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಮತ್ತು ನಿರ್ವಾಹಕ ಬಸ್‌ನಿಂದ ಕೆಳಗಿಳಿದಿದ್ದಾರೆ.

ಬಿಸಿ ಬಿಸಿ ಮದ್ದೂರು ವಡೆಯ ಹಿಂದೊಂದು ಸಿಂಪಲ್ ಕಹಾನಿ!ಬಿಸಿ ಬಿಸಿ ಮದ್ದೂರು ವಡೆಯ ಹಿಂದೊಂದು ಸಿಂಪಲ್ ಕಹಾನಿ!

Private tourist bus catches fire near Maddur

ಸುಮಾರು 10 ನಿಮಿಷದಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕಿಟ್ ನಿಂದಾಗಿ ಇಂಜಿನ್ ಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಬಸ್ಸಿಗೆ ಬೆಂಕಿ ಹಬ್ಬಿದ್ದು, ಸಂಪೂರ್ಣವಾಗಿ ಬಸ್ ಸುಟ್ಟು ಹೋಗಿದೆ.

ಬಸ್ ಗೆ ಬೆಂಕಿ, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಬಚಾವ್ಬಸ್ ಗೆ ಬೆಂಕಿ, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಬಚಾವ್

ಎಸ್‌ಆರ್‌ಎಸ್ ಕಂಪನಿಯ ಮ್ಯಾನೇಜರ್ ರುದ್ರಮೂರ್ತಿ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಬಸ್ಸಿನಲ್ಲಿ ಪ್ರಯಾಣಿಕರು ಇರಲಿಲ್ಲ. 35 ಸೀಟುಗಳ ಬಸ್ ಬಾಡಿಗೆಗೆ ತೆರಳುತ್ತಿತ್ತು. ಶಾರ್ಟ್ ಸರ್ಕಿಟ್‌ನಿಂದ ಘಟನೆ ನಡೆದಿದೆ. ಸಿಬ್ಬಂದಿ ಸುರಕ್ಷಿತವಾಗಿದ್ದಾರೆ' ಎಂದು ಹೇಳಿದರು.

ಬೆಂಗಳೂರು ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕಲ್ ಬಸ್ಬೆಂಗಳೂರು ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕಲ್ ಬಸ್

ಅಗ್ನಿ ಶಾಮಕ ದಳದ ಸಿಬ್ಬಂದಿ ಬಸ್ಸಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A private bus belongs to SRS caught fire in Maddur, Mandya district on November 30 early morning. Driver and conductor safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X