ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆದಿಚುಂಚನಗಿರಿಯಲ್ಲಿ ಒಕ್ಕಲಿಗರ ವಧು-ವರರ ಸಮಾವೇಶ; 200 ಯುವತಿಯರಿಗೆ 10 ಸಾವಿರ ಯುವಕರ ನೋಂದಣಿ

|
Google Oneindia Kannada News

ನಾಗಮಂಗಲ, ನವೆಂಬರ್‌, 14: ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಸೋಮವಾರ ರಾಜ್ಯಮಟ್ಟದ ಒಕ್ಕಲಿಗ ವಧು-ವರರ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಕೇವಲ 200 ಒಕ್ಕಲಿಗ ಯುವತಿಯರು ಪಾಲ್ಗೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಯುವಕರು ಆಗಮಿಸಿದ್ದರು. ವಧುಗಳು ಮತ್ತು ವರರ ಸಂಖ್ಯೆಯಲ್ಲಿದ್ದ ಈ ಅಂತರವನ್ನು ಗಮನಿಸಿದ ಆಯೋಜಕರಲ್ಲಿ ಅಚ್ಚರಿಯನ್ನು ಉಂಟುಮಾಡಿತ್ತು.

ರೈತ ಸಮೂಹದ ಹುಡುಗರೇ ಹೆಚ್ಚಿದ್ದರು
ವಧು-ವರರ ಸಮಾವೇಶಕ್ಕೆಂದು ಬಂದಿದ್ದ ಬಹುತೇಕ ಪೋಷಕರು ಭಾವಿ ಸೊಸೆ ಸಿಗಬಹುದೆ ಎಂದು ಹಾತೊರೆಯುತ್ತಿದ್ದರು. ವಧು-ವರರ ಸಮಾವೇಶಕ್ಕೆಂದು‌ ಜನಸ್ತೋಮವೇ ಹರಿದುಬಂದಿತ್ತು. ಈ ಹಿನ್ನೆಲೆ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು. ಚುಂಚನಗಿರಿ ಮಹಾ ಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ, ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿತ್ತು.

ಕೆಆರ್‌ಎಸ್‌ನಲ್ಲಿ ಆತಂಕ ಮೂಡಿಸಿದ ಚಿರತೆ; ಬೃಂದಾವನಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧಕೆಆರ್‌ಎಸ್‌ನಲ್ಲಿ ಆತಂಕ ಮೂಡಿಸಿದ ಚಿರತೆ; ಬೃಂದಾವನಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

ಆದಿಚುಂಚನಗಿರಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಈ ಸಮಾವೇಶ ಜಾತ್ರೆಯಂತೆ ಕಂಡು ಬಂದಿದ್ದು, ಗಮನ ಸೆಳೆದಿದೆ. ವಧುಗಳಿಗಿಂತ ವರರ ಸಂಖ್ಯೆಯೇ ಹೆಚ್ಚಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ವಧು-ವರರ ಸಮಾವೇಶದಲ್ಲಿ ರೈತ ಸಮೂಹದ ಹುಡುಗರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಇನ್ನು ವಿಶೇಷವಾಗಿದೆ.

Over 10 thousand grooms registered for 250 brides at Adichunchanagiri Mutt

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಧು-ವರರು
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ವಾರಕ್ಕೂ ಮೊದಲೇ ಸುಮಾರು 13 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದರು. ತಮ್ಮ ಪೋಷಕರೊಂದಿಗೆ ಜೊತೆಗೂಡಿ ವಧು-ವರರು ಆಗಮಿಸಿದ್ದರಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಬಿಜಿಎಸ್‌ ಸಭಾಮಂಟಪದಲ್ಲಿ ಭಾನುವಾರ ಬೆಳಗ್ಗೆ 9:30ಕ್ಕೆ ಆರಂಭವಾದ ಸಮಾವೇಶ ಮಧ್ಯಾಹ್ನ 2 ಗಂಟೆಯವರೆಗೂ ನಡೆಯಿತು.

ಮತಾಂತರಕ್ಕೆ ಯತ್ನ ಆರೋಪ: ಐವರನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರುಮತಾಂತರಕ್ಕೆ ಯತ್ನ ಆರೋಪ: ಐವರನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವರರು ವೇದಿಕೆ ಮೇಲೆ ನಿಂತು ತಮ್ಮ ವಿವಿರಗಳನ್ನು ತಿಳಿಸಿದರು. ಸ್ವವಿವರ ತಿಳಿಸಲು ಸರದಿ ಸಾಲಿನಲ್ಲಿ ನಿಂತು ಸಾಗುತ್ತಿದ್ದರಿಂದ ನೂಕುನುಗ್ಗಲು ಸಂಭವಿಸಿತ್ತು. ಆಗ ಕೆಲ ಪೋ‍ಷಕರು ನೂಕುನುಗ್ಗಲಿನಲ್ಲಿ ಆಯತಪ್ಪಿ ಕೆಳಗೆ ಬಿದ್ದು ಅಸ್ವಸ್ಥರಾಗಿದ್ದರು. ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು.

ವಧುಗಳಿಗಿಂತ ವರರ ಸಂಖ್ಯೆಯೇ ಹೆಚ್ಚಾಗಿದ್ದರಿಂದ ವಧುಗಳ ಪಾಲಕರು ಸಮಾವೇಶದ ವೇದಿಕೆ ಹತ್ತಲು ಹಿಂದೇಟು ಹಾಕಿದ್ದರು. ವಧು-ವರರ ಸಮಾವೇಶದಲ್ಲಿ ರೈತ ಸಮೂಹಹ ಹುಡುಗರೇ ಹೆಚ್ಚಾಗಿದ್ದು ವಿಶೇಷವಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಭಾನುವಾರ ಬೆಳ್ಳೂರು ಕ್ರಾಸ್‌ನಿಂದ ಆದಿಚುಂಚನಗಿರಿವರೆಗೆ ಉಚಿತ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

Over 10 thousand grooms registered for 250 brides at Adichunchanagiri Mutt

ಸಮುದಾಯದವರು ಒಗ್ಗಟ್ಟಾಗಲು ಕರೆ
ಸಮಾವೇಶದಲ್ಲಿ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದ್ದು, ಸಮಾವೇಶಕ್ಕೆ ಇಷ್ಟೊಂದು ದೊಡ್ಡಮಟ್ಟದಲ್ಲಿ ವಧು-ವರರು ಪಾಲ್ಗೊಳ್ಳುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಒಕ್ಕಲಿಗರ ವಧು-ವರರ ಸಮಾವೇಶವನ್ನು ಆಯೋಜಿಸಲಾಗುವುದು ಎಂದರು.

ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಬರುವಂತಹ ಸಂದರ್ಭದಲ್ಲಿ ಹಾಗೂ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾದರೆ ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯದ ಪ್ರತಿಯೊಬ್ಬರು ಹೋರಾಟಕ್ಕೆ ಬರಬೇಕು ಎಂದು ಕರೆ ನೀಡಿದರು.

English summary
Vokkaliga Bride and groom Convention held in Adichunchanagiri mutt of Nagamangala taluk, large number of boys from farmer community participated in convention, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X