ನಾಗಮಂಗಲ: ಶಾಸಕ ಸುರೇಶ್‌ ಗೌಡ ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಂಗಾನಾಚ್

ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಟಿ.ಚನ್ನಾಪುರ ಗ್ರಾಮದಲ್ಲಿ ಗ್ರಾಮದೇವತೆ ಮಂಚಮ್ಮದೇವಿ ಮತ್ತು ಮಸಣಕಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ತುಂಡುಡುಗೆ ನೃತ್ಯ ಪ್ರದರ್ಶನಗೊಂಡಿದೆ.

ಮಂಡ್ಯ, ಫೆಬ್ರವರಿ 28: ವಿಧಾನಸಭಾ ಚುನಾವಣೆ ಸಮೀಪಿಸುವ ಬೆನ್ನಲ್ಲೇ ಒಂದಲ್ಲೊಂದು ಕಾರಣಕ್ಕೆ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆಯುವ ನಾಗಮಂಗಲ ತಾಲೂಕಿನಲ್ಲಿ ಮತ್ತೊಮ್ಮೆ ನಂಗಾನಾಚ್ ನೃತ್ಯ ಮರುಕಳಿಸಿದೆ.

ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಟಿ.ಚನ್ನಾಪುರ ಗ್ರಾಮದಲ್ಲಿ ಗ್ರಾಮದೇವತೆ ಮಂಚಮ್ಮದೇವಿ ಮತ್ತು ಮಸಣಕಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮವೊಂದರಲ್ಲಿ ತುಂಡುಡುಗೆ ನೃತ್ಯ ಪ್ರದರ್ಶನಗೊಂಡಿದೆ. ರಸಮಂಜರಿ ಕಾರ್ಯಕ್ರಮದ ಮಧ್ಯೆ ಶಾಸಕ ಸುರೇಶ್‌ಗೌಡ ಸೇರಿದಂತೆ ತಾಲೂಕಿನ ಜೆಡಿಎಸ್ ಪಕ್ಷದ ಹಲವು ಮುಖಂಡರು ವೇದಿಕೆ ಕಾರ್ಯಕ್ರಮ ಮುಗಿಸಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.

Nanganach Dance In A Program Organized By MLA Suresh Gowda Supporters

ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಮತದಾರರನ್ನು ಸೆಳೆಯಲು ಶಾಸಕ ಸುರೇಶ್‌ಗೌಡ ಅಧ್ಯಕ್ಷತೆಯಲ್ಲಿ ಅವರ ಬೆಂಬಲಿಗರು ಗ್ರಾಮದೇವತೆ ಜಾತ್ರಾ ಮಹೋತ್ಸವದ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ ಆಯೋಜಿಸಿ ಡ್ಯಾನ್ಸರ್‌ಗಳನ್ನು ಕರೆಸಿ ರವಿಚಂದ್ರನ್ ನಟಿಸಿರುವ ಪ್ರೀತ್ಸೋದ್ ತಪ್ಪಾ ಚಿತ್ರದ ರಾಜಾ ರಾಜಾ ಹಾಡಿಗೆ ಅರೆಬೆತ್ತಲೆ ನೃತ್ಯ ಮಾಡಿಸಿದ್ದಾರೆ.

ತುಂಡುಡುಗೆ ತೊಟ್ಟಿದ್ದ ನೃತ್ಯಗಾರ್ತಿಯೊಬ್ಬಳು ಗ್ರಾಮದ ಬಾಲಕನೊಬ್ಬನನ್ನು ವೇದಿಕೆ ಮೇಲೆ ಎಳೆತಂದು ಕೂರಿಸಿ ಮೈಗೆಸುತ್ತಿಕೊಂಡಿದ್ದ ಟವೆಲ್ ಬಿಚ್ಚೆಸೆದು ವೇದಿಕೆಯಲ್ಲಿಯೇ ಅಸಭ್ಯವಾಗಿ ನೃತ್ಯ ಮಾಡಿದ್ದಲ್ಲದೆ, ಆ ಬಾಲಕನನ್ನು ಎತ್ತಿಕೊಂಡು ಮುತ್ತಿಟ್ಟು ಮುದ್ದಾಡಿದ ನಂತರ ಬಾಲಕನ ಮೇಲೆ ಮಲಗಿ ಚುಂಬಿಸುವ ಮೂಲಕ ಪಡ್ಡೆ ಹುಡುಗರ ಶಿಳ್ಳೆ ಗಿಟ್ಟಿಸಿಕೊಂಡಿದ್ದಾಳೆ. ಆದರೆ ಈ ಅಸಭ್ಯ ನೃತ್ಯ ನೆರೆದಿದ್ದ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಮುಜುಗರ ಉಂಟುಮಾಡಿದೆ ಎನ್ನಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಗ್ರಾಮದೇವತೆಗಳ ಹಬ್ಬ ಆಚರಣೆಗಳು ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವ ಸಂಪ್ರದಾಯ. ಆದರೆ ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಮುಂಬೈ ಸೇರಿದಂತೆ ನೆರೆಯ ತೆಲಂಗಾಣ, ಆಂದ್ರಪ್ರದೇಶ ಹಾಗೂ ಉತ್ತರ ಭಾರತದಲ್ಲಿ ನಡೆಸುತ್ತಿರುವ ನಂಗಾನಾಚ್ ನೃತ್ಯ ಪ್ರದರ್ಶನಗಳು ಇದೀಗ ತಾಲೂಕಿಗೆ ಪ್ರವೇಶಿಸಿರುವುದು ಜಿಲ್ಲೆ ಹಾಗೂ ತಾಲೂಕಿಗೆ ಕಳಂಕ ತರುತ್ತಿದ್ದು, ಇಂತಹ ಅಸಭ್ಯ ನೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮದ ಹಿರಿಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಡರಾತ್ರಿವೆರಗೂ ನಡೆದ ರಸಮಂಜರಿ ಕಾರ್ಯಕ್ರಮದ ಕೆಲ ಅಸಭ್ಯ ನೃತ್ಯಗಳ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+