ರಾತ್ರಿ 3 ಗಂಟೆಯಾದರೂ ಮನೆಗೆ ಹೋಗಲು ಬಿಡುತ್ತಿರಲಿಲ್ಲ, ಇವರಿಂದ ನನ್ನ ಆರೋಗ್ಯ ಹಾಳಾಯ್ತು ಎಂದ ಹೆಚ್ ಡಿ ಕುಮಾರಸ್ವಾಮಿ
ಮಂಡ್ಯ , ಏಪ್ರಿಲ್ 08: ಮಂಡ್ಯಕ್ಕೆ ಮೆಡಿಕಲ್ ಕಾಲೇಜ್, ಕೆಎಸ್‌ಆರ್‌ಟಿಸಿ ವಿಭಾಗ ತಂದೆ ಎಂಬ ಕೃಷಿ ಸಚಿವರು ಹೇಳಿದ್ದಾರೆ. 2004ರಲ್ಲಿ ಚಲುವರಾಯಸ್ವಾಮಿ ಆರು ತಿಂಗಳು ಮಂತ್ರಿ ಆಗಿರಲಿಲ್ಲ. ಆಗ ರಾತ್ರಿ ಮೂರು ಗಂಟೆಯಾದರೂ ನನ್ನನ್ನು ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಬಳಿಕ ಮಂತ್ರಿಯಾದರಲ್ಲ, ಯಾರಿಂದ ಮಂತ್ರಿಯಾದರು ಎಂದು ನೆನಪು ಮಾಡಿಕೊಳ್ಳಲಿ. ಪಾಪ ನನ್ನ ಮುಖ್ಯಮಂತ್ರಿ ಮಾಡಿದವರು ಅವರಲ್ಲವೇ!? ಮಂತ್ರಿ ಆಗುವಾಗ ಏನೇನೂ ಆಯಿತು ನೆನಸ್ಕೊಳ್ಳಪ್ಪ. ಇಂತವರ ಸಹವಾಸದಿಂದ ನನ್ನ ಅರೋಗ್ಯ ಹಾಳಾಯಿತು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸರ್ವಜ್ಞಾನಾಂಗ ಶಾಂತಿ ತೋಟದಿಂದ ಬಂದವರು ನಾವು, ಬಂದೂಕು ಬಳಸುವ ವೃತ್ತಿ ನಮ್ಮದಲ್ಲ. ಪರಮೇಶ್ವರ್ ಅವರು ಬಂದೂಕು ಹಿಡಿದು ಬರ್ತಾರಾ ಅಂತ ಕೇಳ್ತಾರೆ. ಕರ್ನಾಟಕ ರಾಜ್ಯ ಸಿಡಿ , ಪೆನ್ ಡ್ರೈವ್ ತಯಾರಿಸುವ ಫ್ಯಾಕ್ಟರಿ ಅಂತ ಮಂತ್ರಿ ಹೇಳ್ತಾರೆ. ಯಾವ ತನಿಖೆ ಮಾಡಿದ್ರಿ? ಹಳ್ಳ ಹಿಡಿಸಿದ್ದಿರಿ. ನೀಚ ಕೆಲಸ ಮಾಡುವವರು ನಿಮಗೆ ಗೊತ್ತಿದೆ. ಸಿದ್ದರಾಮಯ್ಯ ಮತ್ತು ಗೃಹ ಸಚಿವರು ಯಾರ ಮನೆ ರೈಡ್ ಮಾಡಿಸಿದ್ರು? ಏನು ಸಿಕ್ತು? ಇಂತವರು ನನ್ನ ಬಗ್ಗೆ ಲಘುವಾಗಿ ಮಾತನಾಡ್ತಾರೆ. ಹನಿಟ್ರ್ಯಾಪ್ ಕುರಿತಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಿಎಂ, ಕೇಂದ್ರ ಮಂತ್ರಿ ಹಾಗೂ ಮಾಜಿ ಪ್ರಧಾನಿ ಮಗ ನಾನು. ಪುಟ್ಟುಕೋಸಿ 4 ಎಕರೆ ಜಮೀನು ಒತ್ತುವರಿ ಮಾಡ್ಬೇಕಾ.? ಯಾವ ತನಿಖೆ ಬೇಕಾದರು ಮಾಡಲಿ. ಟ್ರಂಪ್ ಕೈಯಲ್ಲೆ ತನಿಖೆ ಮಾಡಿಸಿ ನಾನು ತಯಾರಿದ್ದೇನೆ. ನನಗೆ ಈ ಪರಿಸ್ಥಿತಿ ತಂದಿದ್ದಿರಿ, ನೀವು ಎಷ್ಟು ಕುಟುಂಬ ಆಳುಮಾಡಿದ್ದಿರಿ.ನಾಡಿನ ಜನತೆ ನಿಮಗೆ ಐದು ವರ್ಷದ ಸರ್ಕಾರ ಕೊಟ್ಟರೆ. ಬೆಲೆ ಏರಿಕೆ ಮಾಡಿ ಲೂಟಿ ಮಾಡ್ತಿದ್ದಾರೆ ಎಂದು ಅವರು ಕಿಡಿಕಾರಿದರು. ನಾನು ಸರ್ಕಾರದ ವಿರುದ್ಧ ಸಮರ ಸಾರಿದ್ದೇನೆ. ದಾಖಲೆಗಳ ಮೂಲಕ ಈ ಸರ್ಕಾರ ಭ್ರಷ್ಟ ಹಗರಣಗಳನ್ನು ಬಯಲಿಗೆ ತೆಗೆಯುತ್ತೇನೆ ಎಂದು ಹೇಳಿದ್ದೇನೆ. ನನ್ನದು ದಾಖಲೆ ಇಟ್ಟು ಮಾತನಾಂದ್ಯವ ಸಂಸ್ಕೃತಿ. ಗನ್, ಬಂದೂಕು ಸಂಸ್ಕೃತಿ ಅಲ್ಲ ಎಂದು ಕೇಂದ್ರ ಸಚಿವರು ಪರಮೇಶ್ವರ್ ಗೆ ತಿರುಗೇಟು ಕೊಟ್ಟರು.
ನಾನು ಜೋಕರ್ ಗಳಿಗೆಲ್ಲಾ ಉತ್ತರ ಕೊಡಲ್ಲ. ವಿಷಯವೇ ಗೊತ್ತಿಲ್ಲದವರ ಬಗ್ಗೆ ಮಾತನಾಡಿ ಅರ್ಥವಿಲ್ಲ ಎಂದು ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿಗೆ ತಿರುಗೇಟು ಕೊಟ್ಟರು. ಆ ವ್ಯಕ್ತಿ ಒಬ್ಬ ಜೋಕರ್. ಐಐಟಿ ಅಂದರೆ ಏನು ಎಂದು ಅವರಿಗೆ ಗೊತ್ತಾ? ಇಂತಹ ಜೋಕರ್ ಗಳಿಗೆ ನಾನು ಉತ್ತರ ಕೊಡಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಐಐಟಿ ತಪ್ಪಿದ್ದು ದೇವೇಗೌಡರಿಂದ ಎಂದು ಅವರು ನೀಡಿರುವ ಹೇಳಿಕೆಯ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಕೆಂಡಾಮಂಡಲರಾದ ಸಚಿವರು; ಅವರಿಗೆ ಮೊದಲು ವಿಷಯ ತಿಳಿದುಕೊಂಡು ಮಾತನಾಡಲು ಹೇಳಿ. ರಾಜ್ಯದಲ್ಲಿ ಈಗ ಐಐಟಿ ಇಲ್ಲಿದೆ, ಯಾವ ಊರಿನಲ್ಲಿದೆ ಎಂದು ತಿಳಿದುಕೊಂಡು ಮಾತನಾಡಲು ಹೇಳಿ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.
ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಬಗ್ಗೆ ಆಕ್ಷೇಪ ಯಾಕೆ? ನಾನು ಈ ಕ್ಷೇತ್ರದ ಸಂಸದ. ನನ್ನದೂ ಸ್ವಾಗತವಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ರಾಜಕೀಯ ಜಾಡ್ಯಕ್ಕೆ ನಾನೇನು ಮಾಡಲಿ. ಕೃಷಿ ವಿವಿ ಇರಲಿ, ಮೊದಲು ವಿಸಿ ಫಾರಂ ಏನಾಗಿದೆ ಅಂತ ನೋಡಲಿ. ಕೃಷಿ ಸಚಿವರು ಅಲ್ಲವೇ? ಕೃಷಿ ಫಾರಂ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ? ಅಲ್ಲಿ ಏನೇನು ಆಗುತ್ತಿದೆ? ಸಿಬ್ಬಂದಿ ಕಥೆ ಏನು? ಇದೆಲ್ಲಾ ಗೊತ್ತಿಲ್ಲವೇ ಎಂದು ಟೀಕಾ ಪ್ರಹಾರ ನಡೆಸಿದರು.
ನಾನು ಮಾಜಿ ಸಿಎಂ, ಮಾಜಿ ಪ್ರಧಾನಿಯ ಮಗ. 4 ಎಕರೆ ಜಮೀನು ಒತ್ತುವರಿ ಮಾಡ್ಬೇಕಾ? ಯಾವ ತನಿಖೆ ಬೇಕಾದರು ಮಾಡಲಿ. ಬೇಕಾದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಕೈಯಲ್ಲೇ ತನಿಖೆ ಮಾಡಿಸಿ, ನಾನು ತಯಾರಿದ್ದೇನೆ. ನನಗೆ ಈ ಪರಿಸ್ಥಿತಿ ತಂದಿದ್ದಿರಿ, ನೀವು ಎಷ್ಟು ಕುಟುಂಬ ಹಾಳು ಮಾಡಿದ್ದಿರಿ ಎನ್ನುವುದು ಗೊತ್ತಿದೆ. ಜನರೇನು ನನಗೆ ಅಷ್ಟು ಬೇಗ ರಾಜಕೀಯ ನಿವೃತ್ತಿ ನೀಡಲ್ಲ. ಜನತೆ ನನಗೆ ಐದು ವರ್ಷದ ಸರ್ಕಾರ ಕೊಟ್ಟರೆ ನೀವು ಲೂಟಿ ಮಾಡಿರುವುದನ್ನು ಬಡ್ಡಿ ಸಮೇತ ವಸೂಲಿ ಮಾಡಿ ಖಜಾನೆಗೆ ಭರ್ತಿ ಮಾಡುತ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಕುಮಾರಸ್ವಾಮಿಗೆ ಹೆದರುವ ಮಗ ನಾನಲ್ಲ ಎಂದು ಒಬ್ಬರು ಹೇಳಿಕೆ ನೀಡಿದ್ದಾರೆ. ಆದರೆ, ಹೆದರಿಕೆ ಮಾತಿರಲಿ, ಹೇಗಾದರೂ ಪಾರಾದರೆ ಸಾಕು ಎಂದು ಯಾರು ಯಾರ ಬಾಗಿಲು ಕಾಯುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಎಲ್ಲಾ ದಾಖಲೆಗಳನ್ನು ಭದ್ರವಾಗಿ ಇಟ್ಟಿದ್ದೇನೆ. ಈಗಷ್ಟೇ ಯುದ್ಧ ಆರಂಭ ಮಾಡಿದ್ದೇನೆ. ಎಲ್ಲವನ್ನೂ ಹೊರಗೆ ಇಡುವ ಕಾಲ ಸನಿಹವಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದಲ್ಲಿ ಇರುವವರು ಅಧಿಕಾರ ದುರುಪಯೋಗ ಮಾಡುತ್ತಿರುವ ದಾಖಲೆಗಳು ನನ್ನಲ್ಲಿ ಇವೆ. ನನ್ನ ವಿರುದ್ಧ ಯುದ್ದ ಇಡೀ ಸರ್ಕಾರವೇ ಸೇಡು ಸಾಧಿಸುತ್ತಿದೆ. ಒಬ್ಬ ಕುಮಾರಸ್ವಾಮಿಯನ್ನು ಸುಮ್ಮನಾಗಿಸೋಕೆ ಇಷ್ಟೆಲ್ಲಾ ಮಾಡುತ್ತಿದ್ದಾರೆ. ನಾನೇನು ಸುಮ್ಮನೆ ಕೂರುವ ಆಸಾಮಿ ಅಲ್ಲ. ಸರ್ಕಾರದ ಅಕ್ರಮಗಳ ಟನ್ ಗಟ್ಟಲೆ ದಾಖಲೆಗಳು ಎಂದು ತಿಳಿಸಿದರು. ನಾನು ದಾಖಲೆ ಕೊಟ್ಟರೂ ನ್ಯಾಯ ದೊರಕಲ್ಲ.ಹೀಗಾಗಿ ದಾಖಲೆಗಳನ್ನು ಭದ್ರವಾಗಿಟ್ಟಿದ್ದೇನೆ. ಕೆರೆಯನ್ನೇ ನುಂಗಿ ಅಣ್ಣನ ಹೆಸರಿಗೆ ರಿಜಿಸ್ಟರ್ ಮಾಡಿಸಿ ಮತ್ತೆ ಗಿಫ್ಟ್ ಡೀಡ್ ಮಾಡಿಸಿಕೊಂಡ ಗಿರಾಕಿಗಳು ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಿದ್ದಾರೆ. ಅಂತಹವರಿಗೆಲ್ಲ ಅವರದೇ ಭಾಷೆಯಲ್ಲಿ ಉತ್ತರ ಕೊಡುವ ಕಾಲ ಬಂದಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಲವತ್ತು ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿ ಅಲ್ಲಿ ನಾನು ಬೇಸಾಯ ಮಾಡುತ್ತಿದ್ದೇನೆ. ಆದರೆ, ಅದರ ಮೇಲೆಯೂ ಇವರ ಕಣ್ಣು ಬಿದ್ದಿದೆ. ದೇಶದ ಇತಿಹಾಸದಲ್ಲಿಯೇ ಐವರ ಸಮಿತಿ ಮಾಡಿದ್ದಾರೆ. ರೆವಿನ್ಯೂ ಇಲಾಖೆಯಲ್ಲಿ ತನಿಖೆಗೆ ಆದೇಶ ಇಲ್ಲ. ಗೌಪ್ಯವಾಗಿ ಅವರ ಹೇಳಿಕೆಯನ್ನು ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ ವಿರುದ್ಧ ಗೌಪ್ಯವಾಗಿ ತನಿಖೆ ಮಾಡಿ, ಮಾಹಿತಿದಾರರ ವಿಚಾರಣೆ ಅಧಿಕೃತವಾಗಿ ಮಾಡಬೇಡಿ. ಹೀಗೆಂದು ಆದೇಶ ಕೊಡಲಾಗಿದೆ. ಇದನ್ನೂ ಒಂದು ತನಿಖೆ ಎನ್ನಬೇಕೆ? ಇಷ್ಟು ಬೇಗ ನಮ್ಮ ಜನ ನನ್ನನ್ನು ರಾಜಕೀಯ ನಿವೃತ್ತಿ ಮಾಡಿಸ್ತಾರಾ? ಇವರೆಲ್ಲ ನನಗೆ ಸಿಗೋದಿಲ್ಲವೇ? ಎಂದು ಅವರು ಕಿಡಿಕಾರಿದರು.












Click it and Unblock the Notifications