ಮೇಲುಕೋಟೆ ಶ್ರೀ ಚಲುವನಾರಾಯಣ ಸ್ವಾಮಿ ವೈರಮುಡಿ ಆರಂಭ: ಏ.1 ರಂದು ಬ್ರಹ್ಮೋತ್ಸವ

ಮಂಡ್ಯ, ಮಾರ್ಚ್‌ 27: ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಸೋಮವಾರದಿಂದ ಏಪ್ರಿಲ್ 8 ರವರೆಗೆ ನಡೆಯಲಿದ್ದು, ಏಪ್ರಿಲ್1 ರಂದು ಶ್ರೀ ಚಲುವನಾರಾಯಣ ಸ್ವಾಮಿಗೆ ವೈರಮುಡಿ ಕಿರೀಟಧಾರಣೆ ನಡೆಯಲಿದೆ.

ಸೋಮವಾರ(ಮಾ.27) ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ (ಮೃತ್ತಿಕಾ ಸಂಗ್ರಹಣೆ) ಯೊಂದಿಗೆ ಶ್ರೀಚಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಆರಂಭವಾಗಿದ್ದು, ಮಾ.28 ರಂದು ಕಲ್ಯಾಣೋತ್ಸವ -ಧಾರಾಮಹೋತ್ಸವ -ಅಧಿವಾಸನ- ರಕ್ಷಾ ಬಂಧನ - ಧ್ವಜ ಪ್ರತಿಷ್ಠೆ, ಮಾ.29 ರಂದು ಧ್ವಜಾರೋಹಣ- ಶ್ರೀ ರಾಮಾನುಜಾಚಾರ್ಯರಿಗೆ ಅಭಿಷೇಕ, ಭೇರಿತಾಡನ- ತಿರುಪ್ಪರೈ - ಹಂಸವಾಹನ -ಯಾಗಶಾಲಾ ಪ್ರವೇಶ, ಮಾ.30 ರಂದು ಶ್ರೀರಾಮನವಮಿ -ಶೇಷವಾಹನ ಪಡಿಯೇತ್ತ, ಮಾ.31 ರಂದು ನಾಗವಲ್ಲಿ ಮಹೋತ್ಸವ-ನರಾಂಧೋಳಿಕಾರೋಹಣ -ಚಂದ್ರಮಂಡಲ ವಾಹನ -ಪಡಿಯೇತ್ತ ನಡೆಯಲಿದೆ.

Melukote Vairamudi Festival 2023 Will Be Celebrated from March 27 to April 8

ಪ್ರತಿದಿನವೂ ಒಂದೊಂದು ಕಾರ್ಯಕ್ರಮ

ಏಪ್ರಿಲ್1 ರಂದು ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ- ಪಡೆಯೇತ್ತ, ಏ.2 ರಂದುಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, ಏ.3 ರಂದು ಗಜೇಂದ್ರ ಮೋಕ್ಷ -ಅನೆವಸನ್ತ-ಕುದುರೆ ವಾಹನ -ಆನೆ ವಾಹನ ವಿಶೇಷ ಪಡಿಯೇತ್ತ, ಏ.4ರಂದು - ಶ್ರೀ ಮನ್ಮಹಾರಥೋತ್ಸವ ಯಾತ್ರಾದಾನ, ರಥೋತ್ಸವ, ಶ್ರೀ ಚೆಲುವರಾಯಸ್ವಾಮಿ ಮತ್ತು ಶ್ರೀವರಾಮಾನುಜರಿಗೆ ಅಭಿಷೇಕ ಅಮ್ಮನವರ ಸನ್ನಧಿಯಲ್ಲಿ ಬಂಗಾರ ಪಲ್ಲಕ್ಕಿ ಉತ್ಸವ, ಏ.5 ರಂದು ಪಂಗುನ್ಯುತ್ತರಮ್ - ತೆಪ್ಪೋತ್ಸವ - ಡೋಲೋತ್ಸವ ಕುದುರೆ ವಾಹನ - ಕಳ್ಳರ ಸುಲಿಗೆ ಕಾರ್ಯಕ್ರಮ ನಡೆಯಲಿದೆ.

ಏ.6 ರಂದು ಶ್ರೀ ನಾರಾಯಣಸ್ವಾಮಿ ಜಯನ್ತಿ, ಸಂಧಾನ ಸೇವೆ - ಚೂರ್ಣಾಭಷೇಕ - ಅವಭೃಥ - ಪಟ್ಟಾಭಿಷೇಕ ಪುಷ್ಪಮಂಟಪಾರೋಹಣ - ಸಮರಭೂಪಾಲ ವಾಹನ - ಪಡಿಮಾಲೆ - ಪೂರ್ಣಾಹುತಿ, ಶಾತ್ತುಮೊರೈ, ಕುಂಭಪ್ರೋಕ್ಷಣೆ, ಏ.7 ರಂದು ಶ್ರೀ ನಾರಾಯಣ ಸ್ವಾಮಿಗೆ ಮಹಾಭಿಷೇಕ - ಪುಷ್ಪಯಾಗ - ಕತ್ತಲು ಪ್ರದಕ್ಷಿಣೆ - ಹನುಮಂತವಾಹನ - ಉದ್ಘಾಸನ ಪ್ರಬಂಧ, ಏ.8 ರಂದು ಶ್ರೀ ಅಮ್ಮನವರಿಗೆ ಶ್ರೀ ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ ಕೋಡೈ ತಿರುನಾಳ್ ಉತ್ಸವ ನಡೆಯಲಿದೆ.

Melukote Vairamudi Festival 2023 Will Be Celebrated from March 27 to April 8

ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ

ಉತ್ಸವದ ಹಿನ್ನಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಅಗತ್ಯತೆಗೆ ತಕ್ಕಂತೆ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚಿರುವುದರಿಂದ ಟ್ಯಾಂಕರ್ ಖಾಲಿಯಾದ ನಂತರ ಮರುಪೂರ್ಣವಾಗುವ ರೀತಿ ನೋಡಿಕೊಳ್ಳಲಾಗಿದೆ. ಶೌಚಾಲಯ, ವಾಹನ ನಿಲುಗಡೆ, ವಯಸ್ಸಾದವರು ಹಾಗೂ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವಾಹನದ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ರಾಜಮುಡಿ ಹಾಗೂ ವೈರಮುಡಿಯನ್ನು ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ತೆಗೆದುಕೊಂಡು ಹೋಗುವಾಗ ಮಾರ್ಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾ ಖಜಾನೆಯಿಂದ, ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನ, ಇಂಡುವಾಳು, ತೂಬಿನಕೆರೆ, ಗಣಂಗೂರು, ಶೆಟ್ಟಿಹಳ್ಳಿ, ಕಿರಂಗೂರು ಬನ್ನಿಮಂಟಪ, ಕೂಡಲಕುಪ್ಪೆ ಗೇಟ್, ದರಸಗುಕುಪ್ಪೆ, ಪಾಂಡವಪುರ ರೈಲ್ವೆ ನಿಲ್ದಾಣ, ಕೆನ್ನಾಳು, ಪಾಂಡವಪುರ, ಹಿರೇಮರಳಿ ಗೇಟ್, ಬಣಘಟ್ಟ,ಟಿ.ಎಸ್.ಛತ್ರ, ಮಹದೇಶ್ವರ ಪುರ, ಬೆಳ್ಳಾಳೆ, ಜಕ್ಕನಹಳ್ಳಿ, ತಗಲಕೆರೆ ಹಾಗೂ ಮೇಲುಕೋಟೆ ತಲುಪಲಿದೆ.

Melukote Vairamudi Festival 2023 Will Be Celebrated from March 27 to April 8

ಏನಿದು ವೈರಮುಡಿ ಮಹೋತ್ಸವ

ವೈರಮುಡಿ ಎನ್ನುವುದು ವಜ್ರ ಖಚಿತ ಕಿರೀಟವಾಗಿದ್ದು, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬ ನಂಬಿಕೆ ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಜನವಲಯದಲ್ಲಿರುವ ನಂಬಿಕೆಯಾಗಿದೆ. ಇದನ್ನು ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+