ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪುವಿನಿಂದ ಅಯ್ಯಂಗಾರರ ಹತ್ಯಾಕಾಂಡ ನಡೆದಿದ್ದು ಮೇಲುಕೋಟೆಯಲ್ಲಲ್ಲ! ಅಲ್ಲಿ ದೀಪಾವಳಿಯೂ ನಡೆಯುತ್ತೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಅಕ್ಟೋಬರ್ 23: ಟಿಪ್ಪು ನಡೆಸಿದ ಹತ್ಯಾಕಾಂಡದಿಂದಾಗಿ ಮೇಲುಕೋಟೆಯಲ್ಲಿ ಯಾರೂ ದೀಪಾವಳಿ ಆಚರಿಸುವುದಿಲ್ಲ ಎಂಬ ದೋಷಪೂರ್ಣಸುದ್ದಿ ಹಲವಾರು ವರ್ಷಗಳಿಂದ ಹರಡುತ್ತಲೇ ಇದೆ. ಆದರೆ ಟಿಪ್ಪುವಿನಿಂದ ಅಯ್ಯಂಗಾರರ ಹತ್ಯಾಕಾಂಡ ನಡೆದದ್ದು ನಿಜ. ಆದರೆ ಅದು ನಡೆದದ್ದು ಮೇಲುಕೋಟೆಯಲ್ಲಲ್ಲ, ಶ್ರೀರಂಗಪಟ್ಟಣದಲ್ಲಿ ಎಂಬ ಕುತೂಹಲಕರ ಸಂಗತಿ.

ಸ್ವಾತಿ ನಕ್ಷತ್ರ ಚತುರ್ದಶಿಯಂದು ನೃಸಿಂಹಸ್ವಾಮಿಗೆ ನಡೆಯುವ ಅಭಿಷೇಕದಲ್ಲಿ ಪಾಲ್ಗೊಳ್ಳಲು ಅನೇಕ ಶ್ರೀವೈಷ್ಣವರು ಮಂಡ್ಯ ಕೊಪ್ಪಲು, ಕಿರಂಗೂರು ಮೊದಲಾದ ಊರುಗಳಿಂದ ಬಂದು ಸೇರಿದ್ದರು. ರಂಗನಾಥ ದೇಗುಲಕ್ಕೆ ಹೋಗುವ ಹಾದಿಯ ಆರಂಭದಲ್ಲೇ ಎಡಬದಿಗೆ ಈ ನೃಸಿಂಹ ದೇಗುಲ ಇದೆ. ಈ ಶ್ರೀವೈಷ್ಣವರಲ್ಲಿ ಹೆಬ್ಬಾರ್ ಅಯ್ಯಂಗಾರರೂ ಸೇರಿದಂತೆ ಅನೇಕ ಪಂಗಡದವರಿದ್ದರು. ಅದರಲ್ಲಿ ಮಂಡಯಂ ಅಯ್ಯಂಗಾರರು ಹೆಚ್ಚಿದ್ದರು.

ಮೇಲುಕೋಟೆಯಲ್ಲಿ ದೀಪಾವಳಿ ಸಂಭ್ರಮ; ಸೋಮವಾರ ವಿಶೇಷ ಪೂಜೆ, ಗ್ರಹಣದ ದಿನ ದರ್ಶನವಿಲ್ಲಮೇಲುಕೋಟೆಯಲ್ಲಿ ದೀಪಾವಳಿ ಸಂಭ್ರಮ; ಸೋಮವಾರ ವಿಶೇಷ ಪೂಜೆ, ಗ್ರಹಣದ ದಿನ ದರ್ಶನವಿಲ್ಲ

ಈ ಮಧ್ಯೆ ಶ್ರೀರಂಗಪಟ್ಟಣದಲ್ಲಿ ಆಳ್ವಿಕೆ ನಡೆಸುತ್ತಿದ್ದ ಟಿಪ್ಪುವಿನ ದೌರ್ಜನ್ಯ ಹಿಂದೂಗಳು ಅದರಲ್ಲೂ ಅಯ್ಯಂಗಾರ್‌ಗಳ ಮೇಲೆ ಹೆಚ್ಚಾಗಿಯೇ ಇತ್ತು. ಟಿಪ್ಪುವಿನ ದಬ್ಬಾಳಿಕೆಯಿಂದ ತಪ್ಪಿಸಿಕೊಂಡು ಮತ್ತೆ ಮೈಸೂರು ಅರಸರ ಆಳ್ವಿಕೆಯನ್ನೇ ಪ್ರತಿಷ್ಠಾಪಿಸಲು ಅಯ್ಯಂಗಾರರರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಣಿ ಲಕ್ಷ್ಮಮ್ಮಣ್ಣಿಯವರನ್ನು ಪುನಃ ಪಟ್ಟಕ್ಕೆ ತರಬೇಕೆಂದು ಕೆಲವು ಶ್ರೀವೈಷ್ಣವರು ತಿರುಮಲರಾವ್ ಮತ್ತು ನಾರಾಯಣರಾವ್ ಸಹೋದರರ ಮಾರ್ಗದರ್ಶನದಲ್ಲಿ ರಹಸ್ಯವಾಗಿ ಕಾರ್ಯತಂತ್ರ ರೂಪಿಸುತ್ತಿದ್ದರು.

 Massacre of 800 Mandyam Iyengars by Tipu Sultan Happened in Srirangapatna, not Melukote: SN Simha

ಇಂತಹ ಯೋಜನೆಯಲ್ಲಿ ಮಂಡಯಂ ಸಮುದಾಯದವರು ಮುಂಚೂಣಿಯಲ್ಲಿದ್ದರು. ಮಂಡಯಂ ಅಯ್ಯಂಗಾರ್ ಮತ್ತು ಶ್ರೀವೈಷ್ಣವರು ಟಿಪ್ಪುವಿನ ಆಡಳಿತದ ವಿರುದ್ಧ ಸೆಟೆದು ನಿಂತು ಮೈಸೂರು ಮಹಾರಾಣಿ ಲಕ್ಷ್ಮಣ್ಣಿಯವರಿಗೆ ಬೆಂಬಲ ನೀಡುತ್ತಿದ್ದಾರೆ. ಅವರನ್ನು ಮತ್ತೆ ಮೈಸೂರು ಸಂಸ್ಥಾನಕ್ಕೆ ಕರೆತರುವ ಯತ್ನ ನಡೆಸುತ್ತಿರುವ ಸುಳಿವು ಟಿಪ್ಪುವಿಗೆ ತಿಳಿಯಿತು.

ಇದರಿಂದ ವ್ಯಾಘ್ರನಾದ ಟಿಪ್ಪು ಶ್ರೀವೈಷ್ಣವರ ಈ ಯೋಜನೆಯನ್ನು ವಿಫಲಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದ. ದೀಪಾವಳಿ ಸಂದರ್ಭದಲ್ಲಿ ಎಲ್ಲರೂ ಒಟ್ಟಿಗೇ ಸೇರಿ ಹಬ್ಬ ಆಚರಿಸುವುದು, ದೇಗುಲದಲ್ಲಿ ವಿಶೇಷ ಪೂಜೆ ನಡೆಸುತ್ತಿರುವ ಬಗ್ಗೆ ಟಿಪ್ಪುವಿಗೆ ಸುಳಿವು ಸಿಕ್ಕಿತ್ತು. ಇದರ ಲಾಭ ಪಡೆದ ಟಿಪ್ಪು ತನ್ನ ಸೈನಿಕರ ಸಹಾಯದಿಂದ ಶ್ರೀವೈಷ್ಣವರು, ಮಂಡಯಂ ಅಯ್ಯಂಗಾರರು ಸೇರಿದಂತೆ ಎಲ್ಲರನ್ನೂ ವಧಿಸಿ ದೇಗುಲದ ಆವರಣದಲ್ಲಿದ್ದ ಹುಣಸೇಮರಗಳಿಗೆ ಶವಗಳನ್ನು ನೇತುಹಾಕಿಸಿದ್ದ.

ಭೀಕರ ದುರಂತದಿಂದ ತಪ್ಪಿಸಿಕೊಂಡ ಈ ಸಂತ್ರಸ್ಥ ಕುಟುಂಬಗಳಲ್ಲಿ ಒಂದು ಕುಟುಂಬ ನಂತರದಲ್ಲಿ ಮೇಲುಕೋಟೆಗೆ ಬಂದು ನೆಲೆಸಿತು. ನರಕಚತುರ್ದಶಿಯಂದೇ ಮೃತರ ಶ್ರಾದ್ಧವು ಬರುವುದರಿಂದ ಸಹಜವಾಗಿಯೇ ಹಬ್ಬದ ಆಚರಣೆ ಸಾಧ್ಯವಿಲ್ಲ. ಆದರೆ ನಂತರದ ತಲೆಮಾರುಗಳೂ ಇದನ್ನೇ ಸಂಪ್ರದಾಯವಾಗಿ ಆಚರಿಸಿಕೊಂಡು ಬಂದಿವೆ.

 Massacre of 800 Mandyam Iyengars by Tipu Sultan Happened in Srirangapatna, not Melukote: SN Simha

ಹೀಗೆ ಮೇಲುಕೋಟೆಯಲ್ಲಿ ನೆಲೆಸಿದ ಕುಟುಂಬ ಕಾಲಾಂತರದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಬಲವಾದ್ದರಿಂದ, ಅವರ ಪ್ರಭಾವದಿಂದ ಇನ್ನೊಂದೆರಡು ಕುಟುಂಬಗಳು, ತಾವು ಸಂತ್ರಸ್ತರಲ್ಲದಿದ್ದರೂ ಇದೇ ಪದ್ಧತಿ ಅನುಸರಿಸಿದವು. ಹೀಗೆ ದೀಪಾವಳಿ ಆಚರಿಸದ ಅಯ್ಯಂಗಾರ್ ಕುಟುಂಬಗಳು ಉದ್ಯೋಗದ ದೆಸೆಯಿಂದ ಇಂದು ದೇಶ ವಿದೇಶಗಳಲ್ಲಿ ಹರಡಿ ನೆಲೆಸಿವೆ.

ಶ್ರೀವೈಷ್ಣವ ಕುಟುಂಬಗಳು ದೀಪಾವಳಿ ಆಚರಿಸುತ್ತವೆ
ಮೇಲುಕೋಟೆಯ ಉಳಿದ ನೂರಾರು ಶ್ರೀವೈಷ್ಣವ ಕುಟುಂಬಗಳು ದೀಪಾವಳಿ ಆಚರಿಸುತ್ತವೆ. ದೇವಸ್ಥಾನದಲ್ಲೂ ವಿಶೇಷ ಉತ್ಸವ ನಡೆಯುತ್ತದೆ. ಹಯವದನರಾಯರ ಮೈಸೂರು ಗೆಜೆಟಿಯರ್ ನೋಡಿದರೆ ಸತ್ಯಗಳು ತಿಳಿಯುತ್ತವೆ. ಆದರೆ ಗೂಗಲ್ ಮಾಹಿತಿಯನ್ನೇ ಅವಲಂಬಿಸಿ, ಹಲವರು ಬರೆಯುತ್ತಿರುವ ಲೇಖನಗಳಿಂದ ಮೇಲುಕೋಟೆಯಲ್ಲಿ ಟಿಪ್ಪು ಹತ್ಯಾಕಾಂಡ ನಡೆಸಿದ ಎಂಬ ದೋಷಪೂರಿತ ಸುದ್ದಿಯನ್ನೇ ನಿಜವೆಂದು ನಂಬುವ ಪರಿಸ್ಥಿತಿ ಬಂದಿದೆ.

ಟಿಪ್ಪು ಮೇಲುಕೋಟೆಯಲ್ಲಿ ಹತ್ಯಾಕಾಂಡ ನಡೆಸಿಲ್ಲ

ಮಂಡಯಂ ಅಯ್ಯಂಗಾರ್ ಸೇರಿದಂತೆ ಹಲವರ ಹತ್ಯೆ ನಡೆದಿರುವುದು ಶ್ರೀರಂಗಪಟ್ಟಣದಲ್ಲಿ. ಇದು ಮೈಸೂರು ಗೆಜಿಟಿಯರ್‌ನಲ್ಲೂ ನಮೂದಾಗಿದೆ. ಆದರೆ ವಿಪರ್ಯಾಸ ಎಂದರೆ ಎಲ್ಲ ಲೇಖನಗಳಲ್ಲೂ ಮೇಲುಕೋಟೆಯಲ್ಲಿ ಟಿಪ್ಪು ಹತ್ಯಾಕಾಂಡ ನಡೆಸಿದ್ದ. ಅದರ ಸಲವಾಗಿ ಇಡೀ ಮೇಲುಕೋಟೆಯಲ್ಲಿ ದೀಪಾವಳಿ ಆಚರಣೆ ಇಲ್ಲ ಎಂಬ ದೋಷಪೂರಿತ ಲೇಖನಗಳನ್ನು ಪ್ರಕಟಿಸಲಾಗಿದೆ. ಇದು ಸತ್ಯವಲ್ಲ ಎಂದು ಮಂಡಯಂ ಅಯ್ಯಂಗಾರ್ ಕುಟುಂಬದ ಹಾಗೂ ಸಾಹಿತಿಯಾಗಿರುವ ಎಸ್‌ಎನ್ ಸಿಂಹ ಮಾಹಿತಿ ನೀಡಿದ್ದಾರೆ.

English summary
The massacre of 800 Mandyam Iyengars happened in Srirangapatna and not Melukote as has been wrongly recorded in history books, Said Simha who hails from the Madyam community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X