ಹುತಾತ್ಮ ಯೋಧ ಗುರು ಪತ್ನಿ ಲೋಕಸಭೆ ಚುನಾವಣೆ ಕಣಕ್ಕೆ?

Recommended Video

      ನಿಖಿಲ್ ಮತ್ತು ಸುಮಲತಾಗೆ ಪೈಪೋಟಿ ನೀಡಲು ಇನ್ನೊಬ್ಬ ಅಭ್ಯರ್ಥಿ ರೆಡಿ..? | Oneindia Kannada

      ಮಂಡ್ಯ, ಮಾರ್ಚ್‌ 07: ಹುತಾತ್ಮ ಯೋಧ ಮಂಡ್ಯದ ಗುರು ಅವರ ಪತ್ನಿ ಕಲಾವತಿ ಅವರು ಲೋಕಸಭಾ ಚುನಾವಣೆ ಕಣಕ್ಕೆ ಇಳಿಸುವ ಸಂಭವ ಇದೆ.

      ಸುಮಲತಾ ಅಂಬರೀಶ್, ನಿಖಿಲ್ ಕುಮಾರಸ್ವಾಮಿ ಅವರ ನಡುವೆ ಚುನಾವಣಾ ಪೂರ್ವವೇ ರಾಜಕೀಯ ಗುದ್ದಾಟ ಪ್ರಾರಂಭವಾಗಿ ಮಂಡ್ಯದ ರಾಜಕೀಯ ಕಳೆ ಕಟ್ಟಿರುವ ಈ ಹೊತ್ತಿನಲ್ಲಿ ಗುರು ಪತ್ನಿ ಕಲಾವತಿ ಅವರ ಎಂಟ್ರಿ ಮಂಡ್ಯ ರಾಜಕೀಯವನ್ನು ಇನ್ನಷ್ಟು ಕುತೂಹಲಗೊಳಿಸಿದೆ.

      ಕಲಾವತಿ ಅವರು ಬಿಎಸ್‌ಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಸಾಮಾಜಿಕ ಹೋರಾಟಗಾರ ದ್ವಾರಕನಾಥ್ ಅವರು ಕಲಾವತಿ ಅವರನ್ನು ಬಿಎಸ್‌ಪಿ ಇಂದ ಕಣಕ್ಕೆ ಇಳಿಸಬೇಕು ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

      ಹಿಂದುಳಿದ ಸಮುದಾಯಕ್ಕೆ ಆದ್ಯತೆ ಲೆಕ್ಕಾಚಾರ

      ಹಿಂದುಳಿದ ಸಮುದಾಯಕ್ಕೆ ಆದ್ಯತೆ ಲೆಕ್ಕಾಚಾರ

      ಕಲಾವತಿ ಅವರಿಗೆ ಟಿಕೆಟ್ ನೀಡಿದಲ್ಲಿ ಹಿಂದುಳಿದ ಮಡಿವಾಳ ಸಮುದಾಯಕ್ಕೆ ಆದ್ಯತೆ ನೀಡಿದಂತಾಗುತ್ತದೆ. ಅಲ್ಲದೆ ಮಂಡ್ಯದಾದ್ಯಂತ ಹುತಾತ್ಮ ಗುರು ಅವರ ಬಗೆಗೆ ಸಿಂಪತಿ ಇದ್ದು ಮತಗಳಾಗಿ ಪರಿವರ್ತನೆ ಆಗುತ್ತದೆ. ಮುಖ್ಯವಾಗಿ ಹುತಾತ್ಮ ಯೋಧನ ಪತ್ನಿಗೆ ರಾಜಕೀಯ ಅವಕಾಶ ಕೊಡಿಸಿದಂತಾಗುತ್ತದೆ ಎಂಬುದು ಬಿಎಸ್‌ಪಿ ಚಿಂತನೆ ಆಗಿದೆ.

      ಪ್ರತಿಕ್ರಿಯೆ ನೀಡಿಲ್ಲ ಕಲಾವತಿ

      ಪ್ರತಿಕ್ರಿಯೆ ನೀಡಿಲ್ಲ ಕಲಾವತಿ

      ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕಲಾವತಿ ಅವರು ಯಾವುದೇ ಪ್ರತಿಕ್ರಿಯೆಯನ್ನು ಇನ್ನೂ ನೀಡಿಲ್ಲ. ಆದರೆ ಅವರನ್ನು ಈಗಾಗಲೇ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಲಾಗಿದೆ. ಸರ್ಕಾರದಿಂದ ನೌಕರಿಯ ಭರವಸೆ ಪಡೆದಿರುವ ಅವರು ಚುನಾವಣೆ ಅಖಾಡಕ್ಕೆ ಇಳಿದು ಅದನ್ನು ಕಳೆದುಕೊಳ್ಳುತ್ತಾರಾ? ಅಥವಾ ಚುನಾವಣೆ ಎದುರಿಸುತ್ತಾರಾ?

      ರಂಗೇರಿದೆ ಮಂಡ್ಯ ರಾಜಕೀಯ

      ರಂಗೇರಿದೆ ಮಂಡ್ಯ ರಾಜಕೀಯ

      ಸುಮಲತಾ ಅಂಬರೀಶ್ ಅವರಿಂದಾಗಿ ಈಗಾಗಲೇ ಮಂಡ್ಯದ ರಾಜಕೀಯ ಕಣ ರಂಗೇರಿದೆ. ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ತಪ್ಪಿದ್ದು, ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಎದುರು ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಈಗ ಕಲಾವತಿ ಅವರು ಸಹ ಕಣಕ್ಕಿಳಿಯುವ ಮೂಲಕ ರಾಜಕೀಯನ್ನು ಇನ್ನೂ ರಂಗೇರಿಸಿದ್ದಾರೆ.

      ಬಿಜೆಪಿ ಪಕ್ಷವೂ ಸುಮಲತಾ ಅವರಿಗೆ ಗಾಳ ಹಾಕಿದೆ

      ಬಿಜೆಪಿ ಪಕ್ಷವೂ ಸುಮಲತಾ ಅವರಿಗೆ ಗಾಳ ಹಾಕಿದೆ

      ಬಿಜೆಪಿ ಪಕ್ಷವೂ ಸುಮಲತಾ ಅಂಬರೀಶ್ ಅವರನ್ನು ಸೆಳೆಯುವ ಸಾಧ್ಯತೆ ಇದ್ದು, ಸುಮಲತಾ ಅವರು ಬಿಜೆಪಿಯಿಂದ ಚುನಾವಣೆ ಎದುರಿಸುತ್ತಾರಾ ಎಂದು ಕಾದು ನೋಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+