100 ಜಾನುವಾರುಗಳನ್ನು ರಕ್ಷಿಸಿದ ಮಂಡ್ಯ ಪೊಲೀಸರು

Subscribe to Oneindia Kannada

ಮಂಡ್ಯ, ಏಪ್ರಿಲ್ 11: ಮಂಡ್ಯದ ಪೊಲೀಸರು 100ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಇಲ್ಲಿನ ಗೋದಾಮೊಂದರಲ್ಲಿ ಈ ಜಾನುವಾರುಗಳನ್ನು ಅಕ್ರಮವಾಗಿ ಹಿಡಿದಿಡಲಾಗಿತ್ತು.

ಸರಕಾರೇತರ ಸಂಸ್ಥೆಯೊಂದರ ಸಹಾಯದೊಂದಿಗೆ ಗೋದಾಮಿನ ಮೇಲೆ ದಾಳಿ ಮಾಡಿ ಪೊಲೀಸರು 100 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದರಲ್ಲಿ ಗೋವುಗಳೂ ಸೇರಿವೆ.

ಈ ಗೋವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಈ ಕುರಿತು ಪ್ರಥಮ ವರ್ತಮಾನ ವರದಿ ದಾಖಲಾಗಿದೆ. ಈ ಗೋವು ಸಾಗಾಟದೆ ಹಿಂದೆ ಯಾರಿದ್ದಾರೆ? ಇದರಲ್ಲಿ ಯಾರೆಲ್ಲಾ ಪಾಲ್ಗೊಂಡಿದ್ದಾರೆ ಎನ್ನುವುದು ತನಿಖೆಯ ನಂತರ ತಿಳಿದು ಬರಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With the help of a NGO Mandya Police rescued 100 cattle, which kept illegally in a godown, allegedly meant for slaughter. An FIR registered regarding the case.
Please Wait while comments are loading...