ಮಂಡ್ಯದಲ್ಲಿ ಆಪರೇಷನ್ ಸೋನಾ, ಒಟ್ಟು 10 ಕಳ್ಳ-ಕಳ್ಳಿಯರ ಬಂಧನ

Posted By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಡಿಸೆಂಬರ್ 23: ಜಾತ್ರೆ ಸೇರಿದಂತೆ ಜನಜಂಗುಳಿಯ ಪ್ರದೇಶದಲ್ಲಿ ಕೈಚಳಕ ತೋರಿ ಮಹಿಳೆಯರ ಮಾಂಗಲ್ಯ ಸರ ಸೇರಿದಂತೆ ಚಿನ್ನಾಭರಣ ದೋಚುತ್ತಿದ್ದ ನಾಲ್ವರು ಕಳ್ಳಿಯರು ಸೇರಿದಂತೆ ಹತ್ತು ಮಂದಿಯನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 24 ಲಕ್ಷ ಮೌಲ್ಯದ 850 ಗ್ರಾಂ ಚಿನ್ನಾಭರಣ, ಎರಡು ಟಾಟಾ ಸುಮೋ, ನಾಲ್ಕು ಕಟರ್, ಆರು ಮೊಬೈಲ್, ಒಂದು ಪಾಕೇಟ್ ಕ್ಯಾಲೆಂಡರ್‍ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಆರೋಪಿಗಳು ಇದುವರೆಗೆ ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ವಿವಿಧೆಡೆ 20 ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

Mandya police have arrested ten persons, 6 men and 4 women in charges of dacoity

ಬೆಳವಾಡಿ ಗ್ರಾಮದ ಶಿವಮ್ಮ ಕೋಂ ಸೋಮೇಶ (30), ಹಳ್ಳಿ ಬೋಗಾದಿ ಗ್ರಾಮದ ಅಶ್ವಿನಿ ಕೋಂ ಪ್ರತಾಪ್ (23), ಭಾಗ್ಯ ಕೋಂ ನಂಜುಂಡ (48), ಲಕ್ಷ್ಮಮ್ಮ ಕೋಂ ಕೃಷ್ಣಪ್ಪ (60), ಸೋಮೇಶ್ ಬಿನ್ ನಾಗರಾಜು (38), ವೆಂಕಟೇಶ್ ಬಿನ್ ಲೇ. ಕೃಷ್ಣ (46) ಪ್ರಕಾಶ್ ಚಂದ್‍ಜೈನ್ ಲೆ. ಅಸ್ಥಿಮಲ್ (45), ನಂಜುಂಡ ಬಿನ್ ಮುನಿಸ್ವಾಮಿ (50), ಲೋಕೇಶ್ ಬಿನ್ ರಾಜಪ್ಪ (40), ಕೆ.ಪ್ರಸಾದ್ ಬಿನ್ ಕೃಷ್ಣ (26), ವೆಂಕಟೇಶ್ ಬಿನ್ ದೊಡ್ಡಯ್ಯ (42) ಬಂಧಿತ ಕಳ್ಳರು ಎಂದು ಗುರುತಿಸಲಾಗಿದೆ.

ಇವರೆಂತಹ ಖತರ್ನಾಕ್ ಗಳೆಂದರೆ, ತಮ್ಮ ಬಳಿ ಪ್ಯಾಕೆಟ್ ಕ್ಯಾಲೆಂಡರನ್ನಿಟ್ಟುಕೊಂಡು ಅದರಲ್ಲಿ ಎಲ್ಲೆಲ್ಲೆ ಜಾತ್ರೆಗಳು ನಡೆಯುತ್ತವೆ ಎಂಬುದನ್ನು ತಿಳಿದುಕೊಂಡು ಅಲ್ಲಿಗೆ ತೆರಳಿ ತಮ್ಮ ಕೈಚಳಕ ತೋರುತ್ತಿದ್ದರು ಎನ್ನುವುದು ಪೊಲೀಸರು ನಡೆಸಿದ ವಿಚಾರಣೆಯಿಂದ ತಿಳಿದು ಬಂದಿದೆ.

ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಹಾಗೂ ಅಪರ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಅವರ ನೇತೃತ್ವದ ಡಿವೈಎಸ್ ಪಿ ಮಾರ್ಗದರ್ಶನದಲ್ಲಿ ಆಪರೇಷನ್ ಸೋನಾ ಎಂಬ ಹೆಸರಿನಡಿ ವೃತ್ತ ನಿರೀಕ್ಷಕ ಶ್ರೀಕಾಂತ್, ನವೀನ್, ಗಂಗಾಧರ್ ಸಬ್‍ ಇನ್ಸ್ ಪೆಕ್ಟರ್ ಶ್ರೀಧರ್ ಹಾಗೂ ಸಿಬ್ಬಂದಿ ಸುಮಾರು ಒಂದು ತಿಂಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mandya police have arrested ten persons - six men and four women - on charges of dacoity. Police also recovered 850 grams of #gold worth Rs 24 lakhs. The modus operandi of the accused was to attack lone women and besiege deserted houses.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ