ಚಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ: ಶಾಸಕ ಸುರೇಶ್ ಗೌಡ

Recommended Video

      By-elections : ಕೈ ನಾಯಕನನ್ನ ತರಾಟೆಗೆ ತೆಗೆದುಕೊಂಡ ಜೆಡಿಎಸ್ ನಾಯಕ | Oneindia Kannada

      ಮಂಡ್ಯ, ಅಕ್ಟೋಬರ್ 10: ಮಂಡ್ಯ ರಾಜಕಾರಣದಲ್ಲಿ ಉಪಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಕಿತ್ತಾಟ ತಾರಕಕ್ಕೇರುವ ಸೂಚನೆಗಳು ಕಾಣಿಸುತ್ತಿವೆ.

      ಮಾಜಿ ಶಾಸಕ, ಕಾಂಗ್ರೆಸ್‌ನ ಚಲುವರಾಯಸ್ವಾಮಿ ಮತ್ತು ಸಚಿವ ಸಿ.ಎಸ್. ಪುಟ್ಟರಾಜು ನಡುವೆ ಮಾತಿನ ಯುದ್ಧ ನಡೆದಿತ್ತು. ಆಗ ಸೋತು ಹೋಗಿರುವ ಚಲುವರಾಯಸ್ವಾಮಿ ಸತ್ತ ಕುದುರೆ ಇದ್ದಂತೆ. ಸತ್ತ ಕುದುರೆಗಳೆಲ್ಲ ಈಗ ಮಾತನಾಡುತ್ತಿವೆ ಎಂದು ಪುಟ್ಟರಾಜು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಚಲುವರಾಯಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದರು.

      ನಾಗಮಂಗಲ ಕ್ಷೇತ್ರದಲ್ಲಿ ಚಲುವರಾಯಸ್ವಾಮಿ ಅವರನ್ನು 50 ಸಾವಿರಕ್ಕೂ ಅಧಿಕ ಅಂತರದ ಮತಗಳಿಂದ ಸೋಲಿಸಿದ್ದ ಸುರೇಶ್ ಗೌಡ ಕೂಡ ಈಗ ಅವರ ವಿರುದ್ಧ ಹರಿಹಾಯ್ದಿದ್ದಾರೆ.

      ಡೆಡ್ ಅಲ್ಲ, ಕ್ಲೋಸ್ಡ್ ಹಾರ್ಸ್

      ಡೆಡ್ ಅಲ್ಲ, ಕ್ಲೋಸ್ಡ್ ಹಾರ್ಸ್

      ನಿನ್ನೆ ಮೊನ್ನೆ ಸತ್ತಿದ್ದರೆ ಅದನ್ನು ಡೆಡ್ ಹಾರ್ಸ್ (ಸತ್ತ ಕುದುರೆ) ಎಂದು ಕರೆಯಬಹುದಾಗಿತ್ತು. ಆದರೆ, ಚಲುವರಾಯಸ್ವಾಮಿ 'ಕ್ಲೋಸ್ಡ್ ಹಾರ್ಸ್' ಎಂದು ಸುರೇಶ್ ಗೌಡ ಟೀಕಿಸಿದ್ದಾರೆ.

      ಚಲುವರಾಯಸ್ವಾಮಿ ಅವರ ರಾಜಕೀಯ ಬದುಕು ಯಾವಾಗಲೋ ಮುಗಿದುಹೋಗಿದೆ. ಹೀಗಾಗಿ ಅವರು ಸತ್ತ ಕುದುರೆಯಲ್ಲ. ಯಾವಾಗಲೋ ಅಂತ್ಯ ಕಂಡಿರುವ ಕುದುರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

      ರಾಜಕೀಯ ವ್ಯಭಿಚಾರಿ

      ರಾಜಕೀಯ ವ್ಯಭಿಚಾರಿ

      ಚಲುವರಾಯಸ್ವಾಮಿ ಜನರು ಕೊಟ್ಟ ಅಧಿಕಾರವನ್ನು ಮಾರಾಟ ಮಾಡಿಕೊಂಡಿದ್ದರು. ಒಂದು ಪಕ್ಷದಲ್ಲಿದ್ದು ಎದುರಾಳಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. 2013ರಲ್ಲಿ ರಮ್ಯಾ ಎದುರು ಪುಟ್ಟರಾಜು ಸೋಲು ಕಾಣಲು ಚಲುವರಾಯಸ್ವಾಮಿ ಅವರೇ ಕಾರಣ. ಬಳಿಕ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜತೆ ಸೇರಿಕೊಂಡರು. ಇದನ್ನೇ ರಾಜಕೀಯ ವ್ಯಭಿಚಾರ ಎಂದು ಕರೆಯುವುದು. ಇದು ಸುಳ್ಳು ಎಂದಾದರೆ ಧರ್ಮಸ್ಥಳದಲ್ಲಿ ಆಣೆ ಮಾಡಲಿ. ಅವರಿಗೆ ಅಷ್ಟು ಸಾಮರ್ಥ್ಯವಿದ್ದರೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದರು.

      ಪುಟ್ಟರಾಜು ಹೇಳಿದ್ದೇನು.

      ಪುಟ್ಟರಾಜು ಹೇಳಿದ್ದೇನು.

      ಚಲುವರಾಯಸ್ವಾಮಿ ಅವರನ್ನು ಜನರು ಸೋಲಿಸಿದ್ದೇ ಅವರು ಬಾಯಿಮುಚ್ಚಿಕೊಂಡು ಇರಲಿ ಎಂದು. ಆದರೆ ಸತ್ತ ಕುದುರೆಗಳು ಮಾತನಾಡುವ ಹಾಗಾಗಿದೆ, ಜನರು ನೀಡಿದ ತೀರ್ಪಿನಿಂದಾಗಿ ಅನಿವಾರ್ಯವಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಮಹಾನಾಯಕರು ತೀರ್ಮಾನ ಮಾಡಿದ್ದಾರೆ. ನಾಯಕರ ತೀರ್ಮಾನಗಳಿಗೆ ನಾನೂ ಬದ್ಧನಾಗಿರಬೇಕು, ಚಲುವರಾಯಸ್ವಾಮಿ ಅವರೂ ಬದ್ಧರಾಗಿರಬೇಕು ಎಂದು ಸಿ.ಎಸ್. ಪುಟ್ಟರಾಜು ಹೇಳಿದ್ದರು.

      ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಸ್ವಾಮಿ

      ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಸ್ವಾಮಿ

      ಯೋಗ್ಯತೆ ಇಲ್ಲದಿದ್ದರೂ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದು ಫಲಾನುಭವಿಯಾಗಿದ್ದಾನೆ. ಅಂತವನು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಚಲುವರಾಯಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.

      ನೀನು ಹೇಗೆ ಗೆದ್ದು ಬಂದಿದ್ದೀಯ ಎಂದು ದೇವೇಗೌಡರು ಹೇಳಿದ್ದರು. ಈಗ ಮಂಡ್ಯದಲ್ಲಿ ಜೆಡಿಎಸ್ ಗೆದ್ದಿರಬಹುದು. ಈಗಲೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಹಾಕಿದರೆ ನೇರ ಪೈಪೋಟಿ ಕೊಡುವ ಶಕ್ತಿ ಇದೆ ಎಂದು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+