ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಚುನಾವಣೆ: ಬಹಿರಂಗವಾಗಿ ಬಿಜೆಪಿ ಬೆಂಬಲಯಾಚಿಸಿದ ಸುಮಲತಾ

|
Google Oneindia Kannada News

ಮಂಡ್ಯ, ಮಾರ್ಚ್ 23: ದಿನದಿಂದ ದಿನಕ್ಕೆ ಮಂಡ್ಯ ಲೋಕಸಭಾ ಚುನಾವಣೆಯ ಕಾವು ಏರುತ್ತಿದ್ದು, ಧರ್ಮಯುದ್ದ ಜಯಿಸಬಹುದು ಎನ್ನುವ ನಂಬಿಕೆ ನನಗಿದೆ, ಆದರೆ ಅಡ್ಡದಾರಿಯಲ್ಲಿ ಬಂದರೆ ಏನು ಮಾಡುವುದು ಎಂದು ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅಸಾಹಯಕತೆ ತೋಡಿಕೊಂಡಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಭಾರತಿನಗರ ವ್ಯಾಪ್ತಿಯಲ್ಲಿ ಮತಯಾಚಿಸುತ್ತಾ ಸುಮಲತಾ, ನಾನು ಒಬ್ಬಂಟಿಯಾಗಿದ್ದೇನೆ. ನನ್ನ ಹೋರಾಟಕ್ಕೆ ನೀವೆಲ್ಲಾ ನನಗೆ ಬೆಂಬಲ ಸೂಚಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ, ಬಿಜೆಪಿ ನನ್ನನ್ನು ಬೆಂಬಲಿಸಿದರೆ ನನಗೆ ಇನ್ನಷ್ಟು ಬಲಸಿಕ್ಕಂತಾಗುತ್ತದೆ ಎಂದು ಹೇಳಿದ್ದಾರೆ.

ಮಂಡ್ಯದಿಂದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಆದರೆ ನೆಪಕ್ಕಷ್ಟೆ ಮಂಡ್ಯದಿಂದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಆದರೆ ನೆಪಕ್ಕಷ್ಟೆ

ಮೇಲುಕೋಟೆ ಶಾಸಕರಾಗಿದ್ದ ದಿ, ಪುಟ್ಟಣ್ಣಯ್ಯ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿದ್ದ ಸುಮಲತಾ, ನಾನು ಸದ್ಯದಲ್ಲೇ ಬಿಜೆಪಿ ನಾಯಕರನ್ನು ಭೇಟಿಯಾಗಿ ಅವರ ಬೆಂಬಲವನ್ನು ಕೇಳುತ್ತೇನೆ ಎಂದು ಹೇಳಿದ್ದಾರೆ.

Mandya Loksabha poll: Independent candidate Sumalatha seeking BJP support

ನಾನು ನಾಮಪತ್ರ ಸಲ್ಲಿಸುವ ದಿನ ಮಂಡ್ಯ ಮತ್ತು ಮೈಸೂರಿನಲ್ಲಿ ಕೇಬಲ್ ಪ್ರಸಾರ ಸ್ಥಗಿತಗೊಳಿಸಿದ್ದ ವಿಚಾರ ನಿಮಗೆಲ್ಲಾ ತಿಳಿದೇ ಇದೆ. ನೇರವಾಗಿ ಬಂದರೆ ಜಯಿಸಬಹುದು, ಹಿಂಬಾಗಿಲಿನಿಂದ ಬಂದರೆ ಹೇಗೆ ಯುದ್ದ ಮಾಡುವುದು ಎಂದು ಜೆಡಿಎಸ್ ಪಕ್ಷವನ್ನು ಸುಮಲತಾ ದೂರಿದ್ದಾರೆ.

ಮಂಡ್ಯ: ಸುಮಲತಾಗೆ ಬೆಂಬಲ ನೀಡಿದ ಕಾಂಗ್ರೆಸ್ಸಿಗರ ಉಚ್ಛಾಟನೆ ಮಂಡ್ಯ: ಸುಮಲತಾಗೆ ಬೆಂಬಲ ನೀಡಿದ ಕಾಂಗ್ರೆಸ್ಸಿಗರ ಉಚ್ಛಾಟನೆ

ನಮ್ಮ ಅಭ್ಯರ್ಥಿಯ ನಾಮಪತ್ರಿಕೆ ಸಲ್ಲಿಕೆ ಹೇಗೆ ಇರುತ್ತೆ ನೋಡಿ, ಇಂತಹ ಹತ್ತರಷ್ಟು ಜನರನ್ನು ನಾನೂ ಸೇರಿಸಬಲ್ಲೆ ಎಂದು ಸುಮಲತಾ ನಾಮಪತ್ರ ಸಲ್ಲಿಸಿದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು.

ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದ್ದ ಮಂಡ್ಯ ಕಾಂಗ್ರೆಸ್ ಮುಖಂಡರನ್ನು ಕೆಪಿಸಿಸಿಯು ಉಚ್ಛಾಟನೆ ಮಾಡಿತ್ತು. ಸುಮಲತಾ ಜೊತೆ ಬಹಿರಂಗ ಸಮಾವೇಶಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಣಿಸಿಕೊಂಡಿದ್ದರು. ಇದರ ಬಗ್ಗೆ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

English summary
Loksabha elections 2019 - High voltage Mandya constituency: Independent candidate Sumalatha seeking BJP support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X