ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ-ನಿಖಿಲ್ ಹಾವು ಏಣಿ ಆಟ: ಊಹೆಗೂ ನಿಲುಕದ ಮಂಡ್ಯ ಫಲಿತಾಂಶ

|
Google Oneindia Kannada News

Recommended Video

Lok Sabha Elections 2019: ಮಂಡ್ಯದಲ್ಲಿ ನಿಖಿಲ್ vs ಸುಮಲತಾ | ಹಾವು-ಏಣಿ ಆಟ

ಮಂಡ್ಯ ಫಲಿತಾಂಶ ಪ್ರತಿ ಕ್ಷಣವೂ ಕುತೂಹಲ ಮೂಡಿಸುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಮತಗಳ ಅಂತರ ನೋಡಿ ಯಾರು ಗೆಲ್ಲಬಹುದು ಎಂಬ ನಿರ್ಧಾರಕ್ಕೆ ಈಗಾಗಲೇ ಬಂದಾಗಿದೆ. ಆದ್ರೆ, ಮಂಡ್ಯದಲ್ಲಿ ಮಾತ್ರ ಯಾರೂ ಗೆಲ್ಲಬಹುದು ಎಂಬುದರ ಬಗ್ಗೆ ಸುಳಿವು ಕೂಡ ಸಿಕ್ತಿಲ್ಲ.

ಒಂದು ಹಂತದಲ್ಲಿ ಸುಮಲತಾ ಮುನ್ನಡೆ ಸಾಧಿಸಿದರೇ, ಮತ್ತೊಂದು ಹಂತದಲ್ಲಿ ನಿಖಿಲ್ ಕುಮಾರ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ. ಈ ಕಡೆ ಮತಗಳ ಅಂತರವೂ ಅಧಿಕವಾಗುತ್ತಿಲ್ಲ. ಕೇವಲ ನೂರು, ಇನ್ನೂರು, ಮುನ್ನೂರು ಹೀಗೆ ಕೆಲವೇ ಮತಗಳ ಅಂತರ ಮಾತ್ರ ಇಲ್ಲಿ ಕಂಡು ಬರುತ್ತಿದೆ.

ಮಂಡ್ಯ ಫಲಿತಾಂಶ LIVE: 2ನೇ ಸುತ್ತಿನಲ್ಲಿ ಸುಮಲತಾಗೆ ಮುನ್ನಡೆಮಂಡ್ಯ ಫಲಿತಾಂಶ LIVE: 2ನೇ ಸುತ್ತಿನಲ್ಲಿ ಸುಮಲತಾಗೆ ಮುನ್ನಡೆ

ಸದ್ಯ ಮಂಡ್ಯದ ಸ್ಥಿತಿ ನೋಡುತ್ತಿದ್ದರೇ ಇದು ಯಾವ ಸಿನಿಮಾಗಿಂತ ಕಮ್ಮಿ ಇಲ್ಲ ಅನಿಸುತ್ತಿದೆ. ಅಂತಿಮ ಹಂತದವರೆಗೂ ಸ್ಪಷ್ಟವಾದ ಫಲಿತಾಂಶ ಸಿಗುವುದು ಕಷ್ಟವಾಗಬಹುದು. ಹಾಗಿದ್ರೆ, ಮಂಡ್ಯದಲ್ಲಿ ಬೆಳಿಗ್ಗೆಯಿಂದ ಮತ ಎಣಿಕೆ ಹೇಗಿತ್ತು? ಸುಮಲತಾಗೆ ಎಷ್ಟು ಮತ ಸಿಕ್ಕಿವೆ? ನಿಖಿಲ್ ಕುಮಾರ್ ಗೆ ಎಷ್ಟು ಮತಗಳು ಸಿಕ್ಕಿವೆ ಎಂಬ ವಿವರ ಮುಂದೆ ಓದಿ.....

ಅಂಚೆ ಮತಗಳಲ್ಲಿ ಸುಮಲತಾ ಮುನ್ನಡೆ

ಅಂಚೆ ಮತಗಳಲ್ಲಿ ಸುಮಲತಾ ಮುನ್ನಡೆ

ಮಂಡ್ಯದಲ್ಲಿ ಮತ ಎಣಿಕೆ ಆರಂಭವಾದಾಗ ಮೊದಲು ಅಂಚೆ ಮತಗಳನ್ನ ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಈ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿದರು. ಹೀಗೆ ಆರಂಭಿಕ ಮುನ್ನಡೆ ಸಾಧಿಸಿದ ಸುಮಲತಾಗೆ ಇದು ಆತ್ಮವಿಶ್ವಾಸ ಹೆಚ್ಚಿಸಿತ್ತು. ಆದ್ರೆ, ಈ ಆತ್ಮ ವಿಶ್ವಾಸ ಹೆಚ್ಚು ಸಮಯ ಉಳಿಯಲಿಲ್ಲ.

ಲೋಕಸಭೆ ಚುನಾವಣೆ 2019 ಫಲಿತಾಂಶ LIVE : 331 ಕ್ಷೇತ್ರಗಳಲ್ಲಿ NDA ಮುಂದೆಲೋಕಸಭೆ ಚುನಾವಣೆ 2019 ಫಲಿತಾಂಶ LIVE : 331 ಕ್ಷೇತ್ರಗಳಲ್ಲಿ NDA ಮುಂದೆ

ಮೊದಲ ಸುತ್ತಿನಲ್ಲಿ ನಿಖಿಲ್ ಮುನ್ನಡೆ

ಮೊದಲ ಸುತ್ತಿನಲ್ಲಿ ನಿಖಿಲ್ ಮುನ್ನಡೆ

ಸುಮಲತಾ ಅವರಿಗೆ ಅಂಚೆ ಮತಗಳಲ್ಲಿ ಮುನ್ನಡೆ ಸಿಕ್ಕ ಖುಷಿ ಹೆಚ್ಚು ಸಮಯ ಇರಲಿಲ್ಲ. ಯಾಕಂದ್ರೆ ಮೊದಲ ಸುತ್ತ ಮುಗಿಯುಷ್ಟರಲ್ಲಿ ನಿಖಿಲ್ ಕುಮಾರ್ ಸ್ವಾಮಿ ಮುನ್ನಡೆ ಸಾಧಿಸಿದರು. ಮೊದಲು 12 ಮತಗಳ ಅಂತರ ಸಾಧಿಸಿದರು. ನಂತರ 50 ಮತಗಳ ಅಂತರ ಸಾಧಿಸಿದರು. ಆಮೇಲೆ 1050 ಮತಗಳವರೆಗೂ ಅಂತರ ಕಾಯ್ದುಕೊಂಡರು.

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮುಂದೆ ಸಾಗಿದ ಸಿಎಂ ಪುತ್ರ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮುಂದೆ ಸಾಗಿದ ಸಿಎಂ ಪುತ್ರ

ಮೊದಲ ಸುತ್ತಿನಲ್ಲಿ 1000ಕ್ಕೂ ಅಧಿಕ ಮತಗಳ ಅಂತರ ಕಾಯ್ದುಕೊಂಡ ನಿಖಿಲ್ ಮೇಲುಕೋಟೆ ವಿಧಾನ ಕ್ಷೇತ್ರ ಮತಎಣಿಕೆ ಬಳಿಕ 1902 ಮತಗಳ ಅಂತರ ಪಡೆದುಕೊಂಡರು. ಆದ್ರೆ, ಈ ಅಂತರವನ್ನ ಹೆಚ್ಚಿಸಿಕೊಳ್ಳಲು ನಿಖಿಲ್ ಕುಮಾರ್ ಹರಸಾಹಸ ಪಡುತ್ತಿದ್ದರು. ಯಾಕಂದ್ರೆ, ಅಂತರ ಕೇವಲ 1000 ಸಾವಿರ ಆಸುಪಾಸು ಉಳಿದುಕೊಂಡಿತ್ತು. 10.05ರ ಸಮಯದಲ್ಲಿ ನಿಖಿಲ್ ಗೆ 36,477 ಮತಗಳು ಹಾಗೂ ಸುಮಲತಾಗೆ 34,575 ಮತಗಳು ಸಿಕ್ಕಿತ್ತು.

ಹಾವು-ಏಣಿ ಆಟ ಆರಂಭ

ಹಾವು-ಏಣಿ ಆಟ ಆರಂಭ

ನಿಖಿಲ್ 1900ಕ್ಕೂ ಹೆಚ್ಚು ಮತಗಳು ಅಂತರ ಕಾಯ್ದುಕೊಂಡಿದ್ದರು ಎಂದು ಖುಷಿ ಪಡುವಷ್ಟರಲ್ಲಿ ಮತ್ತೆ ಸುಮಲತಾ ಮುನ್ನಡೆ ಸಾಧಿಸಿದರು. 130 ಮತಗಳ ಮುನ್ನಡೆ ಸಾಧಿಸಿ ಮತ್ತೆ ಸಿಎಂ ಪುತ್ರನಿಗೆ ಪೈಪೋಟಿ ನೀಡಿದರು. ಹೀಗೆ ಬೆಳಿಗ್ಗೆ 10.50ರ ವರೆಗೂ ಹಿನ್ನಡೆ-ಮುನ್ನಡೆ ಎಂದೇ ಹಾವು ಏಣಿ ಆಟ ನಡೆಯುತ್ತಿದೆ. ಸದ್ಯಕ್ಕೆ ಸುಮಲತಾ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತೀವ್ರ ಪೈಪೋಟಿ, ಗೆಲುವು ಸುಲಭವಲ್ಲ

ತೀವ್ರ ಪೈಪೋಟಿ, ಗೆಲುವು ಸುಲಭವಲ್ಲ

ಸದ್ಯಕ್ಕೆ ಮಂಡ್ಯ ಲೋಕಸಭೆ ಚುನಾವಣೆಯ ಮತ ಎಣಿಕೆ ನೋಡಿದ್ರೆ, ಇಬ್ಬರಿಗೂ ಜಯ ಸುಲಭವಾಗಿಲ್ಲ. ಕ್ಷಣ ಕ್ಷಣಕ್ಕೂ, ಹಂತ ಹಂತಕ್ಕೂ ಮತಗಳ ಅಂತರದ ಸಂಖ್ಯೆ ಬದಲಾಗುತ್ತಿದೆ. ನಿಖಿಲ್ ಮತ್ತು ಸುಮಲತಾ ಹಿನ್ನಡೆಯಿಂದ ಮುನ್ನಡೆಗೆ, ಮುನ್ನಡೆಯಿಂದ ಹಿನ್ನಡೆಗೆ ಜಿಗಿಯುತ್ತಿದ್ದಾರೆ. ಬಹುಶಃ ಮಧ್ಯಾಹ್ನದ ವೇಳೆಗಾದರೂ ಮಂಡ್ಯ ಫಲಿತಾಂಶದ ಬಗ್ಗೆ ಒಂದು ಸ್ಪಷ್ಟ ನಿರ್ಣಯಕ್ಕೆ ಬರಬಹುದು.

English summary
Mandya Lok Sabha (MP) Election Result 2019: Sumalatha Ambarish vs Nikhil Kumarasway fight will be decided today. Sumalatha gets initial lead at morning, after that nikhil gets lead in Postal voting count, Final table how the parties fared in the results declared on May 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X