ಮಂಡ್ಯ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ಗೆಲುವು ಗ್ಯಾರಂಟಿ?
ಮಂಡ್ಯ ಅಂದ್ರೆ ಇಂಡಿಯಾ ಕೂಡ ಒಮ್ಮೆ ತಿರುಗಿ ನೋಡುತ್ತದೆ. ಯಾಕಂದ್ರೆ ಮಂಡ್ಯದಲ್ಲಿ ಚುನಾವಣೆ ನಡೆಯುತ್ತೆ ಅಂದ್ರೆ ಅಲ್ಲಿನ ರಾಜಕೀಯ ಜಿದ್ದು ಇಡೀ ಭಾರತವನ್ನು ಮತ್ತೊಮ್ಮೆ, ಮೊಗದೊಮ್ಮೆ ಸೆಳೆದುಬಿಡುತ್ತೆ. ಹೀಗೆ ಮಂಡ್ಯ ಅಖಾಡ ರಂಗೇರಿರುವ ಸಮಯದಲ್ಲೇ ಈಗ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರಿಗೂ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೂ ನೇರ ಹಣಾಹಣಿ ಏರ್ಪಟ್ಟಿತ್ತು. ಹಾಗಾದ್ರೆ ಈ ಜಿದ್ದಾಜಿದ್ದಿನಲ್ಲಿ ಗೆಲ್ಲುವುದು ಯಾರು?
2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. 2019ರಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಜೆಡಿಎಸ್ & ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆಗಿದ್ದರೆ ಬಿಜೆಪಿ ಅಭ್ಯರ್ಥಿ ಹಾಕದೆ ಪಕ್ಷೇತರರಾಗಿ ನಿಂತ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಇದೀಗ ಜೆಡಿಎಸ್ & ಬಿಜೆಪಿ ಮಧ್ಯೆ ಮೈತ್ರಿ ಫಿಕ್ಸ್ ಆಗಿದ್ದು, ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಎರಡೂ ಪಕ್ಷಗಳ ಮುಖಂಡರು ಕೆಲಸ ಮಾಡಿದ್ದರು. ಹೀಗಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಗೆಲ್ಲುತ್ತಾರಾ? ಎಂಬ ಕುತೂಹಲ ಮೂಡಿದೆ.

ಎಚ್.ಡಿ. ಕುಮಾರಸ್ವಾಮಿ ಗೆಲುವು ಗ್ಯಾರಂಟಿ?
ಈಗಿನ ಲೆಕ್ಕಾಚಾರ ನೋಡುವುದಾದರೆ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಬಹುತೇಕ ಕಷ್ಟ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಂದಿ ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿಯೇ ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಗೆಲುವು ಗ್ಯಾರಂಟಿ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಆದರೆ ಇವು ಅಂತೆ & ಕಂತೆಗಳು ಮಾತ್ರ. ಹೀಗಾಗಿ ಪಕ್ಕಾ ಫಲಿತಾಂಶ ಜೂನ್ 4 ರಂದು ಹೊರಬೀಳಲಿದೆ. ಅದೇ ದಿನದಂದು ಗೆಲುವು ಯಾರಿಗೆ? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ಮಂಡ್ಯ ಕ್ಷೇತ್ರದ ಇತಿಹಾಸ ಹೇಗಿದೆ?
1951ರಲ್ಲಿ ಮೊದಲ ಬಾರಿಗೆ ಮಂಡ್ಯ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಆಗ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆದ್ದಿದ್ದರು. ಹೀಗೆ 1980ರ ತನಕ ಸತತವಾಗಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿತ್ತು. ಆದರೆ 1984 ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷಕ್ಕೆ ಸೋಲು ತೋರಿಸಿದ್ದರು. ಆ ನಂತರ 1996ರ ತನಕ ಮತ್ತೆ ಕಾಂಗ್ರೆಸ್ ಗೆದ್ದಿತ್ತು. 1998 ರಲ್ಲಿ ಮಂಡ್ಯ ಕ್ಷೇತ್ರದಲ್ಲಿ ಜನತಾ ದಳ ಗೆದ್ದು ಬೀಗಿತ್ತು. 1999 ಮತ್ತು 2004 ರಲ್ಲಿ ಮಂಡ್ಯದಿಂದ ರೆಬೆಲ್ ಸ್ಟಾರ್ ಅಂಬರೀಶ್ ಅವರು ಗೆದ್ದರು. 2009 ರಲ್ಲಿ ಮತ್ತೆ ಜನತಾ ದಳ ಗೆದ್ದು ಬೀಗಿತ್ತು.
2013 ರಲ್ಲಿ ರಮ್ಯಾ ಕಾಂಗ್ರೆಸ್ ಪಕ್ಷದಿಂದ, 2014 ರಲ್ಲಿ ಸಿ.ಎಸ್. ಪುಟ್ಟರಾಜು ಜನತಾ ದಳ ಅಭ್ಯರ್ಥಿಯಾಗಿ ಗೆದ್ದರು. 2018ರಲ್ಲಿ ಉಪಚುನಾವಣೆ ನಡೆದಾಗ ಕೂಡ ಜೆಡಿಎಸ್ ಗೆದ್ದಿತ್ತು. ಆದರೆ 2019ರಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರು. ಹೀಗೆ ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಎಚ್.ಡಿ. ಕುಮಾರಸ್ವಾಮಿ ಅವರು ಗೆಲ್ಲುತ್ತಾರಾ..? ಅಥವಾ ಸ್ಟಾರ್ ಚಂದ್ರು ಅವರ ಸ್ಟಾರ್ ಕೈಹಿಡಿಯುತ್ತಾ? ಅನ್ನೋನದನ್ನ ಕಾದು ನೋಡಬೇಕಿದೆ.












Click it and Unblock the Notifications